ಶೋಭಾ ಸವಾಲ್ ಕುಮಾರ್ ಸ್ವೀಕರಿಸುತ್ತಾರಾ?

Minister Shobha hits back at detractors
ಬೆಂಗಳೂರು, ನ.19: ತಾನಿನ್ನು ಬ್ಯಾಂಕ್ ಸಾಲದಲ್ಲಿದ್ದೇನೆ. ಸಾರ್ವಜನಿಕ ಹಣ ಕೊಳ್ಳೆ ಹೊಡೆಯುವ ಪೈಕಿಯಲ್ಲ ಎಂದು ಫೋನ್ ಮೂಲಕ ಸುವರ್ಣ ವಾಹಿನಿಯೊಂದಿಗೆ ನಿನ್ನೆಯಷ್ಟೇ ಮಾತನಾಡಿದ್ದ ಸಚಿವೆ ಶೋಭಾ, ಇಂದು ಅಕ್ಷರಶಃ ಕೆಂಡಮಂಡಲಾವಾದರು, ಉಚ್ಚ ಸ್ವರದಲ್ಲಿ ಆರ್ಭಟಿಸಿದರು, ಸವಾಲೆಸೆದರು, ಕೊನೆಗೆ ಉಮ್ಮಿಳಿಸಿ ಬಂದ ದುಃಖವನ್ನು ಕಷ್ಟಪಟ್ಟು ತಡೆದುಕೊಂಡರೂ ಹನಿ ಕಣ್ಣೀರು ಜಯಗಳಿಸಿಯೇ ಬಿಟ್ಟಿತ್ತು. ಒಕ್ಕಲಿಗರ ದಿಟ್ಟ ರಾಜಕಾರಣಿ ಶೋಭಾರ ಇವತ್ತಿನ ಟಾರ್ಗೆಟ್ ಮಾಜಿ ಮುಖ್ಯಮಂತ್ರಿ, ಹಾಲಿ ಸಂಸದ ಎಚ್ ಡಿ ಕುಮಾರಸ್ವಾಮಿ.

ಶೋಭಾ ಅವರು ನಿನ್ನೆ ನೀಡಿದ ಸಂದರ್ಭದಲ್ಲಿ ಸುವರ್ಣ ವಾಹಿನಿ ಕಚೇರಿ ಚರ್ಚಾಗೋಷ್ಠಿಯಲ್ಲಿ ಕುಮಾರ್ ಕೂಡಾ ಇದ್ದರು. ಶೋಭಾ ಅವರ ವಿವರಣೆಯನ್ನು ಆಲಿಸಿ, ಅಡ್ಡಾಡ್ಡ ತಲೆ ಅಲ್ಲಾಡಿಸಿ, ಅನಾಮಧೇಯ ಕಂಪೆನಿ ಹೆಸರಿನಲ್ಲಿ ಖರೀದಿ ಮಾಡಿ, ಹಗರಣದಲ್ಲಿ ತಮ್ಮ ಅಸ್ತಿತ್ವವೇ ಇಲ್ಲ ಎನ್ನುವುದು ಎಷ್ಟು ಸರಿ ಎಂದು ಬಿಟ್ಟರು.

ಇದಕ್ಕೆ ಪ್ರತಿಯಾಗಿ ಇಂದು ಸುದ್ದಿಗೋಷ್ಠಿ ಕರೆದಿದ್ದ ಇಂಧನ ಖಾತೆ ಸಚಿವೆ ಶೋಭಾ, "ನಾನು ಎಲ್ಲವನ್ನೂ ಕಾನೂನುಬದ್ಧವಾಗಿಯೇ ಮಾಡಿದ್ದೇನೆ. ಎಲ್ಲ ದಾಖಲೆಗಳನ್ನು ಲೋಕಾಯುಕ್ತರ ಎದುರು ಇಟ್ಟಿದ್ದೇನೆ. ರಾಜಕಾರಣಿಗಳು ಬಿಸಿನೆಸ್ ಮಾಡುವುದು ತಪ್ಪೇ. ಬೇಕಾದರೆ ಕಂಪೆನಿ ದಾಖಲೆಗಳನ್ನು ಪರಿಶೀಲಿಸಲಿ. ಭೂಹಗರಣ ಕುರಿತ ಆರೋಪಗಳಿಂದ ರೋಸಿ ಹೋಗಿ ಗದ್ಗದಿತರಾಗಿ ಹೊರನಡೆದರು. ಕರಂದ್ಲಾಜೆ ಚಾಲೆಂಜಿಂಗ್ ನುಡಿಮುತ್ತುಗಳಲ್ಲಿ ಆಯ್ದ ವಾಕ್ಯಗಳು ನಿಮ್ಮ ಮುಂದೆ:

* ತಪ್ಪು ಮಾಡಿದವರಿಗೆ ಟೆನ್ಷನ್ ನನಗೆ ಯಾಕೆ ಟೆನ್ಷನ್ ಆಗ್ಬೇಕು. everything is under lokayukta.
* ಇದುವರೆಗೆ ಯಾವುದೇ ಭ್ರಷ್ಟಾಚಾರ ಮಾಡಿಲ್ಲ, ಇನ್ನು ಮುಂದೆಯೂ ಮಾಡುವುದಿಲ್ಲ. ತಾಕತ್ತಿದ್ದರೆ ಕುಮಾರಸ್ವಾಮಿ ಅವರು ಧರ್ಮಸ್ಥಳ ಮಂಜುನಾಥನ ಎದುರು ಪ್ರಮಾಣ ಮಾಡಲಿ.
* ಭೂ ಖರೀದಿಯಲ್ಲಿ ಭ್ರಷ್ಟಾಚಾರ ಆಗಿರುವುದು ಸಾಬೀತಾದರೆ ರಾಜಕೀಯದಿಂದಲೇ ನಿವೃತ್ತಿಯಾಗುತ್ತೇನೆ.
* ಧರ್ಮ ಸಿಂಗ್ ಕೊಟ್ಟ ಸೈಟು, ಪುತ್ತೂರಿನ ಸೈಟು, ನನ್ನ ಕಂಪನಿ ಹೆಸರಲ್ಲಿರುವ 166 ಎಕ್ರೆ ಬಿಟ್ಟು, ಒಂದಿಂಚು ಭೂಮಿ ಕೂಡಾ ನಾನು ಹೊಂದಿಲ್ಲ.
* ಆರೋಪಗಳನ್ನು ಸಾಬೀತುಪಡಿಸುವಂತೆ ಸವಾಲಿನ ಪತ್ರವನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಕಳುಹಿಸಿದ್ದೇನೆ.
* ನನ್ನ ಮೇಲೆ ಪ್ರತ್ಯಕ್ಷವಿರಲಿ, ಪರೋಕ್ಷವಾಗಿಯಾಗಲೀ, ಅನ್ಯ ಪಕ್ಷದವರಾಗಲೀ, ನಮ್ಮ ಪಕ್ಷದವರೇ ಆಗಲೀ, ನನ್ನ ವಿರುದ್ಧ ಆರೋಪ ಮಾಡುತ್ತಿರುವವರಿಗೆ ಇದೇ ಸವಾಲಿನ ಪತ್ರ ಸಿದ್ಧವಿರುತ್ತದೆ.

ಕೋಟ್ಯಂತರ ಸ್ಟಾಂಪ್ ಡ್ಯೂಟಿ ವಂಚನೆ?:ಕೊಡಗಿನಲ್ಲಿ ಸುಮಾರು 166 ಎಕರೆ ಜಮೀನನ್ನು ಅನಾಮಧೇಯ ಕಂಪೆನಿ ಹೆಸರಿನಲ್ಲಿ ಖರೀದಿ. 5 ಕೋಟಿ ದಾಖಲೆ ನೀಡಿ 40 ಕೋಟಿ ಸುಳ್ಳು ದಾಖಲೆ ಸೃಷ್ಟಿ. ಸ್ಟಾಂಪ್ ಡ್ಯೂಟಿಗೆ ಖೋತಾ. 166 ಎಕ್ರೆ ಆಸ್ತಿ ಮೌಲ್ಯ ಸುಮಾರು 40 ಕೋಟಿ ರೂಪಾಯಿಯಾಗುತ್ತದೆ. ಆದರೆ ದಾಖಲೆಯಲ್ಲಿರುವುದು ಐದು ಕೋಟಿ ಹತ್ತು ಲಕ್ಷ ರೂಪಾಯಿ ಎಂದು ದಾಖಲೆಯಲ್ಲಿ ತೋರಿಸಿರುವುದು. ಉದ್ದೇಶ ಸ್ಟಾಂಪ್ ಡ್ಯೂಟಿ ಮತ್ತು ಇನ್‌ಕಂ ಟ್ಯಾಕ್ಸ್ ವಂಚಿಸುವುದು.

ಕಾಫಿ ತೋಟದ ಕಂಪೆನಿಯ ಎಂ ಡಿಯಾಗಿ ಶೋಭಾಗೆ ವರ್ಷಕ್ಕೆ 9 ಲಕ್ಷ ರೂ ಸಂಭಾವನೆ. ಸಚಿವೆಯಾಗಿ ಈ ರೀತಿ ಲಾಭದಾಯಕ ಹುದ್ದೆಯಲ್ಲಿರುವುದು ಪ್ರಶ್ನಿಸಲಾಗಿದೆ. ಶೋಭಾ, ತಮ್ಮ ಸಹೋದರ ಲಕ್ಷ್ಮಣ ಗೌಡ, ಸೆಬಾಸ್ಟಿಯನ್ ಪಾಲುದಾರರಾಗಿರುವ ಕಪಿಲಾ ಮಂಜುಶ್ರಿ ಅಪಾರೆಲ್ಸ್ ಸಂಸ್ಥೆಗೆ ಸರಿಯಾದ ವಿಳಾಸವೇ ಇಲ್ಲದಿದ್ದರೂ, 3.5 ಕೋಟಿ ರೂ ಸಾಲ ಪಡೆದಿರುವುದು ಹಾಗೂ ಸಾಲಕ್ಕೆ ಏನು ಭದ್ರತೆ ಒದಗಿಸಿದ್ದಾರೆ ಎಂಬುದರ ಸ್ಪಷ್ಟ ಚಿತ್ರಣ ನೀಡದಿರುವ ಆರೋಪವಿದೆ. ಆದರೆ, ಎಲ್ಲವನ್ನೂ ಸಚಿವೆ ಶೋಭಾ ಅಲ್ಲಗೆಳೆದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+