ಕಲ್ಮಾಡಿಗೂ ಗೇಟ್ ಪಾಸ್ ನೀಡಿದ ಕಾಂಗ್ರೆಸ್
ನವದೆಹಲಿ,
ನ. 9 : ಅಮೆರಿಕಾದ ಅಧ್ಯಕ್ಷ ಬರಾಕ್ ಒಬಾಮಾ ಭಾರತ ಪ್ರವಾಸ ಮುಗಿಸುತ್ತಿದ್ದಂತೆ ಮಾಹಾರಾಷ್ಟ್ರ ಮುಖ್ಯಮಂತ್ರಿ ಅಶೋಕ್ ಚವ್ಹಾಣ್ ಬಳಿಕ ಕಾಂಗ್ರೆಸ್ ಸಂಸದೀಯ ಪಕ್ಷದ ಕಾರ್ಯದರ್ಶಿ ಸ್ಥಾನದಿಂದ ಸುರೇಶ ಕಲ್ಮಾಡಿ ಅವರನ್ನು ಕಾಂಗ್ರೆಸ್ ವಜಾಗೊಳಿಸಿದೆ. ತಕ್ಷಣದಿಂದಲೇ ಜಾರಿಗೆ ಬರುವಂತೆ ಕಾಂಗ್ರೆಸ್ ಕಲ್ಮಾಡಿ ರಾಜೀನಾಮೆಯನ್ನು ಅಂಗೀಕರಿಸಿದೆ. id="toptextpromo">ಕಾಮನ್ವೆಲ್ತ್
ಕ್ರೀಡಾಕೂಟದಲ್ಲಿ ಕೋಟ್ಯಂತರ ರುಪಾಯಿ ಹಗರಣದ ಆರೋಪ ಎದುರಿಸುತ್ತಿರುವ ಕಲ್ಮಾಡಿ ಅವರ ತಲೆದಂಡಕ್ಕೆ ಬಿಜೆಪಿ ಪಟ್ಟು ಹಿಡಿದಿತ್ತು. ಇದರಿಂದ ಚಳಿಗಾಲದ ಅಧಿವೇಶನ ಆರಂಭವಾಗುತ್ತಿದ್ದಂತೆ ಚವ್ಹಾಣ್ ಮತ್ತು ಕಲ್ಮಾಡಿ ಅವರನ್ನು ವಜಾಗೊಳಿಸಿ ಪ್ರತಿಪಕ್ಷಗಳನ್ನು ತಣ್ಣಗಾಗಿಸಲು ಕಾಂಗ್ರೆಸ್ ಸೂಕ್ತ ಕ್ರಮ ಕೈಗೊಂಡಿದೆ. id='are-slot-1' class='oiad oi-axt oiadv'> id='top-searched-articles'>ಈ
ಇಬ್ಬರನ್ನು ವಜಾಗೊಳಿಸುವ ಮೂಲಕ ಕಾಂಗ್ರೆಸ್ ಭ್ರಷ್ಟಾಚಾರವನ್ನು ಒಪ್ಪಿಕೊಂಡಂತಾಗಿದೆ ಎಂದು ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ ಹೇಳಿಕೆ ನೀಡಿದ್ದಾರೆ. 2ಜಿಹಗರಣದಲ್ಲಿ ಭಾಗಿಯಾಗಿರುವ ದೂರಸಂಪರ್ಕ ಖಾತೆ ಸಚಿವ 'ಸ್ಪೆಕ್ಟ್ರಂ' ರಾಜ ತಲೆದಂಡಕ್ಕೆ ಈಗ ಪ್ರತಿಪಕ್ಷಗಳು ಪಟ್ಟು ಹಿಡಿದಿವೆ.











Click it and Unblock the Notifications