Get Updates
Get notified of breaking news, exclusive insights, and must-see stories!

ರಾಜಕಾರಣಿಗಳು 60ವಯಸ್ಸಿಗೆ ನಿವೃತ್ತಿಯಾಗಲಿ

Writer Chandrashekar Patil
ಬೆಂಗಳೂರು, ನ. 14 : ಎಲ್ಲ ವಲಯಗಳಲ್ಲಿಯೂ 60 ವಯಸ್ಸಿಗೆ ನಿವೃತ್ತಿ ಕಾನೂನು ಇದೆ. ಆದರೆ, ರಾಜಕಾರಣದಲ್ಲಿ ಮಾತ್ರ ನಿವೃತ್ತಿಯಿಲ್ಲವಾಗಿದೆ. ಎಲ್ಲ ರಾಜಕಾರಣಿಗಳು 60ವಯಸ್ಸಿಗೆ ನಿವೃತ್ತಿಗೊಂಡು ವಿಶ್ರಾಂತಿ ಪಡೆಯಬೇಕು. ಈ ಮೂಲಕ ದೇಶದಲ್ಲಿ ಶೇ.54ರಷ್ಟಿರುವ ಯುವಜನಾಂಗಕ್ಕೆ ರಾಜಕಾರಣದಲ್ಲಿ ಅವಕಾಶ ಮಾಡಿಕೊಡಬೇಕು ಎಂದು ಸಾಹಿತಿ ಚಂಪಾ ಪ್ರತಿಪಾದಿಸಿದರು. ಭಾನುವಾರ ನಗರದ ಸೆಂಟ್ರಲ್ ಕಾಲೇಜಿನ ಸೆನೆಟ್ ಹಾಲ್‌ನಲ್ಲಿ 'ಭಾರತ ವಿದ್ಯಾರ್ಥಿ ಫೆಡರೇಷನ್"(SFI) ಆಯೋಜಿಸಿದ್ದ "ವಿಶ್ವವಿದ್ಯಾಲಯ ವಿದ್ಯಾರ್ಥಿಗಳ ರಾಜ್ಯ ಸಮಾವೇಶ"ವನ್ನು ಉದ್ಘಾಟಿಸಿ ಈ ಮಾತನ್ನಾಡಿದರು.

ದೊಡ್ಡವರೆಲ್ಲಾ ಜಾಣರಲ್ಲ: ಹಿರಿಯರಿದ್ದರೆ ಹಳೆಯದ್ದನ್ನೇ ಮಾಡುತ್ತಾರೆ ವಿನಹಃ ಹೊಸತನಕ್ಕೆ ಅವಕಾಶ ನೀಡುವುದಿಲ್ಲ. ಯುವ ಜನತೆ ದೇಶದ ಅಧಿಕಾರದ ಚುಕ್ಕಾಣಿ ಹಿಡಿದರೆ ಆಡಳಿತ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತರಲು ಸಾಧ್ಯ. ಯಾವಾಗಲೂ ಹಳೆ ನೀರು ಹೋಗಿ ಹೊಸ ನೀರು ಬರಬೇಕು. ರಾಜಕಾರಣದಲ್ಲಿ 60ವಯಸ್ಸಿನ ಖಡ್ಡಾಯ ನಿವೃತ್ತಿ ಯೋಜನೆ ಜಾರಿ ಮಾಡುವ ನಿಟ್ಟಿನಲ್ಲಿ ಯುವಜನತೆ ಹೋರಾಟ ಮಾಡಬೇಕು. ಇದು ದೇಶದಲ್ಲಿ ಹೊಸ ಕ್ರಾಂತಿಗೆ ಮುನ್ನುಡಿ ಯಾಗುತ್ತದೆ ಎಂದು ಚಂಪಾ ಕರೆಕೊಟ್ಟರು.

ವಿಶ್ವವಿದ್ಯಾಲಯಗಳು ಹಗರಣಗಳ ತಾಣ: ಜ್ಞಾನ ದೇಗುಲಗಳಾಗಬೇಕಿದ್ದ ವಿಶ್ವವಿದ್ಯಾಲಯಗಳು ಹಗರಣಗಳ ತಾಣಗಳಾಗುತ್ತಿವೆ" ಎಂದು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹಾಗೂ ಹಿರಿಯ ಸಾಹಿತಿ ಪ್ರೊ.ಚಂದ್ರಶೇಖರ್ ಪಾಟೀಲ ವಿಷಾದ ವ್ಯಕ್ತಪಡಿಸಿದ್ದಾರೆ. ವಿಶ್ವವಿದ್ಯಾಲಯಗಳಲ್ಲಿ 'ಉಪಕುಲಪತಿ" ನೇಮಕಾತಿಯಿಂದ ಹಿಡಿದು 'ಡಿ" ಗ್ರೂಪ್‌ನೌಕರರ ನೇಮಕಾತಿವರೆಗೂ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಹಗರಣಗಳಿಗಾಗಿ ವಿಧಾನಸೌಧಕ್ಕೆ ಹೋಗಬೇಕಿಲ್ಲ. ವಿಶ್ವವಿದ್ಯಾಲಯಗಳ ಎಲ್ಲ ಹಂತಗಳಲ್ಲೂ ಭ್ರಷ್ಟಾಚಾರವು ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹಗರಣಗಳಿಗಾಗಿ ವಿಧಾನಸೌಧಕ್ಕೆ ಹೋಗಬೇಕಿಲ್ಲ. ವಿಶ್ವವಿದ್ಯಾಲಯಗಳ ಎಲ್ಲ ಹಂತಗಳಲ್ಲೂ ಭ್ರಷ್ಟಾಚಾರವು ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿದೆ. ಯುವ ಪೀಳಿಗೆ ಮತ್ತು ವಿದ್ಯಾರ್ಥಿಗಳಿಗೆ ಮಾದರಿಯಾಗುತ್ತಿದ್ದ ಶಿಕ್ಷಣ, ಧಾರ್ಮಿಕ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಇಂದು ಪ್ರೋತ್ಸಾಹ ಮತ್ತು ಮಾರ್ಗದರ್ಶನ ನೀಡಬಲ್ಲವರು ಯಾರೂ ಇಲ್ಲದಂತಾಗಿರುವುದು ಖೇದಕರ ಎಂದು ಅವರು ತಿಳಿಸಿದರು.

ಮಠಾಧೀಶರ ಕಾಲಿಡಿದರೆ ಸರ್ಕಾರ ಬಚಾವ್ : ನಾಡಿನ ಭ್ರಷ್ಟ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಖುರ್ಚಿ ಉಳಿಸಿಕೊಳ್ಳಲು ಶ್ರೀಮಂತ ಸ್ವಾಮೀಜಿಗಳಿಗೆ ಕೋಟ್ಯಂತರ ರೂ.ಗಳನ್ನು ನೀಡುತ್ತಿದ್ದಾರೆ. ಆದರೆ, ಸ್ವಾಮೀಜಿಗಳು ಜನರ ತೆರಿಗೆ ಹಣವನ್ನು ಸಂಕೋಚ ಮತ್ತು ನಾಚಿಕೆಗಳನ್ನು ಬಿಟ್ಟು ತೆಗೆದುಕೊಳ್ಳುತ್ತಿರುವುದು ಆಶ್ಚರ್ಯ. ಇಂಥ ಸ್ವಾಮೀಜಿಗಳಿಂದ ಯುವಪೀಳಿಗೆ ಏನನ್ನೂ ಕಲಿಯುವ ಅಗತ್ಯವಿಲ್ಲ ಎಂದು ಟೀಕಿಸಿದರು.

ರಾಜ್ಯದಲ್ಲಿ ಇಂದು ಕೋಮುವಾದಿ, ಭ್ರಷ್ಟಾಚಾರ ಮತ್ತು ಕುಟುಂಬ ರಾಜಕಾರಣದ ಸರಕಾರ ಅಸ್ತಿತ್ವದಲ್ಲಿರಲು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಧಾರ್ಮಿಕ ವಲಯವೆ ಕಾರಣ. ಬ್ರಾಹ್ಮಣ, ಲಿಂಗಾಯುತ ಮತ್ತು ವೀರಶೈವ ಸಮುದಾಯದವರು ಕೋಮುವಾದಿ ಬಿಜೆಪಿ ಸರಕಾರಕ್ಕೆ ಬೆಂಬಲವಾಗಿ ನಿಂತಿದ್ದಾರೆ ಎಂದು ಚಂಪಾ ಕಿಡಿಕಾರಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+