ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಷ್ಯನ್ ಗೇಮ್ಸ್ : ಭಜರಂಗ್ ಲಾಲ್ ಗೆ ಚಿನ್ನ

By Mrutyunjaya Kalmat
|
Google Oneindia Kannada News

Asian Games 2010
ಗುವಾಂಗ್ ಜೊ, ನ. 20 : ಪುರುಷರ ಸಿಂಗಲ್ಸ್ ದೋಣಿ ಹುಟ್ಟುಹಾಕುವಿಕೆ ಸ್ಪರ್ಧೆಯಲ್ಲಿ ಐತಿಹಾಸಿಕ ಸ್ವರ್ಣ ಪದಕ ಗೆಲ್ಲುವ ಮೂಲಕ ಬಜರಂಗ್ ಲಾಲ್ ಠಾಕರ್ ಭಾರತದ ಪಾಳಯದಲ್ಲಿ ಹರುಷದ ಹೊನಲನ್ನು ಹರಿಸಿದ್ದಾರೆ. ಭಾರತೀಯ ಸ್ಪಧಿಗಳು 16ನೇ ಏಷ್ಯನ್ ಗೇಮ್ಸ್‌ನ ಏಳನೆಯ ದಿನ ಒಟ್ಟು ಮೂರು ಪದಕಗಳನ್ನು ಬಾಚಿಕೊಂಡು ಪಾರಮ್ಯ ಮೆರೆದಿದ್ದಾರೆ.

ಗುರಿಕಾರರು ತಾವೇನೂ ಕಡಿಮೆಯಿಲ್ಲ ಎಂಬಂತೆ ಕಂಚಿನ ಪದಕವೊಂದನ್ನು ತಮ್ಮ ಖಾತೆಗೆ ಸೇರಿಸಿಕೊಂಡಿದ್ದಾರೆ. ಭಾರತೀಯ ಪುರುಷರ ಎಂಟರ ತಂಡ ಬೆಳ್ಳಿ ಪದಕ ಗೆದ್ದು ಬೀಗಿದರೆ,ಮಹಿಳೆಯರು ಎರಡು ಕಂಚಿನ ಪದಕಗಳನ್ನು ಕೊಳ್ಳೆ ಹೊಡೆದಿದ್ದಾರೆ. ಅವೊತಿ ಶೂಟಿಂಗ್ ರೇಂಜ್‌ನಲ್ಲಿ ಭಾರತೀಯ ಗುರಿಕಾರರಾದ ಮಾನವ್‌ಜಿತ್ ಸಿಂಗ್ ಸಂಧು, ಮನ್‌ಶೇರ್ ಸಿಂಗ್ ಹಾಗೂ ಜೊರಾವರ್ ಸಿಂಗ್ ಸಂಧು ಪುರುಷರ ತಂಡದ ಟ್ರ್ಯಾಪ್ ವಿಭಾಗದಲ್ಲಿ ಮೂರನೆಯ ಸ್ಥಾನ ಗಳಿಸಿದರು.

ಬೆಳಗ್ಗೆ ಒಟ್ಟು ನಾಲ್ಕು ಪದಕಗಳ ಸಾಧನೆಯೊಂದಿಗೆ ಇದೀಗ ಭಾರತದ ಒಟ್ಟು ಪದಕಗಳ ಪಟ್ಟಿಯಲ್ಲಿ ಹತ್ತನೇ ಸ್ಥಾನಕ್ಕೇರಿದೆ. 2000 ಮೀಟರ್ ರೇಸ್‌ನಲ್ಲಿ ಬಜರಂಗ್‌ಲಾಲ್ ಆರಂಭದಿಂದ ಅಂತ್ಯದವರೆಗೂ ಮುನ್ನಡೆ ಸಾಧಿಸಿದ್ದರು. ಹಲವಾರು ದೋಣಿಗಳನ್ನು ಹಿಂದಿಕ್ಕಿ 7 ನಿಮಿಷ 4.78 ಸೆ. ನಲ್ಲಿ ಗುರಿ ಮುಟ್ಟಿ ಚಿನ್ನ ತಮ್ಮದಾಗಿಸಿಕೊಂಡರು.

ಮಹಿಳೆಯರ ವಿಭಾಗದಲ್ಲಿ ಪ್ರತಿಮಾ ಪುಹಾನಾ ಮತ್ತು ಪ್ರಮೀಳಾ ಮಿನ್ಜ್ , 7 ನಿಮಿಷ 47.50 ಸೆ. ಸಮಯದೊಂದಿಗೆ ಜೋಡಿ ವಿಭಾಗದಲ್ಲಿ ಕಂಚಿನ ಪದಕ ತಮ್ಮದಾಗಿಸಿಕೊಂಡರು. ಈ ವಿಭಾಗದಲ್ಲಿ ಸ್ವರ್ಣ ಪದಕ ಚೀನಾದ ಪಾಲಾಯಿತು.

ಭಾರತೀಯ ಸ್ಪರ್ಧಿಗಳು ಎಂಟು ತಂಡದ ವಿಭಾಗದ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆಲ್ಲುವುದರೊಂದಿಗೆ ದೋಣಿ ಹುಟ್ಟುಹಾಕುವಿಕೆ ಸ್ಪರ್ಧೆಗಳು ಮುಕ್ತಾಯಗೊಂಡಿವೆ. ಭಾರತೀಯರು(5.49.50)ಆತಿಥೇಯ ಚೀನಾ (5ನಿ. 32.44 ಸೆ.)ಕ್ಕಿಂತ ಸಾಕಷ್ಟು ಹಿಂದೆ ಆದರೆ ಮೂರನೆಯ ಸ್ಥಾನ ಗಳಿಸಿದ ಉಜ್ಬೆಕಿಸ್ತಾನ (5.55.96ಸೆ.)ಕ್ಕಿಂತ ಸಾಕಷ್ಟು ಮುಂದಿದ್ದರು.

ಭಾರತೀಯ ಸ್ಪರ್ಧಿಗಳಾದ ಲೋಕೇಶ್ ಕುಮಾರ್, ಸತೀಶ್ ಜೋಶಿ, ಶಾಜಿ ಥಾಮಸ್, ಜೆನಿಲ್ ಕೃಷ್ಣನ್, ಅನಿಲ್‌ಕುಮಾರ್, ರಾಜೇಶ್ ಕುಮಾರ್ ಯಾದವ್, ಮಂಜಿತ್ ಸಿಂಗ್ ಹಾಗೂ ಗಿರಿರಾಜ್‌ಸಿಂಗ್ ಸುಮಾರು ಒಂದೂವರೆ ದೋಣಿಗಿಂತಲೂ ಹೆಚ್ಚು ಅಂತರದಿಂದ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X