ಕೇರಳ ಚುನಾವಣೆ : ಕೈಕತ್ತರಿಸಿದವನಿಗೆ ಭರ್ಜರಿ ಜಯ
ತಿರುವನಂತಪುರ,
ಅ. 29 : ಪ್ರವಾದಿ ಮೊಹಮ್ಮದ್ ರ ಬಗ್ಗೆ ಅವಹೇಳನಕಾರಿಯಾಗಿ ಪ್ರಶ್ನೆ ಪತ್ರಿಕೆ ರಚಿಸಿದ ಉಪನ್ಯಾಸಕರ ಕೈ ಕತ್ತರಿಸಿದ ಆರೋಪದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ವ್ಯಕ್ತಿಯೊಬ್ಬರು ತಾಪಂ ಚುನಾವಣೆಯಲ್ಲಿ ಭರ್ಜರಿ ಜಯಭೇರಿ ಬಾರಿಸಿರುವ ಘಟನೆ ಎರ್ನಾಕುಲಂನಲ್ಲಿ ನಡೆದಿದೆ. id="toptextpromo">ವಝಕ್ಕುಲಂ
ಬ್ಲಾಕ್‌ನ ವಂಚಿನಾಡ್ ವಿಭಾಗದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜಕೀಯ ಅಂಗವಾದ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅನಸ್ ಗೆಲುವು ಕಂಡ ವ್ಯಕ್ತಿ. ತೋಡುಪುಝದ ನ್ಯೂಮಾನ್ ಕಾಲೇಜಿನ ಉಪನ್ಯಾಸಕ ಟಿಜೆ ಜೋಸೆಫ್‌ರ ಕೈಕತ್ತರಿಸಿದ್ದ ಆರೋಪದಲ್ಲಿ ಅನಸ್ ನ್ಯಾಯಾಂಗ ಬಂಧನದಲ್ಲಿದ್ದಾರೆ. id='are-slot-1' class='oiad oi-axt oiadv'> id='top-searched-articles'>ವಿಯ್ಯೂರು
ಜೈಲಿನಲ್ಲಿರುವ ಅನಸ್, ಯುಡಿಎಫ್ ಅಭ್ಯರ್ಥಿಯನ್ನು 1000ಕ್ಕೂ ಅಧಿಕ ಮತ ಗಳಿಂದ ಸೋಲಿಸಿದ್ದಾರೆ. ಇಲ್ಲಿ ಎಲ್ ಡಿಎಫ್‌ನ ಅಭ್ಯರ್ಥಿ 3ನೆ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧಿಸಲು ನ್ಯಾಯಾ ಲಯ ಅನಸ್‌ಗೆ ಅನುಮತಿ ನೀಡಿತ್ತು. ಕೇರಳದಲ್ಲಿ ಇತ್ತೀಚೆಗೆ ನಡೆದ ತಾಲ್ಲೂಕು ಪಂಚಾಯತಿ ಜಿಲ್ಲಾ ಪಂಚಾಯತಿ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಪಕ್ಷಗಳು ಜಯಗಳಿಸಿವೆ. ಆಡಳಿತರೂಢ ಎಡಪಕ್ಷಗಳ ಎಲ್ ಡಿಎಫ್ ಸರಕಾರ ಮುಖಭಂಗ ಅನುಭವಿಸಿದೆ.











Click it and Unblock the Notifications