ಲೋಕಾಯುಕ್ತ ದಾಳಿ : 7.63 ಕೋಟಿ ವಶ

ಬೆಂಗಳೂರು ಸೇರಿದಂತೆ 6 ಕಡೆ ಲೋಕಾಯುಕ್ತ ಅಧಿಕಾರಿಗಳ ತಂಡ 6 ಅಧಿಕಾರಿಗಳ ನಿವಾಸ, ಕಚೇರಿ ಮೇಲೆ ದಾಳಿ ನಡೆಸಿ 7.63 ಕೋಟಿ ರುಪಾಯಿಗಳ ಅಕ್ರಮ ಆಸ್ತಿ ಪಾಸ್ತಿ, ಹಣ, ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಧಾರವಾಡ, ಬೀದರ್, ಬಿಜಾಪುರ, ಚಿಕ್ಕಮಗಳೂರು, ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ನಗರಗಳಲ್ಲಿ ದಾಳಿ ನಡೆಸಿದ್ದಾರೆ. ಆಹಾರ ನಿರೀಕ್ಷಕ ತಿಮ್ಮರಾಜು(1.49 ಕೋ.), ಮೈಸೂರು ಭೂಸೇನಾ ನಿಗಮದ ಜ್ಯೂನಿಯರ್ ಇಂಜಿನಿಯರ್ ಕೆಟಿ ಮಾದಶೆಟ್ಟಿ(1.31 ಕೋ.), ಬೆಳಗಾವಿ ಕರ್ನಾಟಕ ಗ್ರಾಮೀಣ ಅಭಿವೃದ್ಧಿ ನಿಗಮದ ಸಹಾಯಕ ನಿರ್ದೇಶಕ ನೂರ್ ಅಹ್ಮದ್(1.61 ಕೋ.).
ಬಿಜಾಪುರ ಗ್ರಾಮ ಸಡಕ್ ಯೋಜನೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಶಂಕರಗೌಡ ಪಾಟೀಲ್(139 ಕೋ.),ಇಂಡಿ ತಾಲ್ಲೂರು ಕಾರ್ಯನಿರ್ವಾಹಕ ಇಂಜಿನಿಯರ್ ಸಿದ್ರಾಮಪ್ಪ ಕೂಗನೂರು(140 ಕೋ.) ಚಿಕ್ಕಮಗಳೂರು ಜಿಲ್ಲಾ ಪಂಚಾಯತ್ ನ ಗುಮಾಸ್ತ ಸಿ ಕೆ ಪ್ರಸಾದ್ (68 ಲಕ್ಷ) ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಸದ್ಯಕ್ಕೆ 7.63 ಕೋಟಿ ರುಪಾಯಿಗಳನ್ನು ಸಂಪಾದನೆಯನ್ನು ವಶಪಡಿಸಿಕೊಳ್ಳಲಾಗಿದೆ. ತನಿಖೆ ಇನ್ನೂ ಮುಂದುವರೆದಿದೆ ಎಂದು ಲೋಕಾಯುಕ್ತ ಎಡಿಜಿಪಿ ರೂಪ್ ಕುಮಾರ್ ದತ್ತಾ ಮಾಧ್ಯಮಗಳಿಗೆ ವಿವರಿಸಿದ್ದಾರೆ.












Click it and Unblock the Notifications