ಮಠಾಧೀಶರ ಬೆಂಬಲಕ್ಕೆ ಪರಮೇಶ್ವರ ಟೀಕೆ

Parameshwar criticizes Lingayat Seers
ಬೆಂಗಳೂರು, ನ. 23 : ಭ್ರಷ್ಟ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಮಠಾಧೀಶರು ಬೆಂಬಲಿಸುತ್ತಿರುವುದು ಸರಿಯಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಮಾಜವನ್ನು ಸನ್ಮಾರ್ಗದಲ್ಲಿ ಕೊಂಡೊಯ್ಯಬೇಕಾದ ಧಾರ್ಮಿಕ ಮುಖಂಡರು ಭ್ರಷ್ಟರನ್ನು ಬೆಂಬಲಿಸುತ್ತಿರುವುದು ಎಷ್ಟು ಸಮಂಜಸ? ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮೇಲೆ ಗುರುತರ ಆರೋಪಗಳು ಜಗತ್ತಿಗೆ ಗೊತ್ತಿದೆ. ಹೀಗಿದ್ದೂ ಮಠಾಧೀಶರು ಅವರನ್ನು ಬೆಂಬಲಿಸುವುದು ದುರದೃಷ್ಟಕರ ಎಂದರು.

ಕಲುಷಿತಗೊಂಡಿರುವ ರಾಜಕಾರಣವನ್ನು ಧರ್ಮಗುರುಗಳು ಶುಚಿ ಮಾಡಬೇಕು. ಸಂಕಷ್ಟದ ಸಂದರ್ಭದಲ್ಲಿ ಸೂಕ್ತ ಸಲಹೆಗಳನ್ನು ನೀಡಬೇಕು. ಅದನ್ನು ಬಿಟ್ಟು ಭ್ರಷ್ಟಾಚಾರ, ಸ್ವಜನಪಕ್ಷಪಾತ, ರಾಜ್ಯದ ಸಂಪತ್ತು ಲೂಟಿ ಮಾಡುತ್ತಿರುವ ಮುಖ್ಯಮಂತ್ರಿ ಯಡಿಯೂರಪ್ಪ ಬೇಕೆ? ಯಾರು ಯಾವ ಕೆಲಸ ಮಾಡಬೇಕು ಅದನ್ನೇ ಮಾಡಬೇಕು. ರಾಜಕಾರಣಿಗಳು ರಾಜಕೀಯ ಮಾಡಬೇಕು. ಸ್ವಾಮೀಜಿಗಳು ಧಾರ್ಮಿಕ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಹೋಗಬೇಕು ಎಂದು ಪರಮೇಶ್ವರ ಅಭಿಪ್ರಾಯಪಟ್ಟರು.

ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಯಡಿಯೂರಪ್ಪ ಅವರ ತಲೆದಂಡಕ್ಕೆ ಬಿಜೆಪಿ ಹೈಕಮಾಂಡ್ ತೀರ್ಮಾನವನ್ನು ಲಿಂಗಾಯಿತ ಮಠಾಧೀಶರು ವಿರೋಧಿಸಿದ್ದರು. ಪೇಜಾವರ ಶ್ರೀಗಳು, ರಂಭಾಪುರಿ ಮಠದ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹಾಗೂ ದಯಾನಂದ ಸ್ವಾಮೀಜಿ ಯಡಿಯೂರಪ್ಪ ತಲೆದಂಡಕ್ಕೆ ವಿರೋಧ ವ್ಯಕ್ತಪಡಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+