ಭೂ ಹಗರಣ: ಯಡ್ಡಿ ನಂತರ ಅನಂತು, ಶೆಟ್ಟರ್ ?

ಹಗರಣಗಳ ಆಗರ ಈ ಸರ್ಕಾರ: ರಾಜ್ಯ ಸರಕಾರ ಹಗರಣಗಳ ವಿಷ ವರ್ತುಲಕ್ಕೆ ಸಿಲುಕಿ ಕೋಮಾ ಸ್ಥಿತಿಯಲ್ಲಿದೆ. ಅದು ಹೆಚ್ಚು ಕಾಲ ಉಳಿಯುವುದಿಲ್ಲ. ಎಲ್ಲರ ಬಣ್ಣ ಬಯಲಾಗುವ ಒಳಗೆ ಮುಖ್ಯಮಂತ್ರಿಗಳು ಮನೆ ಸೇರಿದರೆ ಒಳ್ಳೆಯದು. ಭೂ ಹಗರಣದ ಕುರಿತಂತೆ ನ್ಯಾಯಾಂಗ ತನಿಖೆ ನಡೆಸುತ್ತೇನೆ, ಪ್ರತಿಪಕ್ಷಗಳ ನಾಯಕರ ಮಾನ ಹರಾಜು ಹಾಕುತ್ತೇನೆ ಎಂದೆಲ್ಲ ಮಾತನಾಡಿದ ಯಡಿಯೂರಪ್ಪನವರು ಈಗ ತಮ್ಮ ರಾಗ ಬದಲಿಸಿ ಪ್ರತಿಪಕ್ಷಗಳ ನಾಯಕರ ಜತೆ ಚರ್ಚಿಸುತ್ತೇನೆ ಎಂದಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಅವರ ವಿರುದ್ಧ ಸಿಎಂ ಕುಟುಂಬವೇ ಭೂ ಹಗರಣದ ಮಾಹಿತಿ ಬಿಡುಗಡೆ ಮಾಡಿದೆ ಎಂದು ಪತ್ರಿಕೆಗಳು ವರದಿ ಮಾಡಿವೆ. ಸಂಸದ ಅನಂತ ಕುಮಾರ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಜಗದೀಶ ಶೆಟ್ಟರ್ ಅವರ ವಿರುದ್ಧವೂ ಭೂಹಗರಣದ ಆರೋಪ ಹೊರಿಸಿ ದಾಖಲೆಗಳನ್ನು ಬಿಡುಗಡೆ ಮಾಡುವ ಕಾರ್ಯದಲ್ಲಿ ಮುಖ್ಯಮಂತ್ರಿ ಕುಟುಂಬ ತೊಡಗಿದೆ ಎಂದು ರೇವಣ್ಣ ಆರೋಪಿಸಿದ್ದಾರೆ.
ಭೂ ಹಗರಣದಲ್ಲಿ ಭಾಗಿಯಾಗಿರುವ ಹೆಸರುಗಳು ಗೊತ್ತಿದ್ದರೆ ನ್ಯಾಯಾಂಗ ತನಿಖೆ ನಡೆಸಲಿ. ಪ್ರತಿಪಕ್ಷಗಳ ನಾಯಕರ ಮಾನ ಹರಾಜು ಹಾಕುತ್ತೇನೆ ಎನ್ನುವ ಸಿಎಂ, ಮೊದಲು ತಮ್ಮ ಮಾನ ಉಳಿಸಿಕೊಳ್ಳಲಿ ಎಂದು ರೇವಣ್ಣ ಕಿಚಾಯಿಸಿದ್ದಾರೆ.












Click it and Unblock the Notifications