ರಾಜ್ಯೋತ್ಸವ : ರೇಣುಕ ವಿರುದ್ಧ ಜಯಕರ್ನಾಟಕ ಪ್ರತಿಭಟನೆ
ಬೆಂಗಳೂರು,
ನ. 1 : ರಾಜ್ಯದ ಅಭಿವೃದ್ಧಿ ನಿರ್ಲಕ್ಷಿಸಿ ಭಿನ್ನಮತದ ಮೂಲಕ ಸರಕಾರದ ದಿಕ್ಕು ತಪ್ಪಿಸಲು ಕಾರಣವಾಗಿದ್ದಾರೆ ಎಂದು ಆರೋಪಿಸಿ ಅಬಕಾರಿ ಮಂತ್ರಿ ಎಂಪಿ ರೇಣುಕಾಚಾರ್ಯ ಅವರ ವಿರುದ್ಧ ಜಯಕರ್ನಾಟಕ ಕನ್ನಡ ಸಂಘಟನೆ ಪ್ರತಿಭಟನೆ ನಡೆಸಿದ ಘಟನೆ ಚಿಕ್ಕಬಳ್ಳಾಪುರದಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ. id="toptextpromo">ಕರ್ನಾಟಕ
ರಾಜ್ಯೋತ್ಸವ ಅಂಗವಾಗಿ ಚಿಕ್ಕಬಳ್ಳಾಪುರ ಉಸ್ತುವಾರಿ ಮಂತ್ರಿಯೂ ಆಗಿರುವ ಎಂಪಿ ರೇಣುಕಾಚಾರ್ಯ ಅವರು ಧ್ವಜಾರೋಹಣ ಮಾಡಲು ವೇದಿಕೆಗೆ ಆಗಮಿಸಿದಾಗ ಜಯಕರ್ನಾಟಕ ಸಂಘಟನೆ ಕಾರ್ಯಕರ್ತರು ಅವರ ವಿರುದ್ಧ ಪ್ರತಿಭಟನೆ ಆರಂಭಿಸಿದರು. ರಾಜ್ಯದ ಅಭಿವೃದ್ಧಿಯನ್ನು ಕಡೆಗಣಿಸಿದ ರೇಣುಕಾಚಾರ್ಯ ಅವರು ಭಿನ್ನಮತದ ನಾಯಕತ್ವ ವಹಿಸಿ ಜನತೆಗೆ ಅಶಯ ವಿರುದ್ಧವಾಗಿ ನಡೆದುಕೊಂಡಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಹೀಗಾಗಿ
ಅವರು ಧ್ವಜಾರೋಹಣ ಮಾಡಬಾರದು ಎಂದು ಘೋಷಣೆ ಕೂಗತೊಡಗಿದರು. ರಾಜ್ಯೋತ್ಸವದ ಶುಭಗಳಿಗೆಯಲ್ಲಿ ರೇಣುಕಾಚಾರ್ಯನಂತಹ ಜನವಿರೋಧಿ ನಾಯಕರು ಧ್ವಜಾರೋಹಣ ಮಾಡಬಾರದು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಧ್ಯೆ ಪ್ರವೇಶಿಸಿದ ಪೊಲೀಸರು ಜಯಕರ್ನಾಟಕ ಸಂಘಟನೆಯ ಕಾರ್ಯಕರ್ತರನ್ನು ಬಂಧಿಸಿದ ನಂತರ ಕಾರ್ಯಕ್ರಮ ಸುಸೂತ್ರವಾಗಿ ನಡೆಯಿತು.











Click it and Unblock the Notifications