ನನ್ನನ್ನು ನಂಬಿ, ಮಂಜುನಾಥನ ಮೇಲಾಣೆ : ಶೋಭಾ
ಬೆಂಗಳೂರು,
ನ. 20 : ನಾನು ನನ್ನ ಸಾರ್ವಜನಿಕ ಜೀವನದಲ್ಲಿ ಯಾರಿಂದಲೂ ನಯಾ ಪೈಸೆ ಲಂಚ ಸ್ವೀಕರಿಸಿಲ್ಲ. ಕೈಗಾರಿಕೆ ಸ್ಥಾಪನೆಗೆ ಉದ್ಯಮಿಯೊಬ್ಬರಿಂದ 3.5 ಕೋಟಿ ರೂ.ಸಾಲ ಪಡೆದಿರುವೆ ಎಂದು ಸ್ಪಷ್ಟಣೆ ನೀಡಿರುವ ಇಂಧನ ಸಚಿವೆ ಶೋಭಾ ಕರಂದ್ಲಾಜೆ ಸ್ಪಷ್ಟಪಡಿಸಿದ್ದಾರೆ. id="toptextpromo">ಮಾಧ್ಯಮ
ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ದೇವರ ಮೇಲಾಣಿ, ತಾಕತ್ತಿದ್ದರೆ ಧರ್ಮಸ್ಥಳದ ಮುಂಜುನಾಥನ ಸನ್ನಿಧಿಗೆ ಬನ್ನಿ ಎಂದು ಮಾಜಿ ಸಿಎಂ ಕುಮಾರಸ್ವಾಮಿಗೆ ಸವಾಲು ಹಾಕಿದ್ದಾರೆ. ತನ್ನ ಅಸ್ತಿ ವಿವರಗಳು ಸೇರಿದಂತೆ ಎಲ್ಲ ಮಾಹಿತಿಯನ್ನು ಆದಾಯ ತೆರಿಗೆ ಇಲಾಖೆ ಮತ್ತು ಲೋಕಾಯುಕ್ತರಿಗೆ ಸಲ್ಲಿಸಿದ್ದೇನೆ. ತನ್ನ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಉದ್ದೇಶದಿಂದ ಕೊಡಗಿನಲ್ಲಿ 166 ಎಕರೆ ಜಮೀನು ಖರೀದಿಯ ಆರೋಪ ಮಾಡಲಾಗುತ್ತಿದೆ. ಇದರಿಂದಾಗಿ ತನಗೆ ಮತ್ತು ತನ್ನ ಕುಟುಂಬಕ್ಕೆ ನೋವಾಗಿದೆ ಎಂದು ಹೇಳಿದ್ದಾರೆ. id='are-slot-1' class='oiad oi-axt oiadv'> id='top-searched-articles'>ತಾನು
ಎಲ್ಲವನ್ನು ಕಾನೂನು ಬದ್ಧವಾಗಿಯೇ ನಡೆಸಿದ್ದೇನೆ. ರಾಜಕೀಯ ಮುಖಂಡರು ಉದ್ಯಮಿಗಳಾಗಬಾರದೇ ಎಂದು ಖಾರವಾಗಿ ಪ್ರಶ್ನಿಸಿದ ಶೋಭಾ, ಇದುವರೆಗೂ ತಾನು ಯಾವುದೇ ರೀತಿಯ ಅವ್ಯವಹಾರ ನಡೆಸಿಲ್ಲ. ಮುಂದೆಯೂ ನಡೆಸುವುದಿಲ್ಲ. ಜಮೀನು ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿರುವುದು ಸಾಬೀತು ಮಾಡಿದರೆ ರಾಜಕೀಯ ನಿವೃತ್ತಿ ಹೊಂದುವುದಾಗಿ ಇದೇ ಸಂದರ್ಭದಲ್ಲಿ ಘೋಷಿಸಿದರು.











Click it and Unblock the Notifications