ಆದಾಯ ತೆರಿಗೆ ದಾಳಿ ಬಗ್ಗೆ ರೆಡ್ಡಿಗಳಿಗೆ ಸುಳಿವಿತ್ತು

ಅಲ್ಲದೇ, ಈ ದಾಳಿಯ ಹಿನ್ನಲೆಯಲ್ಲಿ ಭಾನುವಾರ ರಾತ್ರಿಯೇ ಸಚಿವ ಜಿ. ಜನಾರ್ದನರೆಡ್ಡಿ ಅವರು ಹೈದರಾಬಾದ್‌ಗೆ ವಿಶೇಷ ವಿಮಾನದಲ್ಲಿ ತೆರಳುವ ಉದ್ದೇಶ ಹೊಂದಿದ್ದರು. ಆದರೆ, ಭಾನುವಾರ ಸಂಜೆ ಸುರಿದ ಭಾರೀ ಮಳೆಯ ಕಾರಣ ವಿಮಾನ ಜಿಂದಾಲ್‌ನ ಏರ್‌ಸ್ಟ್ರಿಪ್‌ನಲ್ಲಿ ಇಳಿಯಲು ಸಿಬ್ಬಂದಿ ಪರವಾನಿಗೆ ನೀಡಲಿಲ್ಲ. ಕಾರಣ ವಿಮಾನ ಬೆಂಗಳೂರಿಗೆ ಹಿಂದಿರುಗಿತು. ಜಿ. ಜನಾರ್ದನರೆಡ್ಡಿ ಸೋಮವಾರ ಬಳ್ಳಾರಿಯಲ್ಲೇ ಉಳಿಯಬೇಕಾಯಿತು ಎಂದು ಮೂಲಗಳು ದೃಢಪಡಿಸಿವೆ.
ಏನೇನು ಆಯ್ತು, ಎಷ್ಟೋತ್ತಿಗೆ? : ಸಚಿವರಾದ ಜಿ. ಜನಾರ್ದನರೆಡ್ಡಿ ನಿತ್ಯದ ಆಪ್ತರ ಬಳಗದ ಬಳ್ಳಾರಿ ಮತ್ತು ಹೊಸಪೇಟೆ ಸದಸ್ಯರುಗಳ ಕಚೇರಿ ಮತ್ತು ನಿವಾಸಗಳ ಮೇಲೆ ಸೋಮವಾರ ಬೆಳಗ್ಗೆಯಿಂದಲೇ ಆದಾಯ ತೆರಿಗೆ ಅಧಿಕಾರಿಗಳು ಭಾರೀ ದೊಡ್ಡ ಪ್ರಮಾಣದಲ್ಲಿ ದಾಳಿ ನಡೆಸಿದರು.
ಸೋಮವಾರ ನಸುಕಿನಲ್ಲಿ ಬಳ್ಳಾರಿಯ ಸ್ಟಾರ್ ಹೋಟಲ್‌ಗಳಲ್ಲಿ (ಪೋಲ ಪ್ಯಾರಡೈಸ್) ಕಾಣಿಸಿಕೊಂಡ ಐಟಿ ಅಧಿಕಾರಿಗಳ ತಂಡ 8 ಗಂಟೆ ಸುಮಾರಿಗೆ ಉದ್ದೇಶಿತ ವ್ಯಕ್ತಿಗಳ, ಸಂಸ್ಥೆಗಳ ಪ್ರದೇಶದ ನೀಲನಕ್ಷೆಗಳನ್ನು ಕೈಯಲ್ಲಿ ಹಿಡಿದುಕೊಂಡು ಒಂದು ಸುತ್ತು ಹಾಕಿ ಅವುಗಳ ಸುತ್ತಲೂ ಬಿಗಿ ಪಹರೆಯನ್ನು ಹಾಕಿದ್ದರು.
ಈ ಮಧ್ಯೆ ಬೆಂಗಳೂರು, ಹುಬ್ಬಳ್ಳಿ, ಇನ್ನಿತರೆ ಸ್ಥಳಗಳ ರಿಜಿಷ್ಟ್ರೇಷನ್ ನಂಬರ್ ಹೊಂದಿದ್ದ ಕಾರ್‌ಗಳು ನೂರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಬಳ್ಳಾರಿ - ಹೊಸಪೇಟೆಯಲ್ಲಿ ಏಕಾಏಕಿ ಪ್ರತ್ಯಕ್ಷವಾಗಿ ಅನೇಕರಲ್ಲಿ ಅಚ್ಚರಿ ಮೂಡಿಸಿದವು. ಈ ವಾಹನಗಳಲ್ಲಿ 300ಕ್ಕೂ ಹೆಚ್ಚಿನ ಸಿಬ್ಬಂದಿ ಹಾಗೂ ಕೇಂದ್ರ ಸರ್ಕಾರದ ಆರ್ಮ್ಡ್ (ಶಸ್ತ್ರಸಜ್ಜಿತ) ಭದ್ರತಾ ಸಿಬ್ಬಂದಿ ಉದ್ದೇಶಿತ ದಾಳಿಗಾಗಿ ನಿಯೋಜನೆಗೊಂಡು ಪ್ರಯಾಣಿಸಿದ್ದರು.
ಕೂಡ್ಲಿಗಿ ಶಾಸಕ ಮೊದಲ ಟಾರ್ಗೆಟ್ : ಅಧಿಕಾರಿಗಳ ತಂಡ ಕೂಡ್ಲಿಗಿ ಶಾಸಕ ಬಿ. ನಾಗೇಂದ್ರ ಅವರ ನೆಹರೂ ಕಾಲೋನಿಯ ಮನೆಯನ್ನು ಪ್ರವೇಶಿಸಿ ದಾಳಿಯನ್ನು ಪ್ರಾರಂಭ ಮಾಡಿದರು. ನಂತರ ಕಂಪ್ಲಿ ಶಾಸಕ ಟಿ.ಎಚ್. ಸುರೇಶ್‌ಬಾಬು ಅವರ ಬಳ್ಳಾರಿಯ ಬಸವನಕುಂಟೆಯ ಮನೆಯ ಮೇಲೆ ದಾಳಿಯನ್ನು ಪ್ರಾರಂಭ ಮಾಡಿದರು.
ನಂತರ, ಸಚಿವ ಜಿ. ಜನಾರ್ದನರೆಡ್ಡಿಯ ಖಾಸಗಿ ಆಪ್ತಕಾರ್ಯದರ್ಶಿ ಅಲಿಖಾನ್‌ನ ಇನ್ನಾರೆಡ್ಡಿ ಕಾಲೊನಿಯ ಮನೆಯ ಸುತ್ತಲೂ ಬಿಗಿಪಹರೆಯನ್ನು ಏರ್ಪಡಿಸಿದ ಅಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿಯ ತಂಡ, 9 ಗಂಟೆ ಸುಮಾರಿಗೆ ಒಳ ಪ್ರವೇಶಿಸಿ ದಾಳಿಯನ್ನು ಪ್ರಾರಂಭಿಸಿತು.
ಅಲಿಖಾನ್‌ನ ಮನೆಯ ಆಸುಪಾಸಿನ ಕಾರ್ ಶೆಡ್‌ಗಳಲ್ಲಿ ಕಂಪ್ಲಿ ಶಾಸಕ ಟಿ.ಎಚ್. ಸುರೇಶ್‌ಬಾಬು ಅವರ ಕಾರ್‌ಗಳು ಇದ್ದು, ಆ ಕಾರ್‌ಗಳನ್ನು ಕೂಡ ಅಧಿಕಾರಿಗಳು ವಶಕ್ಕೆ ತೆಗೆದುಕೊಳ್ಳುವ ಸಾಧ್ಯತೆಗಳಿವೆ. ಈ ಕಾರ್‌ಗಳಲ್ಲಿ ಅವರ ಅದಿರು ಸಾಗಾಣಿಕೆಯ ಭಾರೀ ವ್ಯವಹಾರದ ದಾಖಲಾತಿಗಳು ಇವೆ ಎನ್ನುವ ಶಂಕೆ ಅಧಿಕಾರಿಗಳ ವಲಯದಲ್ಲಿದೆ.
ಟಾರ್ಗೆಟ್ ಓಎಂಸಿ: ಆದಾಯ ತೆರಿಗೆ ಅಧಿಕಾರಿಗಳ ತಂಡ ಸಚಿವ ಜಿ. ಜನಾರ್ದನರೆಡ್ಡಿ ಮತ್ತು ಅವರ ವ್ಯವಸ್ಥಾಪಕ ನಿರ್ದೇಶಕತ್ವದ ಓಬಳಾಪುರಂ ಮೈನಿಂಗ್ ಕಾರ್ಪೊರೇಷನ್ ಕಚೇರಿ ಮತ್ತು ಮನೆಗಳ ಮೇಲೆ ಮಧ್ಯಾಹ್ನ 3 ಗಂಟೆಯವರೆಗೂ ಯಾವುದೇ ದಾಳಿ ನಡೆದಿರಲಿಲ್ಲ. ಕಬ್ಬಿಣದ ಅದಿರು ಸಾಗಿಸುವ ಏಜೆಂಟ್, ಖಾಸಗಿ ಹಣಕಾಸು ವ್ಯವಹಾರ ನಿರ್ವಹಿಸುವ, ಬಡ್ಡಿ ವ್ಯಾಪಾರಿ ಚೋರ್ ಬಾಬುಲಾಲ್ ಎನ್ನುವವರ ಮನೆ, ಕಚೇರಿ ಸೇರಿ ಇನ್ನಿತರೆ ಕೇಂದ್ರಗಳ ಮೇಲೆ ಕೂಡ ದಾಳಿ ನಡೆದಿದೆ.
ಓಬಳಾಪುರಂ ಮೈನಿಂಗ್ ಕಾರ್ಪೊರೇಷನ್‌ನ ಬಳ್ಳಾರಿಯ ವಕೀಲ ಪಾಟೀಲ್ ಸಿದ್ಧಾರೆಡ್ಡಿ ಅವರ ಸುಕೃತ ನರ್ಸಿಂಗ್ ಹೋಂ ಪಕ್ಕದ ಮನೆಯ ಮುಂದೆ ಮಧ್ಯಾಹ್ನದ ವೇಳೆಗೆ ಭದ್ರತಾ ಸಿಬ್ಬಂದಿ ಜಮಾವಣೆಗೊಂಡಿತ್ತು. ಈ ಮನೆಯ ಮೇಲೆ ಯಾವುದೇ ಕ್ಷಣದಲ್ಲಿ ದಾಳಿ ನಡೆಯುವ ಸಾಧ್ಯತೆಗಳಿವೆ.
ಆಕ್ಸಿಸ್ ಬ್ಯಾಂಕ್‌ನ ಬಳ್ಳಾರಿಯ ಪಾರ್ವತಿನಗರ ಶಾಖೆ, ಹೊಸಪೇಟೆಯ ಶಾಖೆಗಳ ಮೇಲೆ ದಾಳಿ ನಡೆಸಿದ ತಂಡ, ಉದ್ದೇಶಿತ ವ್ಯಕ್ತಿ - ಸಂಸ್ಥೆಗಳ ವಿವಿಧ ಖಾತೆಗಳ ಮಾಹಿತಿ ಪಡೆದು ಅವುಗಳನ್ನು ಜಪ್ತಿ (ಸೀಜ್) ಮಾಡಿದ್ದಾರೆ.
ಹೊಸಪೇಟೆ: ಹೊಸಪೇಟೆಯ ವಿವಾದಿತ ಬೆಲಿಕೇರಿ ಬಂದರು ಅದಿರು ಕಳ್ಳತನ ಪ್ರಕರಣದ ಆರೋಪಿಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿರುವ ಐಎಲ್‌ಸಿ ಕಂಪನಿಯ ಪಾಲುದಾರ ಸೋಮಶೇಖರ್, ಗೊಗ್ಗ ಬ್ರದರ್‍ಸ್‌ನ ಓರ್ವ ಪಾಲುದಾರ, ಆರ್‌ಪಿಸಿ ಮೈನ್ಸ್‌ನ ಹಿರಿಯ ಸಿಬ್ಬಂದಿ ಜಂಬಯ್ಯ ಅವರ ಮನೆ ಮೇಲೆ ದಾಳಿ ನಡೆಯಿತು.
ನಂತರ ಬೆಲಿಕೇರಿ ಬಂದರು ಅದಿರು ಕಳ್ಳತನ ಪ್ರಮುಖ ಆರೋಪಿಗಳಾದ ಖಾರದಪುಡಿ ಮಹೇಶ್ ಮತ್ತು ಸ್ವಸ್ತಿಕ್ ನಾಗರಾಜ್ ಅವರ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿದ ಅಧಿಕಾರಿಗಳ ತಂಡ ಈ ಎಲ್ಲಾ ವ್ಯಕ್ತಿ - ಸಂಸ್ಥೆಗಳು ವ್ಯವಹಾರ ನಡೆಸಿದ ಆಕ್ಸಿಸ್ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ, ವಿಕಾಸ್ ಕೋ ಆಪರೇಟಿವ್ ಬ್ಯಾಂಕ್‌ಗಳ ಮೇಲೆ ದಾಳಿ ನಡೆಸಿ ವಿವಿಧ ಖಾತೆಗಳ ಮಾಹಿತಿ ಪಡೆದು, ಕೆಲವನ್ನು ಜಪ್ತಿ ಮಾಡಿದ್ದಾರೆ. ಈ ದಾಳಿ 3 ದಿನಗಳ ಕಾಲ ನಡೆಯುವ ಮಾಹಿತಿ ಇದೆ.
ವಿಡಿಯೋಗಳು:.ದೇವೇಗೌಡ ಆಧುನಿಕ ಭಸ್ಮಾಸುರ: ಬಚ್ಚೇಗೌಡ | ಖೆಡ್ಡಾಕ್ಕೆ ಬಿದ್ದ ಬಿಜೆಪಿ ಶಾಸಕ ಸುರೇಶ್ ಗೌಡ |ಶಾಸಕನಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು |
ರಿಂಗ ರಿಂಗಾ ಪಾಲಿಟಿಕ್ಸ್ ರಿಮಿಕ್ಸ್ | ಟ್ವಿಟ್ಟರಲ್ಲಿ ಹಿಂಬಾಲಿಸಿ | ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಸುದ್ದಿ | ಹೂವಿನಂಗಡಿ 24/7 | ಕನ್ನಡ ಸುದ್ದಿಗಳ SMS
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications