ಪತ್ನಿಯ ಕತ್ತು ಕೊಯ್ದು ಪರಾರಿಯಾದ ಪತಿ

ಚೂಡಲಿಂಗೇಗೌಡ (32)ಹತ್ಯೆಗೈದು ಮಗು ಜತೆ ಪರಾರಿಯಾದ ಆರೋಪಿ. ಚನ್ನಪಟ್ಟಣ ತಾಲೂಕಿನ ಮಾಳಗಾಳ ಗ್ರಾಮದ ಚೂಡಲಿಂಗೇಗೌಡನ ಮದುವೆ ಆರು ವರ್ಷಗಳ ಹಿಂದೆ ಮಧುಶ್ರೀ ಜತೆ ನಡೆದಿತ್ತು. ದಂಪತಿಗೆ ಎರಡೂವರೆ ವರ್ಷದ ಮಗ ವಿಕಾಸ್ ಇದ್ದಾನೆ. ಸಣ್ಣ ಪುಟ್ಟ ಕೆಲಸ ಮಾಡಿಕೊಂಡಿದ್ದ ಆತ, ಪತ್ನಿಗೆ ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದ.
ಇದರಿಂದಾಗಿ ಮೂರು ವರ್ಷಗಳ ಹಿಂದೆ ದಂಪತಿ ಮಧ್ಯೆ ಜಗಳ ನಡೆದು ಚನ್ನಪಟ್ಟಣ ತಾಲೂಕು ಅಕ್ಕೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಆತ 15 ದಿನ ಜೈಲುವಾಸ ಅನುಭವಿಸಿದ್ದು, ಬಿಡುಗಡೆ ನಂತರ ರಾಜಿ ಮಾಡಿಸಲಾಗಿತ್ತು. ಆದರೂ ಕಿರುಕುಳ ಮುಂದುವರಿದಿತ್ತು. ಭಾನುವಾರ ರಾತ್ರಿ ಮತ್ತೆ ದಂಪತಿ ಮಧ್ಯೆ ಜಗಳ ನಡೆದು, ಕುಪಿತಗೊಂಡು ಚಾಕುವಿನಿಂದ ಪತ್ನಿಯ ಕುತ್ತಿಗೆ ಕೊಯ್ದು ನಂತರ ಮಗು ಸಮೇತ ಪರಾರಿಯಾಗಿದ್ದಾನೆ.
ಮಗುವನ್ನು ನೋಡಲು ಪರಿಚಯಸ್ಥ ಮಹಿಳೆಯೊಬ್ಬರು ಸೋಮವಾರ ಬೆಳಗ್ಗೆ ಮನೆಗೆ ಬಂದಾಗ, ಮಧುಶ್ರೀ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡು ವಿನಾಯಕ ಲೇಔಟ್‌ನಲ್ಲೇ ವಾಸವಿರುವ ಮಧುಶ್ರೀ ಪೋಷಕರಿಗೆ ವಿಷಯ ಮುಟ್ಟಿಸಿದ್ದಾರೆ. ಆರೋಪಿ ಚೂಡಲಿಂಗೇಗೌಡ ಚನ್ನಪಟ್ಟಣಕ್ಕೆ ತೆರಳಿ ತನ್ನ ಪೋಷಕರ ಬಳಿ ಮಗು ಬಿಟ್ಟು ತಲೆಮರೆಸಿಕೊಂಡಿದ್ದು, ಶೀಘ್ರವೇ ಆತನನ್ನು ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.











Click it and Unblock the Notifications