ಜಗದೀಶ್ ಶೆಟ್ಟರ್ ಮುಖಕ್ಕೂ ಭೂಗಳ್ಳತನದ ರಾಡಿ
ಬೆಂಗಳೂರು,
ನ .20 : ನಾಯಕತ್ವ ಬದಲಾವಣೆಯಾದರೆ ಮುಂದಿನ ಮುಖ್ಯಮಂತ್ರಿಗೆ ಮುಂಚೂಣಿಯಲ್ಲಿದ್ದ ಜಗದೀಶ್ ಶೆಟ್ಟರ್ ಮುಖಕ್ಕೆ ಭೂಗಳ್ಳತನದ ರಾಡಿ ಮೆತ್ತಿಕೊಂಡಿದೆ. ತಮ್ಮ ಸಹೋದರ ಪ್ರದೀಪ್ ಶೆಟ್ಟರ್ ಅವರಿಗೆ ಕೆಐಎಡಿಬಿಯಿಂದ ಹುಬ್ಬಳ್ಳಿಯಲ್ಲಿ 2.5 ಎಕರೆ ಭೂಮಿಯನ್ನು ಕೇವಲ ಐದು ದಿನಗಳಲ್ಲಿ ಮಂಜೂರು ಮಾಡಿಸಿಕೊಡುವ ಮೂಲಕ ಅವರು ಅಧಿಕಾರ ದುರುಪಯೋಗ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. id="toptextpromo">ಹುಬ್ಬಳ್ಳಿಯ
ರಾಯಪುರದ ಕೈಗಾರಿಕಾ ಪ್ರದೇಶದಲ್ಲಿ 186, 187, 188, 143 ಹಾಗೂ 144 ರಲ್ಲಿ ಪ್ರದೀಪ್ ಶೆಟ್ಟರ್ ಅವರಿಗೆ ಭೂಮಿ ಮಂಜೂರಾಗಿದೆ. ಐದು ದಿನಗಳಲ್ಲಿ ಭೂಮಿ ಮಂಜೂರು ಮಾಡಲಾಗಿರುವ ಬೆಳವಣಿಗೆಯಲ್ಲಿ ಸಚಿವ ಶೆಟ್ಟರ್ ಅವರ ಪಾತ್ರವಿರುವುದಾಗಿ ಶಂಕಿಸಲಾಗಿದೆ. ಕಾನೂನು ಪ್ರಕಾರ ಅರ್ಜಿ ಸಲ್ಲಿಸಿ, ಏಕ ಗವಾಕ್ಷಿ ವ್ಯವಸ್ಧೆಯ ಮೂಲಕ ಭೂಮಿ ಮಂಜೂರಾಗಲು ಕನಿಷ್ಠವೆಂದರೂ ಮೂರರಿಂದ ನಾಲ್ಕು ವಾರಗಳು ಬೇಕಾಗುತ್ತದೆ. ಆದರೆ ಪ್ರದೀಪ್ ಶೆಟ್ಟರ್ ಅವರಿಗೆ ಐದು ದಿನಗಳಲ್ಲಿ ಭೂಮಿ ಮಂಜೂರಾಗಿದೆ. id='are-slot-1' class='oiad oi-axt oiadv'> id='top-searched-articles'>ಈ
ಬೆಳವಣಿಗೆಗೆ ಪ್ರತಿಕ್ರಿಯೆ ನೀಡಿರುವ ಪ್ರದೀಪ್ ಶೆಟ್ಟರ್, ತಮಗೂ ತಮ್ಮ ಸಹೋದರ ಜಗದೀಶ ಶೆಟ್ಟರ್ ಅವರಿಗೂ ಯಾವುದೇ ಸಂಬಂಧವಿಲ್ಲ. ತಾವು ಬೇರೆಯಾಗಿ ಹತ್ತು ವರ್ಷಗಳು ಕಳೆದಿವೆ. ತಮಗೆ ಮಂಜೂರಾದ ಭೂಮಿಯಲ್ಲಿ ಅವರ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.











Click it and Unblock the Notifications