ಕಾಮುಕ ಶಿಕ್ಷಕನಿಗೆ ಬಾರಿಸಿದ ಜಯ ಕರ್ನಾಟಕ

School teacher thrashed for indecent behaviour
ಬೆಂಗಳೂರು, ಅ. 23 : ಮಕ್ಕಳಿಗೆ ಪಾಠ ಮಾಡಿ ಸನ್ನಡತೆಯ ದಾರಿಯನ್ನು ತೋರಬೇಕಾಗಿದ್ದ ಪ್ರಾಧ್ಯಾಪಕನಿಗೆ ವಿದ್ಯಾರ್ಥಿನಿಯರೊಂದಿಗೆ ಅಶ್ಲೀಲವಾಗಿ ವರ್ತಿಸಿದ್ದಕ್ಕೆ ವಿದ್ಯಾರ್ಥಿನಿಯರ ಪೋಷಕರು ಮತ್ತು ಜಯ ಕರ್ನಾಟಕ ಕಾರ್ಯಕರ್ತರು 'ಸಖತ್ ಪಾಠ' ಕಲಿಸಿದ್ದಾರೆ.

ವೈಟ್ ಫೀಲ್ಡ್ ನಲ್ಲಿರುವ ಹೋಲಿ ಕ್ರಾಸ್ ಕ್ರಿಶ್ಚಿಯನ್ ಶಾಲೆಯಲ್ಲಿ ಇಂಗ್ಲಿಷ್ ಪಾಠ ಮಾಡುತ್ತಿದ್ದ ಫಿಲಿಪ್ಸ್ ಎಂಬಾತನಿಗೆ ಜಯ ಕರ್ನಾಟಕ ಕಾರ್ಯಕರ್ತರು ಶಾಲೆಗೇ ನುಗ್ಗಿ ಮನಬಂದಂತೆ ಥಳಿಸಿದ್ದಾರೆ. ಈ ಫಿಲಿಪ್ಸ್ ಎಂಬ ಕಾಮುಕ ಶಿಕ್ಷಕ ಶಾಲೆಯ ವೈಸ್ ಪ್ರಿನ್ಸಿಪಾಲ್ ಕೂಡ.

ಹತ್ತನೇ ಕ್ಲಾಸಿನಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯರು ಮುಜುಗರವಾಗುವಂತೆ ಬೇಕಂತಲೇ ಲೈಂಗಿಕ ವಿಷಯದ ಬಗ್ಗೆ ಪ್ರಸ್ತಾಪಿಸುವುದು, ಕುಡಿತ ಜೂಜಿನ ಬಗ್ಗೆ ಮಾತನಾಡುವುದು, ಅಶ್ಲೀಲವಾದ ಪದಗಳನ್ನು ಉಚ್ಛರಿಸುವುದನ್ನು ಮಾಡುತ್ತಿದ್ದ. ಇರುವ ಪೋರ್ಷನ್ ಮುಗಿಸದೇ ಸಲ್ಲದ, ಮುಜುಗರವಾಗುವಂಥ ವಿಷಯದ ಬಗ್ಗೆ ಏಕೆ ಮಾತನಾಡುತ್ತೀರಿ ಎಂದು ಕೆಲ ವಿದ್ಯಾರ್ಥಿನಿಯರು ಕೇಳಿದ್ದಕ್ಕೆ, ಬೇಕಿದ್ದರೆ ಹಿಂದಿನ ಬೆಂಚಿಗೆ ಹೋಗಿ ಕೂಡಿ ಎಂದು ದಬಾಯಿಸಿದ್ದಾನೆ. ಹುಡುಗರು ಲೈಂಗಿಕತೆಗೆ ಸಂಬಂಧಿಸಿದಂತೆ ಚಿತ್ರಗಳನ್ನು ಬರೆದಾಗ ಬೇಕಂತಲೇ ಅವರನ್ನು ಬೆಂಬಲಿಸಿದ್ದಾನೆ ಎಂದು ವಿದ್ಯಾರ್ಥಿನಿಯರು ದೂರಿದ್ದಾರೆ.

ಕೆಲ ದಿನಗಳಿಂದ ಅನುಚಿತ ವರ್ತನೆಯನ್ನು ಮುಂದುವರಿಸಿದಾಗ ವಿದ್ಯಾರ್ಥಿನಿಯರು ಪೋಷಕರಿಗೆ ದೂರು ನೀಡಿದ್ದಾರೆ. ಇದು ಜಯ ಕರ್ನಾಟಕ ಸಂಘಟನೆಯ ಕಾರ್ಯಕರ್ತರಿಗೆ ತಿಳಿದು ಕಣ್ಣು, ಕಿವಿ ಕೆಂಪಾಗುವಂತೆ ಬಾರಿಸಿದ್ದಾರೆ.

ಬೆಂಗಳೂರು ಕಾಲೇಜಿನ ಪ್ರಿನ್ಸಿಪಾಲನೊಬ್ಬ ಉಪನ್ಯಾಸಕಿಗೆ ಲೈಂಗಿಕ ಕಿರುಕುಳ ನೀಡಿದ್ದು ಬೆಳಕಿಗೆ ಬಂದ ಬೆನ್ನಲ್ಲೇ ಈ ವೈಸ್ ಪ್ರಿನ್ಸಿಪಾಲ್ ಈ ಹಗರಣ ಮಾಡಿಕೊಂಡಿದ್ದಾನೆ. ವಿದ್ಯಾರ್ಥಿಗಳಿಗೆ, ಇತರ ಕಿರಿಯ ಶಿಕ್ಷಕರಿಗೆ ಮಾದರಿಯಾಗಬೇಕಾದ ಪ್ರಿನ್ಸಿಪಾಲರುಗಳೇ ಹೀಗಾಡಿದರೆ ಹೇಗೆ?

ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಎಸ್ಎಮ್ಎಸ್ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+