ಪಕ್ಷದ್ರೋಹಿಗಳಿಗೆ ಕ್ಷಮೆ ಇಲ್ಲವೇ ಇಲ್ಲ : ಯಡಿಯೂರಪ್ಪ
ಬೆಂಗಳೂರು,
ಅ. 28 : ಸರಕಾರ ಮತ್ತು ಪಕ್ಷದ ವಿರುದ್ಧ ಬಂಡಾಯವೆದ್ದು ಶಾಸಕರ ಸ್ಥಾನದಿಂದ ಅನರ್ಹಗೊಂಡಿರುವ ಬಿಜೆಪಿ ಶಾಸಕರ ಮರುಸೇರ್ಪಡೆ ಸಾಧ್ಯವಿಲ್ಲ. ಪಕ್ಷದ್ರೋಹಿಗಳನ್ನು ಮತ್ತೆ ಪಕ್ಷದೊಳಗೆ ಬಿಟ್ಟುಕೊಂಡರೆ ಜನರು ಶಾಪ ಹಾಕ್ತಾರೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. id="toptextpromo">ಗುರುವಾರ
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯಿಂದ ಅನರ್ಹಗೊಂಡಿರುವ ಶಾಸಕರಿಗೆ ಪಕ್ಷದ ಬಾಗಿಲು ಮುಚ್ಚಿದೆ ಎಂದರು. ಬಿಜೆಪಿಯ ಆಡಳಿತ ಕಾರ್ಯವೈಖರಿ ಬಹಿರಂಗವಾಗಿ ಟೀಕಿಸಿ, ನಾಯಕತ್ವದ ವಿರುದ್ಧ ಹೊರಹೋಗಿ ಕಾಂಗ್ರೆಸ್-ಜೆಡಿಎಸ್ ಪಕ್ಷದ ಸಖ್ಯೆ ಬೆಳೆಸಿದವರನ್ನು ಮತ್ತೆ ಪಕ್ಷದೊಳಗೆ ಸೇರ್ಪಡೆ ಮಾಡಿಕೊಳ್ಳಲು ಸಾಧ್ಯವೇ? id='are-slot-1' class='oiad oi-axt oiadv'> id='top-searched-articles'>ಇಂತವರನ್ನು
ಮತ್ತೆ ಪಕ್ಷಕ್ಕೆ ಕರೆದುಕೊಂಡರೆ ಜನಸಾಮಾನ್ಯರು ನಮ್ಮನ್ನು ಕ್ಷಮಿಸಿಯಾರೆ? ಇವರನ್ನು ಪಕ್ಷಕ್ಕೆ ಕರೆದುಕೊಳ್ಳುವುದು ಬಿಡುವುದು ಪಕ್ಷದ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ ಅವರಿಗೆ ಬಿಟ್ಟ ವಿಚಾರ. ಈ ಬಗ್ಗೆ ನಾನೇನು ಹೆಚ್ಚಿಗೆ ಹೇಳುವುದಿಲ್ಲ ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದರು. ಮೂವರು ಶಾಸಕರು ಕ್ಷಮೆ ಕೋರಿ ಬಿಜೆಪಿ ಕಚೇರಿಗೆ ತೆರಳಿದ್ದರು ಎನ್ನುವ ಮಾಹಿತಿ ಇದೆ. ಉಳಿದವರು ಕುಮಾರಸ್ವಾಮಿ ಜೊತೆ ರಾಜ್ಯಪಾಲರ ಭೇಟಿಗೆ ತೆರಳಿದ್ದಾರೆ. ಏಕೆ ಹೀಗೆ ಎಂದು ಅವರು ಪ್ರಶ್ನಿಸಿದರು.











Click it and Unblock the Notifications