Get Updates
Get notified of breaking news, exclusive insights, and must-see stories!

ರಾಹುಲ್ ಗಾಂಧಿಯನ್ನು ಗಂಗಾನದಿಗೆ ಎಸೆಯಿರಿ!

Sharad Yadav
ಪಾಟ್ನಾ, ಅ. 26 : ಕಾಂಗ್ರೆಸ್‌ನ ಯುವ ನಾಯಕ ರಾಹುಲ್ ಗಾಂಧಿ ವಿರುದ್ಧ ಸೋಮವಾರ ತೀವ್ರ ವಾಗ್ದಾಳಿ ಮುಂದುವರಿಸಿರುವ ಸಂಯುಕ್ತ ಜನತಾದಳ ಮುಖಂಡ ಶರದ್ ಯಾದವ್, ರಾಹುಲ್ ಗಾಂಧಿ ಅವರನ್ನು ಗಂಗಾ ನದಿಗೆ ಎಸೆಯಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೆಲವರು ಭಾಷಣ ಬರೆದು ಕೊಡುತ್ತಾರೆ. ಅದನ್ನು ನೀವು ಓದುತ್ತೀರಿ. ನಿಮ್ಮನ್ನು ಎತ್ತಿ ಗಂಗಾನದಿಗೆ ಎಸೆಯಬೇಕು. ಜನರು ವಿವೇಚನಾರಹಿತರಾಗಿರುವುದು ಈ ದೇಶದ ದುರದೃಷ್ಟ ಎಂದು ಯಾರ ಹೆಸರನ್ನೂ ಪ್ರಸ್ತಾಪಿಸದೆ ಶರದ್ ಹೇಳಿದರು.

ರಾಹುಲ್ ಸಾರ್ವಜನಿಕ ಸಭೆಗಳಲ್ಲಿ ಮಾತನಾಡುವಾಗ ತನ್ನ ಶರ್ಟ್‌ನ ತೋಳುಗಳನ್ನು ಮೇಲೇರಿಸುವುದನ್ನು ಅನುಕರಿಸಿ ತೋರಿಸಿದರು. ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ರಾಹುಲ್ ವಾಗ್ದಾಳಿ ನಡೆಸಿದ್ದಾರೆ. ಬಿಹಾರ ಪ್ರಕಾಶಿಸುತ್ತಿಲ್ಲ. ಅದು 2004ರಲ್ಲಿ ಎನ್‌ಡಿಎ ಸರಕಾರದ ಭಾರತ ಪ್ರಕಾಶಿಸುತ್ತಿದೆ ಎಂಬ ಘೋಷಣೆಯಂತಿದೆ ಅಷ್ಟೆ.

ಏಕೆಂದರೆ ಬಿಹಾರವನ್ನೂ ಒಳಗೊಂಡಂತೆ ಭಾರತದಲ್ಲಿ ಕೋಟ್ಯಂತರ ಜನರು ಇನ್ನೂ ಬಡತನರೇಖೆಗಿಂತ ಕೆಳಗಿನ ಬದುಕು ಸಾಗಿಸುತ್ತಿದ್ದಾರೆ. ಬಿಹಾರಿಗಳು ಇಡೀ ದೇಶ ಕಟ್ಟುವವರು. ಆದರೆ ಅವರ ಸ್ವಂತ ರಾಜ್ಯ ಬಿಹಾರದಲ್ಲಿ ರುವ ಸರಕಾರದಿಂದ ನಿರಾಶರಾಗಿದ್ದಾರೆ ಎಂದು ರಾಹುಲ್ ಟೀಕಿಸಿದ್ದಾರೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಚುನಾವಣಾ ಪ್ರಚಾರಕ್ಕೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಬರುವುದನ್ನು ತಡೆದಿದ್ದಾರೆ. ಆದರೆ ಮೋದಿಯವರ ಚುನಾವಣಾ ತಂತ್ರಗಳನ್ನು ಅಳವಡಿಸಿಕೊಂಡಿದ್ದಾರೆ ಎಂದು ರಾಹುಲ್ ಆರೋಪಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+