ಅಪ್ಪಚ್ಚುಗೆ ವಿಶ್ವನಾಥ್ ರಿಂದ 'ಆಪರೇಷನ್ ಹಸ್ತ'?

ಏಕೆಂದರೆ ಮೊದಲೇ ಸಚಿವ ಸ್ಥಾನ ನೀಡಿಲ್ಲವೆಂಬ ಅಸಮಾಧಾನವನ್ನು ಶಾಸಕ ಅಪ್ಪಚ್ಚು ರಂಜನ್ ಸಾರ್ವಜನಿಕವಾಗಿ ವ್ಯಕ್ತಪಡಿಸಿದ್ದರು. ಹೀಗಿರುವಾಗ ಕಾಂಗ್ರೆಸ್‌ನ ಮುಖಂಡರೊಂದಿಗೆ ಅದು ಕ್ಲೋಸಪ್ ನಗುಬೀರುತ್ತಾ ಕುಳಿತಿರುವುದನ್ನು ನೋಡಿದರೆ ಆಪರೇಷನ್ ಹಸ್ತಕ್ಕೆ ಅಪ್ಪಚ್ಚುರಂಜನ್ ಬಲಿಯಾದರೆ ಎಂಬ ಸಂಶಯ ಬಾರದಿರದು.
ಆದರೆ ಇಲ್ಲಿ ನಡೆದಿದ್ದೇ ಬೇರೆ. ಮೊನ್ನೆ ಶುಕ್ರವಾರ(ಅ.22) ಸಂಸದ ವಿಶ್ವನಾಥ್ ಮಡಿಕೇರಿಯ ಸುದರ್ಶನ ಅತಿಥಿಗೃಹದಲ್ಲಿ ಪತ್ರಿಕಾಗೋಷ್ಠಿ ನಡೆಸುತ್ತಿದ್ದರು. ಇದನ್ನರಿಯದೆ ಆಕಸ್ಮಿಕವಾಗಿ ಅಲ್ಲಿಗೆ ಶಾಸಕ ಅಪ್ಪಚ್ಚುರಂಜನ್ ಬಂದು ಬಿಟ್ಟರು. ಹೇಗೂ ಬಂದಾಗಿದೆ ಹಾಗಾಗಿ ಮಾತನಾಡಿಸದೆ ಹೋಗುವುದು ಸರಿಯಲ್ಲ ಎಂದು ಶಾಸಕ ಅಪ್ಪಚ್ಚುರಂಜನ್ ಸಂಸದ ವಿಶ್ವನಾಥ್ ಬಳಿ ಕುರಿತು ಕುಶಲೋಪರಿ ವಿಚಾರಿಸಿದರಲ್ಲದೆ, ತಮ್ಮ ಕ್ಲೋಸಪ್ ನಗೆಬೀರಿ ಛಾಯಾಗ್ರಾಹಕರಿಗೆ ಪೋಸ್ ನೀಡಿದರು. ಇದೇನ್ 'ಆಪರೇಷನ್ ಹಸ್ತ'ನಾ ಎಂದು ಛೇಡಿಸಿದ ಪತ್ರಕರ್ತರಿಗೆ ಇಲ್ಲ 'ಸ್ನೇಹ ಸಮ್ಮಿಲನ' ಎಂದಷ್ಟೆ ಹೇಳಿ ಜಾಗ ಖಾಲಿ ಮಾಡಿದರು.
ವಿಡಿಯೋಗಳು:.ಖೆಡ್ಡಾಕ್ಕೆ ಬಿದ್ದ ಬಿಜೆಪಿ ಶಾಸಕ ಸುರೇಶ್ ಗೌಡ |ಶಾಸಕನಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು | ರಿಂಗ ರಿಂಗಾ ಪಾಲಿಟಿಕ್ಸ್ ರಿಮಿಕ್ಸ್ |
ಟ್ವಿಟ್ಟರಲ್ಲಿ ನಮ್ಮನ್ನು ಹಿಂಬಾಲಿಸಿ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7 | ಕನ್ನಡ ಸುದ್ದಿಗಳ SMS












Click it and Unblock the Notifications