ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರು ತಿಂಗಳ ಒಳಗಾಗಿ ಚುನಾವಣೆ ನಿಶ್ಚಿತ?

By Mahesh
|
Google Oneindia Kannada News

Karnataka set for another election battle
ಬೆಂಗಳೂರು, ಅ.30: ಸಂವಿಧಾನದ 10ನೇ ಪರಿಚ್ಛೇದದ ಅಡಿಯಲ್ಲಿ ಶಾಸಕರನ್ನು ಅನರ್ಹಗೊಳಿಸಿದ ವಿಧಾನಸಭೆಯ ಸ್ಪೀಕರ್ ಕೆ.ಜಿ.ಬೋಪಯ್ಯ ಅವರ ಕ್ರಮವನ್ನು ಹೈಕೋರ್ಟ್ ಎತ್ತಿಹಿಡಿದಿದೆ. ಯಡಿಯೂರಪ್ಪ ಅವರ ಬೆಂಬಲಿಗರು ಸಂಭ್ರಮಾಚರಣೆಯಲ್ಲಿ ತೊಡಗಿದ್ದರೆ, ವಿಪಕ್ಷಗಳ ಸಂಚಿಗೆ ಬಲಿಯಾದ ಅನರ್ಹಗೊಂಡ ಶಾಸಕರು ಸುಪ್ರೀಂಕೋರ್ಟ್ ಮೆಟ್ಟಿಲೇರಲಿದ್ದಾರೆ. ಈ ನಡುವೆ ಅಪರೇಷನ್ ಕಮಲದಿಂದ ಬಿಜೆಪಿಗೆ ಕೆಲ ಶಾಸಕರು ಸೇರ್ಪಡೆಗೊಂಡಿರುವುದರಿಂದ ಆರು ತಿಂಗಳಲ್ಲಿ ಆ ಕ್ಷೇತ್ರಗಳಲ್ಲಿ ಚುನಾವಣೆ ನಡೆಯಬೇಕಿದೆ. ಆದರೆ, ಶಾಸಕರ ರಾಜೀನಾಮೆ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಿ.ಎಸ್.ಸುರಂಜನ ಹೇಳುತ್ತಾರೆ

ಬಂಡಾಯ ಎದ್ದಿದ್ದ ಶಾಸಕರನ್ನು ಅನರ್ಹಗೊಳಿಸಿದ ದಿನ(Anti Defaction Law ಬಳಸಿ) ವೇ ಕೇಂದ್ರ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿದ್ದೇನೆ ಎಂದು ಸ್ಪೀಕರ್ ಕೆ.ಜಿ.ಬೋಪಯ್ಯ ಹೇಳುತ್ತಾರೆ. ಆದರೆ ಶಾಸಕರನ್ನು ಅನರ್ಹಗೊಳಿಸಿರುವ ಸಂಬಂಧ ತಮಗೆ ಈವರೆಗೆ ಯಾವುದೇ ಪತ್ರ ಬಂದಿಲ್ಲ ಎಂದು ಸಿ.ಎಸ್.ಸುರಂಜನ ಸ್ಪಷ್ಟಪಡಿಸಿದ್ದಾರೆ.

'ಶಾಸಕರನ್ನು ಅನರ್ಹಗೊಳಿಸಿರುವ ಸಂಬಂಧ ಕೇಂದ್ರ ಚುನಾವಣಾ ಆಯೋಗಕ್ಕೆ ನೇರವಾಗಿ ಪತ್ರ ಹೋದರೂ, ನಮ್ಮ ಕಚೇರಿಗೂ ಒಂದು ಪ್ರತಿ ಕಳುಹಿಸಬೇಕು. ಮೂವರು ಶಾಸಕರು (ಎಂ.ಸಿ. ಅಶ್ವತ್ಥ್, ಎಸ್.ವಿ.ರಾಮಚಂದ್ರ ಮತ್ತು ಎಂ.ನಾರಾಯಣಸ್ವಾಮಿ) ರಾಜೀನಾಮೆ ನೀಡಿರುವ ಕುರಿತು ಪತ್ರ ಬಂದಿದೆ. ಆದರೆ 11 ಶಾಸಕರ ಅನರ್ಹತೆ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ" ಎಂದು ಸುರಂಜನ ತಿಳಿಸಿದರು.

ಯಾವುದೇ ಶಾಸಕ ರಾಜೀನಾಮೆ ನೀಡಿದ ಬಳಿಕ ಖಾಲಿ ಉಳಿಯುವ ಕ್ಷೇತ್ರಕ್ಕೆ ಆರು ತಿಂಗಳ ಒಳಗಾಗಿ ಚುನಾವಣೆ ನಡೆಸಲೇಬೇಕು. ಆದರೆ, ಅನರ್ಹಗೊಂಡಿರುವ ಸದಸ್ಯರು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿ, ಚುನಾವಣೆ ಪ್ರಕ್ರಿಯೆಗೆ ನ್ಯಾಯಾಲಯ ತಡೆಯಾಜ್ಞೆ ನೀಡಿದರೆ ಚುನಾವಣಾ ಆಯೋಗ ಏನನ್ನೂ ಮಾಡುವಂತಿಲ್ಲ. ಇಲ್ಲವಾದರೆ ಆರು ತಿಂಗಳೊಳಗೆ ಚುನಾವಣೆ ನಡೆಸಲೇಬೇಕಾಗುತ್ತದೆ' ಎಂದು ಸುಪ್ರೀಂಕೋರ್ಟ್ ನ ಹಿರಿಯ ವಕೀಲರು ಅಭಿಪ್ರಾಯಪಟ್ಟಿದ್ದಾರೆ.

ಹಾಲಿ ಶಾಸಕ ಸ್ಥಾನದಿಂದ ಮಾತ್ರ ಅನರ್ಹಗೊಂಡಿರುವುದರಿಂದ ಮುಂದೆ ನಡೆಯುವ ಉಪ ಚುನಾವಣೆಯಲ್ಲೂ ಸ್ಪರ್ಧಿಸಬಹುದು. ಅನರ್ಹಗೊಂಡಿರುವ ಸದಸ್ಯರು ಮುಂದೆ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿರ್ಬಂಧ ಇಲ್ಲ ಎಂದು ವಕೀಲ ಭಟ್ ತಿಳಿಸಿದರು.


ವಿಡಿಯೋಗಳು:
.ದೇವೇಗೌಡ ಆಧುನಿಕ ಭಸ್ಮಾಸುರ: ಬಚ್ಚೇಗೌಡ | ಖೆಡ್ಡಾಕ್ಕೆ ಬಿದ್ದ ಬಿಜೆಪಿ ಶಾಸಕ ಸುರೇಶ್ ಗೌಡ |ಶಾಸಕನಿಗೆ ಡಿಮ್ಯಾಂಡು |
ರಿಂಗ ರಿಂಗಾ ಪಾಲಿಟಿಕ್ಸ್ ರಿಮಿಕ್ಸ್ | ಟ್ವಿಟ್ಟರಲ್ಲಿ ಹಿಂಬಾಲಿಸಿ | ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಸುದ್ದಿ | ಹೂವಿನಂಗಡಿ 24/7 | ಕನ್ನಡ ಸುದ್ದಿಗಳ SMS

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X