ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗ್ರಾಮ ಗ್ರಾಮಗಳಿಗೂ ಬ್ರಾಡ್ ಬ್ಯಾಂಡ್ ಇಂಟರ್ನೆಟ್

By Mahesh
|
Google Oneindia Kannada News

Sachin Pilot
ಬೆಂಗಳೂರು, ಅ.29: '2012ರ ಅಂತ್ಯದೊಳಗೆ ದೇಶದ ಪ್ರತಿ ಗ್ರಾಮ ಪಂಚಾಯತ್‌ಗಳಿಗೂ ಬ್ರಾಡ್‌ಬ್ಯಾಂಡ್ ಜಾಲಸಂಪರ್ಕಕ್ಕೆ ಒಳಪಡಿಸಲಾಗುವುದು. ಆಗ ನಮ್ಮ ಆಡಳಿತದ ಸ್ವರೂಪವೇ ಬದಲಾಗಲಿದೆ' ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ಸಚಿನ್ ಪೈಲಟ್ ಹೇಳಿದರು. ಬೆಂಗಳೂರಿನ ಹೊಟೆಲ್ ಲಲಿತ್ ಅಶೋಕ್‌ನಲ್ಲಿ ಮೂರು ದಿನಗಳ ಅಂತರರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಮೇಳ 'ಬೆಂಗಳೂರು ಐಟಿ.ಬಿಜ್-2010" ಅನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯ ಸರ್ಕಾರದ 'ಇ-ಪಿಸಿಒ' (ಇಲೆಕ್ಟ್ರಾನಿಕ್ ಸಾರ್ವಜನಿಕ ದೂರವಾಣಿ ಕೇಂದ್ರ) ಯೋಜನೆಗೆ ಅವರು ಇದೇ ಸಂದರ್ಭದಲ್ಲಿ ಚಾಲನೆ ನೀಡಿದರು. 'ಮಾಹಿತಿ ತಂತ್ರಜ್ಞಾನ (ಐಟಿ) ಎಂದರೆ ಶ್ರೀಮಂತರಿಗೆ ಮಾತ್ರ ಸಂಬಂಧಿಸಿದ್ದು ಎಂಬ ಸೀಮಿತ ತಿಳಿವಳಿಕೆಯಿಂದ ನಾವು ಹೊರಬರಬೇಕು, ಐಟಿ ಮೂಲಕ ಜನಸಾಮಾನ್ಯನ ಜೀವನಮಟ್ಟದಲ್ಲಿ ಸುಧಾರಣೆ ತರುವುದು ನಮ್ಮ ಗುರಿಯಾಗಬೇಕು' ಎಂದರು

'ಪ್ರಸ್ತುತ ದೇಶದ 8 ಶೇ. ಜನತೆ ಮಾತ್ರ ಇಂಟರ್ನೆಟ್‌ನ ಬಳಕೆದಾರರಾಗಿದ್ದಾರೆ. ಹಾಗಾಗಿ ಐಟಿ ಕೇತ್ರದಲ್ಲಿ ಬೆಳವಣಿಗೆಗೆ ಸಾಕಷ್ಟು ಅವಕಾಶಗಳಿವೆ' ಎಂದರು. ದೇಶದ ಐಟಿ ಕ್ಷೇತ್ರದ ಬೆಳವಣಿಗೆಗೆ ಮೂರು ಅಂಶಗಳ ಕಾರ್ಯಯೋಜನೆಯನ್ನು ಅವರು ಮುಂದಿಟ್ಟರು. 'ದೇಶದ ಐಟಿ ರಫ್ತಿನಲ್ಲಿ ಶೇಕಡಾ 63 ಅಮೆರಿಕಾಗೆ ಹೋಗುತ್ತದೆ. ಅಮೆರಿಕ ಮಾತ್ರವಲ್ಲದೆ ಬೇರೆ ಮಾರುಕಟ್ಟೆಗಳನ್ನೂ ನಾವು ತ್ವರಿತವಾಗಿ ಕಂಡುಕೊಳ್ಳಬೇಕು" ಎಂದರು.

'ಐಟಿ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಗಳು ಆಗಬೇಕು. ಜೊತೆಗೆ ಹಾರ್ಡ್‌ವೇರ್ ಮಾರುಕಟ್ಟೆಯಲ್ಲಿ ಪ್ರಮುಖ ಪಾಲುದಾರಿಕೆ ವಹಿಸಲು ಈ ಕ್ಷೇತ್ರದ ಬೆಳವಣಿಗೆಯ ಕುರಿತೂ ಗಮನ ಹರಿಸಬೇಕು" ಎಂದು ಅವರು ತಿಳಿಸಿದರು.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮಾತನಾಡಿ, 'ದೇಶದ ಐಟಿ ರಫ್ತಿನಲ್ಲಿ ರಾಜ್ಯದ ಪಾಲು ಶೇಕಡಾ 30 ಇದೆ. ರಾಜ್ಯದ ಜಿಡಿಪಿಗೆ ಐಟಿಯ ಕೊಡುಗೆ ಶೇಕಡಾ 20 ಇದೆ' ಎಂದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X