ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿಯಿಂದ ಯಡಿಯೂರಪ್ಪ ಹಣೆಬರಹ ನಿರ್ಧಾರ ಇಂದು

By Mrutyunjaya Kalmat
|
Google Oneindia Kannada News

BJP to announce the fate of Yeddyurappa today
ಬೆಂಗಳೂರು, ನ. 24 : ಭೂ ಹಗರಣದ ಸುಳಿಗೆ ಸಿಲುಕಿ ಅಧಿಕಾರ ಕಳೆದುಕೊಳ್ಳುವ ಅಂಚಿಗೆ ತಲುಪಿರುವ ಮುಖ್ಯಮಂತ್ರಿ ಯಡಿಯೂರಪ್ಪ ಹೈಕಮಾಂಡ್ ಗೆ ಸೆಡ್ಡು ಹೊಡೆದರೂ ಸದ್ಯಕ್ಕೆ ಬಚಾವ್ ಅಗುವ ಲಕ್ಷಣಗಳು ದಟ್ಟವಾಗಿವೆ. ಈ ಬಗ್ಗೆ ಇಂದು ಬೆಳಗ್ಗೆ 11 ಗಂಟೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ.

ಮಂಗಳವಾರ ತಡರಾತ್ರಿ ಯಡಿಯೂರಪ್ಪ ಅವರೊಂದಿಗೆ ಮಾತುಕತೆ ನಡೆಸಿದ ಬಿಜೆಪಿ ವರಿಷ್ಠರು ಅವರಿಗೆ ಷರತ್ತು ಬದ್ಧ ಜೀವದಾನ ನೀಡಿದ್ದಾರೆ. ಅದರಂತೆ ಈವರೆಗೆ ಸ್ವಚ್ಛಂದವಾಗಿ ವಿಹರಿಸುತ್ತಿದ್ದ ಯಡಿಯೂರಪ್ಪ ಅವರಿಗೆ ಹಲವು ಕಠಿಣ ಕ್ರಮಗಳ ಮೂಲಕ ಮೂಗುದಾರ ತೊಡಿಸಲು ನಿರ್ಧರಿಸಿದ್ದಾರೆ. ಅವರ ಮೇಲಿನ ಭೂ ಹಗರಣಗಳ ತನಿಖೆಗೆ ಪಕ್ಷದ ಪ್ರಮುಖರನ್ನು ಒಳಗೊಂಡು ತನಿಖಾ ಸಮಿತಿ ರಚನೆಯೂ ಇದರಲ್ಲಿದೆ.

ರಾತ್ರಿ 11.30ರಿಂದ ಮಧ್ಯರಾತ್ರಿ 1.30ರ ತನಕ ಎರಡು ಗಂಟೆಗಳ ಕಾಲ ಪಕ್ಷದ ರಾಷ್ಟ್ರಾಧ್ಯಕ್ಷ ನಿತಿನ್ ಗಡ್ಕರಿ, ಹಿರಿಯ ನಾಯಕರಾದ ಅರುಣ್ ಜೈಟ್ಲಿ, ವೆಂಕಯ್ಯ ನಾಯ್ಡು ಜೊತೆ ಸುದೀರ್ಘ ಮಾತುಕತೆ ನಡೆಸಿದ ಯಡಿಯೂರಪ್ಪ ರಾಜಿ ಸೂತ್ರದ ಮೂಲಕ ಕುರ್ಚಿ ಉಳಿಸಿಕೊಂಡಿದ್ದಾರೆ.

ಒಂದು ವೇಳೆ ರಾಜೀನಾಮೆ ಪಡೆದುಕೊಂಡಿದ್ದೆ ಆದಲ್ಲಿ, ಯಡಿಯೂರಪ್ಪ ಪಕ್ಷದ ಹೈಕಮಾಂಡ್ ವಿರುದ್ಧ ತಿರುಗಿ ಬಿದ್ದು ಸೇಡು ತೀರಿಸಿಕೊಳ್ಳಬಹುದು. ಬೆಂಬಲಿಗ ಶಾಸಕರಿಂದ ರಾಜೀನಾಮೆ ಕೊಡಿಸಿ ಸರಕಾರ ಪತನಗೊಳಿಸಬಹುದು. ಚುನಾವಣೆ ಎದುರಾದಲ್ಲಿ ಸ್ವತಂತ್ರ ಪಕ್ಷ ಸ್ಥಾಪಿಸಬಹುದು. ಏಕಕಾಲದಲ್ಲಿ ಬಿಜೆಪಿ ಹಾಗೂ ಪ್ರತಿಪಕ್ಷಗಳ ವಿರುದ್ಧ ಹೋರಾಟ ಆರಂಭಿಸಬಹುದು.

ಯಡಿಯೂರಪ್ಪ ಕುರ್ಚಿ ಉಳಿಸಿಕೊಂಡರೆ ತಮ್ಮ ಮೇಲಿರುವ ಆರೋಪಗಳಿಂದ ಮುಕ್ತರಾಗಲು ಪ್ರಯತ್ನಿಸಬಹುದು. ಪ್ರತಿಪಕ್ಷಗಳ ನಾಯಕರ ಹಗರಣಗಳನ್ನು ಬಯಲಿಗೆಳೆಯಬಹುದು. ಜಿಪಂ, ತಾಪಂ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗಳಿಸಲು ಶ್ರಮಿಸಿ ತಮ್ಮ ಶಕ್ತಿ ಪ್ರದರ್ಶನ ಮಾಡಬಹುದು. ಹೈಕಮಾಂಡ್ ಆಶಯಕ್ಕೆ ತಕ್ಕಂತೆ ಆಡಳಿತ ನಡೆಸಬಹುದು.

English summary
Bharatiya Janatha Party (BJP) national leadership today may announce the fate of Karnataka Chief Minister BS Yeddyurappa, who is facing allegations of land scam, on Wednesday, Nov 24.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X