ದೀಪಾವಳಿ ಸಂಭ್ರಮಕ್ಕೆ ವರುಣನ ವಕ್ರದೃಷ್ಟಿ ಸಾಧ್ಯತೆ
ಬೆಂಗಳೂರು,
ನ.5: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಕಂಡುಬಂದಿದ್ದು, ಮುಂದಿನ 36 ಗಂಟೆಯಲ್ಲಿ ಸಾಧಾರಣ ಮಳೆ ಬೀಳುವ ಸಾಧ್ಯತೆ ಇದೆ. ರಾಜ್ಯದ ದಕ್ಷಿಣ ಭಾಗದಲ್ಲಿ ಉತ್ತಮ ಮಳೆ ಬೀಳಲಿದ್ದು, ಕರಾವಳಿ ಮತ್ತು ಉತ್ತರ ಕರ್ನಾಟಕದಲ್ಲಿ ಅಲ್ಲಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. id="toptextpromo">ಕಳೆದ
24 ಗಂಟೆಗಳಲ್ಲಿ ಉತ್ತಮ ಮಳೆ ಸುರಿದಿದ್ದು ರಾಣೆಬೆನ್ನೂರಿನಲ್ಲಿ ಅಧಿಕ (10 ಸೆ.ಮೀ) ಮಳೆಯಾಗಿದೆ. ಚಿತ್ರದುರ್ಗ ಜಿಲ್ಲೆ ರಾಮಗಿರಿಯಲ್ಲಿ 7 ಸೆ.ಮೀ, ಅಜ್ಜಂಪುರ, ತುರುವೇಕೆರೆ, ಹರಪನಹಳ್ಳಿಯಲ್ಲಿ ತಲಾ 6 ಸೆ.ಮೀ ಮಳೆ ದಾಖಲಾಗಿದೆ. ಬಳ್ಳಾರಿ, ಗುಡಿಬಂಡೆಯಲ್ಲಿ ತಲಾ 5 ಸೆ.ಮೀ ಮಳೆಯಾಗಿದೆ. id='are-slot-1' class='oiad oi-axt oiadv'> id='top-searched-articles'>ಬೆಂಗಳೂರು,
ಮೈಸೂರು ಸೇರಿದಂತೆ ರಾಜ್ಯದ ವಿವಿಧೆಡೆ ಹಬ್ಬದ ಮುನ್ನಾ ದಿನ ಗುರುವಾರ ಧಾರಾಕಾರ ಮಳೆಯಾಗಿದೆ. ರಾಜ್ಯದಾದ್ಯಂತ ಸುರಿದ ಧಾರಾಕಾರ ಮಳೆ ಚಿತ್ರದುರ್ಗದಲ್ಲಿ 2 ಹಾಗೂ ಮೈಸೂರಿನಲ್ಲಿ ಒಬ್ಬರನ್ನು ಬಲಿತೆಗೆದುಕೊಂಡಿದೆ. ಕೆಲವೆಡೆಗಲ್ಲಿ ಮನೆಗಳಿಗೆ ಹಾಗೂ ಬೆಳೆಗಳಿಗೆ ನೀರು ನುಗ್ಗಿ ಅಪಾರ ನಷ್ಟ ಉಂಟಾಗಿದೆ.











Click it and Unblock the Notifications