ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ಮುಂದೆ ಯಾರೂ ಪಕ್ಷ ಬಿಡುವುದಿಲ್ಲ: ಪರಮೇಶ್ವರ್

By Mahesh
|
Google Oneindia Kannada News

ಬೆಂಗಳೂರು, ಅ.27: ಕಾಂಗ್ರೆಸ್ ಪಕ್ಷ ಸಮುದ್ರವಿದ್ದಂತೆ ಇಲ್ಲಿ ಎಲ್ಲರಿಗೂ ಅವಕಾಶ ಸಿಗುತ್ತದೆ. ಮೂಲ ಕಾಂಗ್ರೆಸ್ಸಿಗರು, ವಲಸ್ಸಿಗರು ಎಂಬುದರಲ್ಲಿ ಅರ್ಥವಿಲ್ಲ. ಪಕ್ಷದ ತತ್ವ ನಿಷ್ಠೆಗೆ ಬದ್ಧರಾದ ನಾಯಕರಿಗೆ ಸೂಕ್ತ ಸ್ಥಾನ ಸಿಗಲಿದೆ. ಇನ್ಮುಂದೆ ಯಾರು ಪಕ್ಷವನ್ನು ಬಿಡುವುದಿಲ್ಲ ಎಂದು ಕೆಪಿಸಿಸಿಯ ನೂತನ ಅಧ್ಯಕ್ಷ ಜಿ.ಪರಮೇಶ್ವರ್ ಅವರು ಇಂದು ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಡಿಕೆ ಶಿವಕುಮಾರ್ ಅವರ ಅಧಿಕಾರಾವಧಿ ಕೂಡಾ ಮುಗಿದಿದೆ. ಮುಂದಿನ ಕಾರ್ಯಾಧ್ಯಕ್ಷ ಯಾರಾಗಬಹುದು. ಈ ಬಗ್ಗೆ ಹೈಕಮಾಂಡ್ ನಿಮಗೆ ಸೂಚನೆ ನೀಡಿದೆಯೆ? ಎಂಬ ಪ್ರಶ್ನೆಗೆ ಉತ್ತರಿಸುತ್ತಾ, 'ನನಗೆ ಬಂದಿರುವ ಮಾಹಿತಿ ಪ್ರಕಾರ, ನನ್ನನ್ನು ಅಧ್ಯಕ್ಷನಾಗಿ ಮಾಡಲಾಗಿದೆ. ಬೇರೆ ವಿಷ್ಯ ಗೊತ್ತಿಲ್ಲ' ಎಂದು ಪರಮೇಶ್ವರ್ ತಿಳಿಸಿದರು.

ಐಟಿ ರೈಡ್ ಗೂ ಕಾಂಗ್ರೆಸ್ ಪಕ್ಷಕ್ಕೂ ಸಂಬಂಧವಿಲ್ಲ. ಕಳ್ಳತನ, ಹಗರಣದಿಂದ ತಪ್ಪು ಮಾಡಿದವರ ಮೇಲೆ ದಾಳಿ ಮಾಡಿ, ಶಿಕ್ಷಿಸುವುದು ಇಲಾಖೆ ಕೆಲಸ. ಹಿಂದೆ ನಮ್ಮ ಪಕ್ಷದವರ ಮೇಲೂ ಆದಾಯ ತೆರಿಗೆ ಇಲಾಖೆ ಸಾಕಷ್ಟು ಬಾರಿ ದಾಳಿ ಮಾಡಿದೆ. ಹಾಗಾಗಿ ಬಳ್ಳಾರಿ ಗಣಿಧಣಿಗಳ ಮೇಲಿನ ದಾಳಿಗೆ ಕಾಂಗ್ರೆಸ್ ಕಾರಣ ಎನ್ನುವುದು ಸರಿಯಲ್ಲ ಎಂದರು.

ಹೈಕಮಾಂಡ್ ನಿರ್ಲಕ್ಷದ ಪ್ರಶ್ನೆ:
ಇದು ಮಾಧ್ಯಮದವರ ತಪ್ಪು ಗ್ರಹಿಕೆ. ಎಐಸಿಸಿ ಯಾಗಲಿ, ಕೇಂದ್ರ ಸರ್ಕಾರವಾಗಲಿ ಕರ್ನಾಟಕ ರಾಜ್ಯವನ್ನು ಎಂದು ನಿರ್ಲಕ್ಷ್ಯ ಮಾಡಿಲ್ಲ. ಒಂದು ವೇಳೆ ನಿರ್ಲಕ್ಷಿಸಿದ್ದೇ ನಿಜ ಎನ್ನುವುದಾದರೆ, ಕೃಷ್ಣ ಅವರು, ಖರ್ಗೆ, ಮುನಿಯಪ್ಪ ಅವರು ಕೇಂದ್ರ ಸಂಪುಟದಲ್ಲಿ ಹೇಗೆ ಸಚಿವರಾಗುತ್ತಿದ್ದರು ಎಂದು ಮರು ಪ್ರಶ್ನೆ ಎಸೆದರು.

ಲಿಂಗಾಯತ ಲಾಬಿಗೆ ಮಣಿಯದ ಹೈಕಮಾಂಡ್?:
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಲಿಂಗಾಯತ ಸಮುದಾಯದ ಮುಖಂಡ ಎಚ್ ಕೆ ಪಾಟೀಲ್ ಪ್ರಮುಖ ಆಕಾಂಕ್ಷಿಯಾಗಿದ್ದರು. ಎಸ್ ಎಂ ಕೃಷ್ಣ ಅವರ ಕೃಪಾಕಟಾಕ್ಷದಿಂದ ಪರಮೇಶ್ವರ ಅವರಿಗೆ ಸ್ಥಾನ ಲಭಿಸಿದೆ ಎಂಬ ಸುದ್ದಿಗೆ ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷ, ಇಲ್ಲಿ ಸಮುದಾಯ ಮುಖ್ಯವಲ್ಲ. ಜ್ಯಾತ್ಯಾತೀತ ದೃಷ್ಟಿಕೋನದಿಂದ ಕಾಂಗ್ರೆಸ್ ಮುನ್ನೆಡೆಯಲಿದೆ. ಪಕ್ಷದ ಬಲವರ್ಧನೆಗೆ ಎಲ್ಲರೂ ಒಟ್ಟಾಗಿ ದುಡಿಯಲು ಸಿದ್ಧರಿದ್ದಾರೆ ಎಂದರು.

ಶಾಸಕರ ಸಮಸ್ಯೆ ಬಗೆಹರಿಸುತ್ತೀವಿ: ಸ್ವಭಾವತಃ ಪರಮೇಶ್ವರ ಅವರು ಸ್ನೇಹ ಜೀವಿ. ಹೈಕಮಾಂಡ್ ಸಮರ್ಥರನ್ನು ಆಯ್ಕೆ ಮಾಡಿದೆ. 23ನೇ ಕೆಪಿಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಪರಮೇಶ್ವರ್ ಅವರ ನೇಮಕವನ್ನು ಎಲ್ಲ ಹಿರಿಯ ಕಾಂಗ್ರೆಸ್ ನಾಯಕರು ಸ್ವಾಗತಿಸಿದ್ದಾರೆ. ಅಪರೇಷನ್ ಕಮಲಕ್ಕೆ ಇನ್ನು ಬ್ರೇಕ್ ಬೀಳುವುದು ಖಂಡಿತ. ಅತೃಪ್ತ ಶಾಸಕರ ಸಮಸ್ಯೆಯನ್ನು ಈಗಾಗಲೇ ನಮ್ಮ ನೂತನ ಅಧ್ಯಕ್ಷರೊಡನೆ ಚರ್ಚಿಸಿದ್ದೀನಿ. ಶೀಘ್ರದಲ್ಲಿ ಸೂಕ್ತ ಪರಿಹಾರ ಕಂಡುಕೊಳ್ಳುತ್ತೇವೆ ಎಂದು ಸಿದ್ದರಾಮಯ್ಯ ಸುದ್ದಿಗೋಷ್ಠಿಯಲ್ಲಿ ಹೇಳಿದರು.


ವಿಡಿಯೋಗಳು:
.ದೇವೇಗೌಡ ಆಧುನಿಕ ಭಸ್ಮಾಸುರ: ಬಚ್ಚೇಗೌಡ | ಖೆಡ್ಡಾಕ್ಕೆ ಬಿದ್ದ ಬಿಜೆಪಿ ಶಾಸಕ ಸುರೇಶ್ ಗೌಡ |ಶಾಸಕನಿಗೆ ಡಿಮ್ಯಾಂಡು |

ರಿಂಗ ರಿಂಗಾ ಪಾಲಿಟಿಕ್ಸ್ ರಿಮಿಕ್ಸ್ | ಟ್ವಿಟ್ಟರಲ್ಲಿ ಹಿಂಬಾಲಿಸಿ | ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಸುದ್ದಿ | ಹೂವಿನಂಗಡಿ 24/7 | ಕನ್ನಡ ಸುದ್ದಿಗಳ SMS

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X