ಕರ್ನಾಟಕದ ಮಾನ ಹರಾಜು : ಎಸ್ಸೆಂ ಕೃಷ್ಣ
ಮೈಸೂರು,
ನ. 20 : ಕರ್ನಾಟಕದಲ್ಲಿರುವ ಬಿಜೆಪಿ ಸರಕಾರ ನಡೆಸಿರುವ ಭೂಗಳ್ಳತನದಿಂದ ಕರ್ನಾಟಕಕ್ಕೆ ಕೆಟ್ಟ ಹೆಸರು ಬಂದಿದೆ ಎಂದು ಕೇಂದ್ರ ವಿದೇಶಾಂಗ ಖಾತೆ ಸಚಿವ ಎಸ್ ಎಂ ಕೃಷ್ಣ ಲೇವಡಿ ಮಾಡಿದರು. id="toptextpromo">ಮಾಧ್ಯಮ
ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಒಂದು ಕಾಲದಲ್ಲಿ ಕರ್ನಾಟಕ ಮತ್ತು ಬೆಂಗಳೂರು ಅಂದರೆ ದೇಶದಲ್ಲಿ ಅಷ್ಟೇ ಅಲ್ಲ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೌರವ ಹೊಂದಿರುವ ರಾಜ್ಯವಾಗಿತ್ತು. ಆದರೆ, ಬಿಜೆಪಿ ಅಧಿಕಾರಿಕ್ಕೆ ಬಂದ ನಂತರ ಡಿನೋಟಿಫಿಕೇಷನ್ ಮತ್ತು ಗಣಿ ಲೂಟಿ ಹಾಗೂ ಭ್ರಷ್ಟಾಚಾರದಲ್ಲಿ ನಂಬರ್ 1 ಸ್ಥಾನ ಗಳಿಸುವ ಮೂಲಕ ಕರ್ನಾಟಕದ ಮರ್ಯಾದೆಯನ್ನು ಹರಾಜಿಗಿಟ್ಟಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. id='are-slot-1' class='oiad oi-axt oiadv'> id='top-searched-articles'>ರಾಜ್ಯದಲ್ಲಿ
ಇದೀಗ ಭ್ರಷ್ಟಾಚಾರ ಮುಗಿಲುಮುಟ್ಟಿದೆ. ಮುಖ್ಯಮಂತ್ರಿಯಿಂದ ಆರಂಭವಾಗಿರುವ ಲಂಚತನ ಎಲ್ಲಾ ಕ್ಷೇತ್ರದಲ್ಲೂ ಹೆಚ್ಚಾಗಿದೆ. ಈ ಎಲ್ಲ ಸಾಧನೆಗೆ ಬಿಜೆಪಿ ಸರಕಾರ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಕಾರಣ ಎಂದು ಕೃಷ್ಣ ಕಿಡಿಕಾರಿದರು. ನನ್ನ ಅವಧಿಯಲ್ಲಿ ನಡೆದಿರುವ ಡಿನೋಟಿಫಿಕೇಷನ್ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆಗೆ ವಹಿಸಿದರೆ ಅದನ್ನು ಸ್ವಾಗತಿಸುವುದಾಗಿ ಕೃಷ್ಣ ಸ್ಪಷ್ಟಪಡಿಸಿದರು.











Click it and Unblock the Notifications