ಭದ್ರಾವತಿಯಲ್ಲೊಂದು ಲವ್, ಸೆಕ್ಸ್, ದೋಖಾ ಕೇಸ್

ಘಟನೆ ವಿವರ: ನಗರದ ಎಂ ವಿ.ಕಾಲೇ ಜಿನಲ್ಲಿ 2ನೇ ವರ್ಷದ ಬಿಬಿಎಂ ವಿದ್ಯಾರ್ಥಿ ಶ್ರೀಹರ್ಷ(21) ಈತ ವಿಶ್ವೇಶ್ವರಯ್ಯ ಕಬ್ಬಿಣ ಹಾಗೂ ಉಕ್ಕು ಕಾರ್ಖಾನೆ(VISL) ಹಿರಿಯ ನೌಕರರೊಬ್ಬರ ಪುತ್ರ ಎಂದು ತಿಳಿದುಬಂದಿದೆ. ಆರೋಪಿ ಹರ್ಷ ಭದ್ರಾವತಿಯ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನ ವಿದಾರ್ಥಿನಿಯೋರ್ವಳನ್ನು ಪ್ರೀತಿಸುತ್ತಿದ್ದ. ಆಕೆಯನ್ನು ಮದುವೆಯಾಗುವ ಭರವಸೆ ನೀಡಿ, ಆಕೆಯೊಂದಿಗೆ ದೈಹಿಕ ಸಂಪರ್ಕವನ್ನೂ ಬೆಳೆಸಿದ್ದ.
ಆದರೆ, ಇತ್ತೀಚೆಗೆ ಈ ಯುವತಿಯನ್ನು ಕಡೆಗಣಿಸಲು ಆರಂಭಿಸಿಬಿಟ್ಟಿದ್ದ. ಆಕೆಯ ಫೋನ್, ಇಮೇಲ್, ಮೆಸೇಜ್ ಸಂಪರ್ಕವನ್ನು ಕಡಿತಗೊಳಿಸಿದ್ದ. ಈತ ಕೈಕೊಡುವುದು ನಿಶ್ಚಿತ ಎಂಬುದನ್ನು ಅರಿತ ವಿದ್ಯಾರ್ಥಿನಿ ನ್ಯೂಟೌನ್ ಪೊಲೀಸರ ಮೊರೆ ಹೋಗಿದ್ದಾಳೆ. ಪ್ರಿಯತಮನ ವಿರುದ್ದ ಅತ್ಯಾಚಾರದ ಪ್ರಕರಣ ದಾಖಲಿಸಿದ್ದಾಳೆ.
ನ್ಯೂಟೌನ್ ಠಾಣೆಯ ಪೊಲೀಸರು ಆಪಾದಿತ ವಿದ್ಯಾರ್ಥಿಯನ್ನು ಬಂಧಿಸಿ, ಆತನ ವಿರುದ್ದ ಅತ್ಯಾಚಾರ, ವಂಚನೆ ಪ್ರಕರಣರಣ ದಾಖಲಿಸಿಕೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.












Click it and Unblock the Notifications