Get Updates
Get notified of breaking news, exclusive insights, and must-see stories!

1 ಕೆಜಿ ಕಸಕ್ಕೆ 2 ರೂ. ಕರೆ ಮಾಡಿ ಪಡೆಯಿರಿ

Solid waste
ಬೆಂಗಳೂರು, ಅ. 21: ಮನೆಗಳಲ್ಲಿ ಉತ್ಪಾದನೆಯಾ ಗುವ ತ್ಯಾಜ್ಯ ಪದಾರ್ಥಗಳನ್ನು ಖರೀದಿ ಮಾಡಿ, ಅವುಗಳ ಮರುಬಳಕೆ ಕುರಿತು ನಾಗರಿಕರಿಗೆ ಅರಿವು ಮೂಡಿಸಲು 'ಕಸದಿಂದ ರಸ' ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಾಲಿಡ್ ವೇಸ್ಟ್ ಮ್ಯಾನೇಜ್‌ಮೆಂಟ್ ರೌಂಡ್ ಟೇಬಲ್ ಸಂಸ್ಥೆ(SWMRTB)ಯ ಸದಸ್ಯ ರಾಮಾಕಾಂತ್ ತಿಳಿಸಿದರು.

ಈ ಕಾರ್ಯಕ್ರಮದ ಮುಖೇನ ನಗರದ ನಿವಾಸಿಗಳಿಗೆ ತ್ಯಾಜ್ಯ ವಿಲೇವಾರಿಯ ಸೂಕ್ತ ಕ್ರಮಗಳು ಮತ್ತು ಎಲ್ಲೆಂದರಲ್ಲಿ ತ್ಯಾಜ್ಯಗಳನ್ನು ಬಿಸಾಡುವುದರಿಂದ ಆಗುವ ಪರಿಸರ ಮಾಲಿನ್ಯದ ಕುರಿತು ಅರಿವು ಮೂಡಿಸಲಾಗುವುದು. ಅಲ್ಲದೆ ತ್ಯಾಜ್ಯವಸ್ತುಗಳ ಮರುಬಳಕೆ ಕ್ರಮಗಳ ಬಗ್ಗೆ ತಿಳಿವಳಿಕೆ ನೀಡಲಾಗುವುದು ಎಂದು ತಿಳಿಸಿದರು.

ತ್ಯಾಜ್ಯ ಕೊಡಿ ಹಣ ಪಡೆಯಿರಿ: ನಗರದ ನಿವಾಸಿಗಳು ತಮ್ಮ ಮನೆಯಲ್ಲಿ ಉತ್ಪಾದನೆಯಾಗುವ ತ್ಯಾಜ್ಯವಸ್ತುಗಳನ್ನು ಒಣ ಮತ್ತು ಹಸಿ ತ್ಯಾಜ್ಯಗಳಾಗಿ ವಿಂಗಡಿಸಿ ತಮ್ಮ ಸಂಸ್ಥೆಗೆ ಮಾರಾಟ ಮಾಡಬಹುದು. ಇದರ ಪ್ರತಿಯಾಗಿ ಪ್ರತಿ ಕೆಜಿ ತ್ಯಾಜ್ಯಕ್ಕೆ 2 ರೂ. ಹಣ ಪಡೆಯಬಹುದೆಂದು ಅವರು ತಿಳಿಸಿದರು.

ನಗರದ ಬಡಾವಣೆಗಳಲ್ಲಿನ ಮನೆ, ಶಾಲೆ ಹಾಗೂ ವಸತಿ ಸಮುಚ್ಚಯಗಳಲ್ಲಿ ತ್ಯಾಜ್ಯವಸ್ತುಗಳನ್ನು ಖರೀದಿ ಮಾಡಲಾಗುತ್ತದೆ. ಸಂಸ್ಥೆಯು ಒಂದು ವರ್ಷ ಪೂರೈಸಿದೆ. ಪ್ರತಿ ತಿಂಗಳು 320ಟನ್ ತ್ಯಾಜ್ಯವನ್ನು ಸಂಗ್ರಹಿಸಿಸುತ್ತಿದ್ದು, ಕಳೆದ ವರ್ಷದಲ್ಲಿ ಒಟ್ಟು 38ಸಾವಿರ ಟನ್ ತ್ಯಾಜ್ಯವಸ್ತುಗಳನ್ನು ಖರೀದಿ ಮಾಡಲಾಗಿದೆ. ಇದರಲ್ಲಿ ಶೇ.10ರಷ್ಟು ಪುನರ್‌ಬಳಕೆ ಮಾಡಲಾಗಿದೆ. ನಮ್ಮ ಈ ಪ್ರಯತ್ನಕ್ಕೆ ಬಿಬಿಎಂಪಿ ಮತ್ತು ನಾಗರಿಕರಿಂದ ಉತ್ತಮ ಸಹಕಾರ ದೊರೆತಿದೆ ಎಂದು ಅವರು ನುಡಿದರು.

ತ್ಯಾಜ್ಯಪುನರ್‌ಬಳಕೆ ಅಗತ್ಯ: ನಗರದ ಸುಮಾರು 15ಸಾವಿರ ಮನೆಗಳನ್ನು ಸಮೀಕ್ಷೆಗೆ ಒಳಪಡಿಸಲಾಗಿದ್ದು, ತ್ಯಾಜ್ಯ ವಿಲೇವಾರಿ ಮತ್ತು ಮರುಬಳಕೆ ಬಗ್ಗೆ ನಿವಾಸಿಗಳಿಗೆ ಅರಿವಿನ ಕೊರತೆ ಇದೆ. ತ್ಯಾಜ್ಯ ವಸ್ತುಗಳ ಉತ್ಪಾದನೆ ಮತ್ತು ಮರು ಬಳಕೆ ಕ್ರಮಗಳ ಕುರಿತು ಸೂಕ್ತವಾಗಿ ತಿಳಿವಳಿಕೆ ಪಡೆದುಕೊಂಡರೆ ಶೇ.50ರಷ್ಟು ತ್ಯಾಜ್ಯಗಳ ಉತ್ಪಾದನೆ ಕಡಿಮೆ ಮಾಡಬಹುದು ಹಾಗೂ ಶೇ.40ರಷ್ಟು ತ್ಯಾಜ್ಯಗಳನ್ನು ಪುನರ್‌ಬಳಕೆ ಮಾಡಬಹುದು.

ತ್ಯಾಜ್ಯಪದಾರ್ಥಗಳ ಮಾರಾಟದ ಕುರಿತು ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 080-4039 0999ನ್ನು ಸಂಪರ್ಕಿಸಬಹುದು ಅಥವಾ www.cbengaluru.com ತಾಣ ವೀಕ್ಷಿಸಬಹುದು ಎಂದು ಅವರು ಹೇಳಿದರು.

ಟ್ವಿಟ್ಟರಲ್ಲಿ ನಮ್ಮನ್ನು ಹಿಂಬಾಲಿಸಿ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7 | ಕನ್ನಡ ಸುದ್ದಿಗಳ SMS

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+