ಸೋಮವಾರ ಕೈಪಡೆಯ ಸಾಮೂಹಿಕ ರಾಜೀನಾಮೆ
ಬೆಂಗಳೂರು,
ಅ. 24 : ಪ್ರತಿಪಕ್ಷದ ಶಾಸಕರನ್ನು ಆಪರೇಷನ್ ಕಮಲದ ಖೆಡ್ಡಕ್ಕೆ ಕೆಡವುತ್ತಿರುವ ಬಿಜೆಪಿ ವಿರುದ್ಧ ಕಾಂಗ್ರೆಸ್ ತಿರುಗಿ ಬಿದ್ದಿದೆ. ಆಪರೇಷನ್ ಮುಂದುವರಿಸಿದಲ್ಲಿ ಸರಕಾರದ ವಿರುದಟ್ಧ ಜನಾಂದೋಲನದ ಜತೆಗೆ, ಶಾಸಕರು ಸಾಮೂಹಿಕ ರಾಜೀನಾಮೆ ನೀಡಿ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಸಿ, ರಾಷ್ಟ್ರಪತಿ ಆಳ್ವಿಕೆ ಹೇರುವ ಬೆದರಿಕೆ ಹಾಕಿದೆ. id="toptextpromo">ಸೋಮವಾರ
ಸಭೆ : ಈ ಬಗ್ಗೆ ಚರ್ಚಿಸಲು ಸೋಮವಾರ ಶಾಸಕಾಂಗ ಸಭೆ ಕರೆಯಲಾಗಿದೆ. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿ, ಎಲ್ಲ ಬೆಳವಣಿಗೆಗಳನ್ನು ವಿವರಿಸುವ ನಿರ್ಣಯವನ್ನು ನಾಯಕರು ಕೈಗೊಂಡಿದ್ದಾರೆ. ಬಿಜೆಪಿಯಿಂದ ಸಿಡಿದು ತಟಸ್ಥವಾಗಿ ಉಳಿದಿರುವ ಲಿಂಗಸುಗೂರು ಶಾಸಕ ಮಾನಪ್ಪ ವಜ್ಜಲ್‌ರನ್ನು ವಿಧಾನಸಭೆ ಸದಸ್ಯತ್ವದಿಂದ ಅನರ್ಹಗೊಳಿಸುವಂತೆ ಸ್ಪೀಕರ್‌ಗೆ ಬಿಜೆಪಿ ದೂರು ನೀಡಿದೆ. id='are-slot-1' class='oiad oi-axt oiadv'> id='top-searched-articles'>ವಿಪ್
ಜಾರಿ ಗೊಳಿಸಿದ್ದರೂ,ವಿಶ್ವಾಸಮತ ಯಾಚನೆ ವೇಳೆ ವಜ್ಜಲ್ ಪಾಲ್ಗೊಳ್ಳಲಿಲ್ಲ. ಪಕ್ಷದ ಸಂಪರ್ಕದಿಂದ ದೂರ ಉಳಿದಿರುವ ಅವರಿಗೆ ಮನವಿ ಮಾಡಿದರೂ ಪ್ರತಿಕ್ರಿಯಿಸಿಲ್ಲ. ವಿಪ್ ಉಲ್ಲಂಘನೆ ಆರೋಪದ ಮೇರೆಗೆ ಕಾರಣ ಕೇಳಿ ವಜ್ಜಲ್ ಅವರಿಗೆ ಅ.14ರಂದೇ ನೋಟಿಸ್ ಜಾರಿ ಮಾಡಿತ್ತು. ಅದಕ್ಕೆ ಉತ್ತರ ಬಂದಿಲ್ಲ. ಇದರಿಂದ ಪಕ್ಷಾಂತರ ನಿಷೇಧ ಕಾಯಿದೆ ಅನ್ವಯ ಸದಸ್ಯತ್ವ ಅನರ್ಹಗೊಳಿಸುವಂತೆ ಸ್ಪೀಕರ್‌ಗೆ ಮನವಿ ಮಾಡಲಾಗಿದೆ ಎಂದು ಸಚೇತಕ ಜೀವರಾಜ್ ತಿಳಿಸಿದ್ದಾರೆ.











Click it and Unblock the Notifications