ಶೀಘ್ರದಲ್ಲೆ ಕೆಪಿಟಿಸಿಎಲ್ ನೀಡಲಿದೆ ವಿದ್ಯುತ್ ಶಾಕ್
ಬೆಂಗಳೂರು,
ನ.5: ವಿದ್ಯುತ್ ದರವನ್ನು ಪ್ರತಿ ಯುನಿಟ್‍ಗೆ 75 ಪೈಸೆ ಹೆಚ್ಚಳ ಮಾಡಲು ರಾಜ್ಯದ ಐದು ವಿದ್ಯುತ್ ಪೂರೈಕೆ ಕಂಪನಿಗಳು ತೀರ್ಮಾನಿಸಿವೆ. ಈ ಸಂಬಂಧ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ(ಕೆಇಆರ್ ಸಿ) ಮನವಿ ಸಲ್ಲಿಸಲಾಗಿದೆ. ಈ ಹಿನ್ನೆಲೆಯಲ್ಲಿ ನ.10 ರಿಂದ 25ರತನಕ ಸಾರ್ವಜನಿಕ ವಿಚಾರಣೆ ನಡೆಸಲು ಆಯೋಗ ನಿರ್ಧರಿಸಿದೆ. id="toptextpromo">ಕೆಪಿಟಿಸಿಎಲ್‌ನ
ಅರ್ಜಿ ಕುರಿತು ಕೆಇಆರ್ ಸಿ ಕಚೇರಿಯಲ್ಲಿ ನವೆಂಬರ್ 10ರಂದು, ಬೆಸ್ಕಾಂಗೆ ಸಂಬಂಧಿಸಿದಂತೆ ಕೆಇಆರ್ ಸಿ ಕಚೇರಿಯಲ್ಲಿಯೇ ನ.11ರಂದು ಮತ್ತು 12 ರಂದು, ಬೆಸ್ಕಾಂಗೆ ಸಂಬಂಧಿಸದಂತೆ ನ.15ರಂದು ಗುಲ್ಬರ್ಗ ಜಿಲ್ಲಾಧಿಕಾರಿ ಕಚೇರಿಯಲ್ಲಿ, ಹೆಸ್ಕಾಂಗೆ ಸಂಬಂಧಿಸಂತೆ ನ.19ರಂಡು ಧಾರವಾಡದ ಜಿಲ್ಲಾಧಿಕಾರಿ ಕಚೇರಿಯಲ್ಲಿ, ಮೆಸ್ಕಾಂಗೆ ಸಂಬಂಧಿಸಿದಂತೆ ನ.23ರಂದು ಮಂಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಾರ್ವಜನಿಕ ವಿಚಾರಣೆ ನಡೆಯಲಿದೆ. id='are-slot-1' class='oiad oi-axt oiadv'> id='top-searched-articles'>ಪತಿದಿನ
ಬೆಳಗ್ಗೆ 11 ಗಂಟೆಗೆ ವಿಚಾರಣೆ ಆರಂಭವಾಗಲಿದೆ ಎಂದು ಆಯೋಗದ ಅಧ್ಯಕ್ಷ ಎಂ ಆರ್ ಶ್ರೀನಿವಾಸಮೂರ್ತಿ ತಿಳಿಸಿದ್ದಾರೆ. ದರ ಏರಿಕೆಗೆ ಸಂಬಂಧಿಸಿದಂತೆ ಆಯೋಗದ ಆದೇಶವನ್ನು ಮುಂದಿನ ತಿಂಗಳು ನೀಡಲು ಎಲ್ಲಾ ರೀತಿಯ ಪ್ರಯತ್ನ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.











Click it and Unblock the Notifications