ಡಿ.24ರಿಂದ 77ನೇ ಕಸಾಪ ಸಾಹಿತ್ಯ ಸಮ್ಮೇಳನ

ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜ ಪರಿಷನ್ಮಂದಿರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಮ್ಮೇಳನದ ಸ್ವಾಗತ ಸಮಿತಿ ಕಚೇರಿಯ ಉದ್ಘಾಟನೆ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಕೆ.ಆರ್. ನಲ್ಲೂರು ಪ್ರಸಾದ್, ಬೆಂಗಳೂರಿನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ಸಹ ಬಿಡುಗಡೆಗೊಳಿಸಲಾಯಿತು.
40 ವರ್ಷಗಳ ನಂತರ ಬೆಂಗಳೂರಿನಲ್ಲಿ ಸಮ್ಮೇಳನ ನಡೆಯುತ್ತಿದೆ. ಐಟಿ, ಬಿಟಿಗಳಿಂದ ಕಂಗೊಳಿಸುತ್ತಿರುವ ನಗರದಲ್ಲಿ ಸಮ್ಮೇಳನ ಮಾಡಬೇಕೆಂಬ ಬಯಕೆ ಇತ್ತು. ಕ್ರಿಸ್‌ಮಸ್ ರಜೆಯ ಹಿನ್ನೆಲೆಯಲ್ಲಿ ಎಲ್ಲರಿಗೂ ಭಾಗವಹಿಸಲು ಅನುಕೂಲವಾಗುವುದು ಎಂಬ ಕಾರಣ ಡಿಸೆಂಬರ್ ವಾರಾಂತ್ಯದಲ್ಲಿ ಸಮ್ಮೇಳನ ನಡೆಸಲಾಗುತ್ತಿದೆ ಎಂದರು.
ನ.10ರಂದು ನಡೆಯುವ ಕಾರ್ಯಕಾರಿ ಸಭೆಯಲ್ಲಿ ಸಮ್ಮೇಳನಾಧ್ಯಕ್ಷರ ಹೆಸರನ್ನೂ ಘೋಷಿಸಲಾಗುವುದು. ಕಸಾಪದಿಂದ ಸಮ್ಮೇಳನಾಧ್ಯಕ್ಷರಿಗೆ ಹಣ ಕೊಡುವುದಿಲ್ಲ. ಅದ್ಧೂರಿ ಊಟೋಪಚಾರ ಇರುವುದಿಲ್ಲ. ಸರಳ ಮತ್ತು ಶುದ್ಧವಾದ ಆಹಾರ ನೀಡುತ್ತೆವೆ. ಪ್ರತಿನಿಧಿಗಳಿಗೆ ಬ್ಯಾಗ್, ಸೇಂಟ್ ಕೊಡುವ ಸಂಪ್ರದಾಯಕ್ಕೆ ಕಡಿವಾಣ ಹಾಕಲಾಗಿದೆ. ಮೌಲ್ಯಯುತವಾದ 8 ಗ್ರಂಥಗಳನ್ನು ಪ್ರಕಟಿಸಲಾಗುತ್ತಿದೆ ಎಂದರು.












Click it and Unblock the Notifications