ಮಲ್ಯ ಅವಕಾಶವಾದಿ : ಒಡೆಯರ್

ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಕಳೆದ ಮೂರು ವರ್ಷಗಳ ತಮ್ಮ ಅಧಿಕಾರಾವಧಿಯಲ್ಲಿ ಕೆಎಸ್‌ಸಿಎಯಲ್ಲಿ ಯಾವುದೇ ಅಭಿವೃದ್ಧಿ ಆಗಿಲ್ಲ ಎಂಬ ಮಲ್ಯ ಆರೋಪದಲ್ಲಿ ಸತ್ಯಾಂಶ ಇಲ್ಲ ಎಂದರು. ಬ್ರಿಜೇಶ್ ಬಣ ಒಡೆಯುವ ಮೂಲಕ ತಾವು ಸುಸೂತ್ರವಾಗಿ ಕಾರ್ಯ ನಿರ್ವಹಿಸಲು ಪ್ರಯತ್ನಿಸಿದ್ದೇನೆ.
ನನ್ನ ಹಿತಾಸಕ್ತಿ ಬಗ್ಗೆ ನೀವು ಗಮನ ಹರಿಸುತ್ತೀರಿ ಎಂಬ ನಂಬಿಕೆ ಇದೆ ಎಂಬ ಅರ್ಥದ ಮೊಬೈಲ್ ಸಂದೇಶವನ್ನು ತಮಗೆ ಕಳುಹಿಸಿದ್ದಾರೆ. ಇದೊಂದು ಬ್ಲ್ಯಾಕ್ ಮೇಲ್ ತಂತ್ರವಾಗಿದೆ. ಈ ಬಗ್ಗೆ ಕೈಗೊಳ್ಳಬಹುದಾದ ಕಾನೂನು ಕ್ರಮಗಳ ಬಗ್ಗೆ ವಕೀಲರ ಸಲಹೆ ಪಡೆಯುತ್ತಿದ್ದೇನೆ ಎಂದು ಒಡೆಯರ್ ಹೇಳಿದರು.
ಭಾನುವಾರ ನಡೆಯಲಿರುವ ಕೆಎಸ್ ಸಿಎ ಪದಾಧಿಕಾರಿಗಳ ಚುನಾವಣೆ ಹಿನ್ನೆಲೆಯಲ್ಲಿ ಮಲ್ಯ ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಆದರೆ ತಮ್ಮ ಹಾಗೂ ಕುಂಬ್ಳೆ ಬಣದ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಕಳೆದ ಬಾರಿ ತಮ್ಮ ಬಣದಿಂದ ಸ್ಪರ್ಧಿ ಸಿದ್ದ ಮಲ್ಯ, ಬಹುತೇಕ ಕೆಎಸ್‌ಸಿಎ ಸಮಿತಿ ಸಭೆಗಳಿಗೆ ಗೈರುಹಾಜರಾಗಿದ್ದರು.
ಅಲ್ಲದೇ ಕರ್ನಾಟಕ ಕ್ರಿಕೆಟ್ ಅಕಾಡೆಮಿಗೆ 10 ಕೋಟಿ ರೂ. ನೀಡುವುದಾಗಿ ಭರವಸೆ ನೀಡಿದ್ದ ಮಲ್ಯ ಇದುವರೆಗೆ 45 ಲಕ್ಷ ರೂ. ಮಾತ್ರ ನೀಡಿದ್ದಾರೆ. ಆದರೆ ಆ ಹಣವನ್ನು ಕೂಡ ಇದುವರೆಗೆ ಬಳಸಲಾಗಿಲ್ಲ ದು ಒಡೆಯರ್ ವಿವರಿಸಿದರು.











Click it and Unblock the Notifications