ಸರಕಾರವೆಂದರೆ ಕುಟುಂಬ ವ್ಯವಹಾರವಲ್ಲ : ಸಿದ್ದು
ಬೀದರ್,
ನ. 15 : ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ರಾಜ್ಯದ ಅಭಿವೃದ್ಧಿಗಿಂತಲೂ ತನ್ನ ಕುಟುಂಬದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಮಹಾರಾಷ್ಟ್ರ ರಾಜಕಾರಣವನ್ನು ಯಡಿಯೂರಪ್ಪ ನೋಡಿ ಕಲಿಯಲಿ ಎಂದು ಕಿವಮಾತು ಹೇಳಿದ್ದಾರೆ. id="toptextpromo">ನಗರದಲ್ಲಿಂದು
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪನವರ ವಿರುದ್ಧ ಟೀಕಾ ಪ್ರಹಾರ ನಡೆಸಿದರು. ಯಡಿಯೂರಪ್ಪನವರ ಕುಟುಂಬದವರೆಲ್ಲರೂ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ರಾಜ್ಯವನ್ನೇ ಕೊಳ್ಳೆ ಹೊಡೆಯಲು ಹೊರಟಿದ್ದಾರೆ. ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದ ಜವಾಬ್ದಾರಿಯನ್ನು ಮರೆತು ಕಾನೂನು ಉಲ್ಲಂಘಿಸಿ ತನ್ನ ಕುಟುಂಬದವರಿಗೆ ಬೇಕಾದ ಎಲ್ಲ ರೀತಿಯ ಸಹಾಯ, ಸಹಕಾರವನ್ನು ನೀಡುತ್ತಿದ್ದಾರೆ ಎಂದು ದೂರಿದರು. id='are-slot-1' class='oiad oi-axt oiadv'> id='top-searched-articles'>ಸ್ವಜನ
ಪಕ್ಷಪಾತದಲ್ಲಿ ಮುಳುಗಿರುವ ಯಡಿಯೂರಪ್ಪ ಸರಕಾರ ಎಂದರೆ ಗೋಲಿ ಆಟ ಎಂದು ಭಾವಿಸಿದಂತಿದೆ. ಸರಕಾರ ಎಂದರೆ ಅವರ ಮನೆಯ ವ್ಯವಹಾರವಲ್ಲ. ಇದು ಪ್ರಜಾಪ್ರಭುತ್ವ ಎಂಬುದನ್ನು ಮೊದಲು ಅವರು ಅರಿತುಕೊಳ್ಳಲಿ ಎಂದು ಸಲಹೆ ನೀಡಿದರು.











Click it and Unblock the Notifications