ಮತ್ತೆ ಬಂಡಾಯ, ಸಚೇತಕ ಜೀವರಾಜ್ ರಾಜೀನಾಮೆ?
ಬೆಂಗಳೂರು,
ನ. 1 : ಕೊನೆಗೂ ನ.3 ರಂದು ಸಂಪುಟ ವಿಸ್ತರಣೆ ಮಾಡಲು ಮುಖ್ಯಮಂತ್ರಿ ಯಡಿಯೂರಪ್ಪ ಮಹೂರ್ತ ಫಿಕ್ಸ್ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಮತ್ತೆ ಬಂಡಾಯ ಭುಗಿಲೇಳುವ ಸಾಧ್ಯತೆ ಹೆಚ್ಚಾಗಿದ್ದು, ಮಂತ್ರಿ ಸ್ಥಾನದ ಆಕಾಂಕ್ಷಿ ಶೃಂಗೇರಿ ಶಾಸಕ ಡಿಎನ್ ಜೀವರಾಜ್ ಅವರು ವಿಧಾನಸಭೆ ಮುಖ್ಯ ಸಚೇತಕ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. id="toptextpromo">ಚಿಕ್ಕಮಗಳೂರು
ಶಾಸಕ ಸಿಟಿ ರವಿ, ತುಮಕೂರು ನಗರ ಶಾಸಕ ಸೊಗಡು ಶಿವಣ್ಣ, ಕೋಲಾರದ ಪಕ್ಷೇತರ ಶಾಸಕ ವರ್ತೂರು ಪ್ರಕಾಶ್ ಮತ್ತು ಸುರಪುರ ಶಾಸಕ ರಾಜೂಗೌಡ ಅವರಿಗೆ ಮಂತ್ರಿ ಸ್ಥಾನ ನೀಡುವುದು ಬಹುತೇಕ ಖಚಿತವಾಗಿದೆ. ಸಿಟಿ ರವಿ ಅವರಿಗೆ ಸಚಿವ ಸ್ಥಾನ ನೀಡುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸಚೇತಕ ಜೀವರಾಜ್ ಅವರು ಮುಖ್ಯಮಂತ್ರಿಗಳ ಕ್ರಮ ವಿರೋಧಿಸಿ ಸಚೇತಕ ಸ್ಥಾನಕ್ಕೆ ಸಂಜೆ ವೇಳೆಗೆ ರಾಜೀನಾಮೆ ನೀಡುವುದು ಖಾತ್ರಿಯಾಗಿದೆ. id='are-slot-1' class='oiad oi-axt oiadv'> id='top-searched-articles'>ನ.3
ರಂದು ಬೆಳಗ್ಗೆ 9.30ಕ್ಕೆ ರಾಜಭವನದಲ್ಲಿ ಈ ನಾಲ್ವರು ಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅಪ್ಪಚ್ಚು ರಂಜನ್ ಅವರಿಗೆ ಮಂತ್ರಿ ಸ್ಥಾನ ನೀಡಿ ಎಂದು ಜೆಡಿಎಸ್ ಮುಖಂಡ ಎಂಸಿ ನಾಣಯ್ಯ ಅವರ ವಕಾಲತ್ತು ನಡೆಸಿದ್ದು, ಸಂಪುಟ ವಿಸ್ತರಣೆ ನಂತರ ರಾಜ್ಯ ರಾಜಕಾರಣದಲ್ಲಿ ಮತ್ತೆ ಭಿನ್ನಮತ ಭುಗಿಲೆದ್ದರೆ ಅಚ್ಚರಿಯೇನಿಲ್ಲ.











Click it and Unblock the Notifications