ಶೋಭಾ ಕರಂದ್ಲಾಜೆಯ ಸಿಡಿ ನಮ್ಮ ಬಳಿ ಇದೆ : ಸಿದ್ದು
ಮೈಸೂರು,
ಅ. 24 : ಆಪರೇಷನ್ ಕಮಲ ನಡೆಸಲು ಶೋಭಾ ಕರಂದ್ಲಾಜೆ ಸೇರಿದಂತೆ ಬಿಜೆಪಿಯ ಹಲವು ಮುಖಂಡರು ಕಾಂಗ್ರೆಸ್ ಶಾಸಕರೊಂದಿಗೆ ಮಾತುಕತೆ ನಡೆಸಿರುವ ದಾಖಲೆ ನಮ್ಮ ಬಳಿಯಿದೆ ಇದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಿಡಿಸಿದ ಹೊಸ ಬಾಂಬ್. id="toptextpromo">ಇಲ್ಲಿ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೋಭಾ ಕರಂದ್ಲಾಜೆ ಅವರು ನಾಗಮಂಗಲ ಶಾಸಕ ಸುರೇಶ್‌ಗೌಡರನ್ನು ಭೇಟಿ ಮಾಡಿದ ದಾಖಲೆ ನಮ್ಮಲ್ಲಿದೆ. ಸುರೇಶ್‌ಗೌಡ ಅವರನ್ನು ಭೇಟಿ ಮಾಡಿಲ್ಲವೆಂದು ಶೋಭಾ ಆತ್ಮಸಾಕ್ಷಿಯಿಂದ ಹೇಳಲಿ ಎಂದು ಸವಾಲು ಹಾಕಿದರು. ಗುಬ್ಬಿ ಶಾಸಕ ಶ್ರೀನಿವಾಸ್ ಅವರು ಬಹಿರಂಗಪಡಿಸಿರುವ ಸಿಡಿ ಬಗ್ಗೆ ತನಿಖೆ ನಡೆಸಿದರೆ ಸತ್ಯಾಂಶ ಹೊರಗೆ ಬರುವ ಭೀತಿ ಅವರಿಗಿದೆ. ಈ ಬಗ್ಗೆ ಶ್ರೀನಿವಾಸ್ ಜತೆ ಮಾತನಾಡಿ ಲೋಕಾಯುಕ್ತರಿಗೆ ದೂರು ನೀಡುವಂತೆ ಹೇಳುತ್ತೇನೆ ಎಂದು ತಿಳಿಸಿದರು. id='are-slot-1' class='oiad oi-axt oiadv'> id='top-searched-articles'>ಬಿಜೆಪಿಯವರಿಗೆ
ಹಣ ಹಾಗೂ ಅಧಿಕಾರದ ಮದದಿಂದ ಏನು ಮಾಡಿದರೂ ನಡೆಯುತ್ತದೆ ಎನ್ನುವ ಉದ್ಧಟತನ ಬಂದಿದೆ. ಹೀಗಾಗಿ ಮುಖ್ಯಮಂತ್ರಿ ಹಾಗೂ ಸಚಿವರು ಯಾವುದೇ ಕಾರ್ಯಕ್ರಮದಲ್ಲಿ ಪಾಲ್ಗೊಂಡರೇ ಕಪ್ಪು ಪಟ್ಟಿ ಧರಿಸಿ ಪ್ರತಿಭಟಿಸಿ ಎಂದು ಪಕ್ಷದ ಕಾರ್ಯಕರ್ತರಿಗೆ ಹೇಳಿದ್ದೇವೆ. ಮುಂದೆ ಜೈಲ್ ಭರೋ ಚಳವಳಿ ಮಾಡುತ್ತೇವೆ ಎಂದು ಎಚ್ಚರಿಸಿದರು.











Click it and Unblock the Notifications