ವಿದ್ಯಾರ್ಥಿಗಳನ್ನು ಬಾವಿಗೆ ತಳ್ಳಿದ ಕ್ರೂರ ಶಿಕ್ಷಕ

ಈ ಘಟನೆ ಜರುಗಿದ್ದು ಸಿದ್ಧಾರೂಢ ಶಾಲೆಯಲ್ಲಿ. ರಾಮಪ್ಪ ಎಂಬ ಶಿಕ್ಷಕ ಗೌಡ, ಬಸವರಾಜ್ ಮತ್ತು ಗಗನ ಎಂಬ ವಿದ್ಯಾರ್ಥಿಗಳನ್ನು ಬಾವಿಗೆ ತಳ್ಳಿದ್ದಾನೆ. ಹುಡುಗಾಟಕ್ಕೆ ಪೆನ್ನೊಂದನ್ನು ಬಾವಿಗೆ ಎಸೆದು ಒಬ್ಬನಿಗೆ ತರಲು ಹೇಳಿದ್ದಾನೆ. ಒಬ್ಬ ಇಳಿದಾಗ ಉಳಿದಿಬ್ಬರನ್ನೂ ಬಾವಿಗೆ ತಳ್ಳಿದ್ದಾನೆ.
ವಿದ್ಯಾರ್ಥಿಗಳ ಕೂಗಾಟ ಕೇಳಿ ಗೌಡ ಮತ್ತು ಬಸವರಾಜ್ ಎಂಬಿಬ್ಬ ವಿದ್ಯಾರ್ಥಿಗಳನ್ನು ದಾರಿಹೋಕರು ರಕ್ಷಿಸಿದ್ದಾರೆ. ಆದರೆ, ಗಗನ ಎಂಬ ವಿದ್ಯಾರ್ಥಿನಿ ಸಾವಿಗೀಡಾಗಿದ್ದಾಳೆ. ಪೊಲೀಸರು ರಾಮಪ್ಪನನ್ನು ಬಂಧಿಸಿದ್ದಾರೆ.
ವಿಚಾರಣೆಯಲ್ಲಿ ತಾನು ಮಾನಸಿಕ ಅಸ್ವಸ್ಥನೆಂಬಂತೆ ರಾಮಪ್ಪ ವರ್ತಿಸಿದ್ದಾನೆ. ಆದರೆ, ವಿದ್ಯಾರ್ಥಿಗಳು ಹೇಳುವ ಪ್ರಕಾರ, ಆತ ಮಾನಸಿಕವಾಗಿ ಅಸ್ವಸ್ಥನಾಗೇನೂ ಇಲ್ಲ. ಪಾಠವನ್ನು ಕೂಡ ಸಹಜವಾಗಿಯೇ ಮಾಡುತ್ತಾನೆ. ಆತನಲ್ಲಿ ಹುದುಗಿದ್ದ ಕ್ರೌರ್ಯ ಈ ಕೃತ್ಯ ಮಾಡಿಸಿದೆ ಎಂದು ಗ್ರಾಮಸ್ಥರು ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications