ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಳ್ಳು ಸುದ್ದಿಗೆ ಗಡಗಡ ನಡುಗಿದ ಪೆಂಟಗನ್

By Mahesh
|
Google Oneindia Kannada News

Wikileaks Julian Assange
ವಾಷಿಂಗ್ಟನ್, ಅ.20: ಜನಜಾಗೃತಿ ಅಂತರ್ಜಾಲ ತಾಣ ವಿಕಿಲೀಕ್ಸ್ ಇರಾಕ್ ಸಮರಕ್ಕೆ ಸಂಬಂಧಿಸಿದ ಅಮೆರಿಕ ಸೇನೆಯ ಸುಮಾರು 700 ರಹಸ್ಯ ದಾಖಲೆಗಳನ್ನು ಪ್ರಕಟಿಸಲಿದೆ ಎಂಬ ಸುದ್ದಿಗೆ ಅಮೆರಿಕದ ರಕ್ಷಣಾ ಕೇಂದ್ರ ಪೆಂಟಗನ್ ಗಡಗಡ ನಡುಗಿಹೋಗಿತ್ತು. ವಿಕಿಲೀಕ್ಸ್ ನ ಸೂಕ್ಷ್ಮಗ್ರಾಹಿ ದಾಖಲೆಗಳನ್ನು ಪ್ರಸಾರ ಮಾಡದಂತೆ ಪ್ರಮುಖ ಮಾಧ್ಯಮಗಳಿಗೆ ದುಂಬಾಲು ಬಿದ್ದಿತ್ತು. ಆದರೆ, ವಿಕಿಲೀಕ್ಸ್ ಪ್ರಕಟಣೆ ಬಗ್ಗೆ ಮೊದಲು ಸುದ್ದಿ ನೀಡಿದ್ದ Wired magazine ನ ವರದಿ ಎಲ್ಲವೂ ಸುಳ್ಳು. ನಾವು ಯಾವುದೇ ದಾಖಲೆಗಳನ್ನು ಸದ್ಯಕ್ಕೆ ಹೊರಗೆಡವುತ್ತಿಲ್ಲ ಎಂದು ವಿಕಿಲೀಕ್ಸ್ ನ ಸ್ಥಾಪಕ ಜುಲಿಯನ್ ಅಸ್ಸಂಜೆ ಟ್ವೀಟ್ ಮಾಡಿದ್ದಾರೆ.

ಜುಲಿಯನ್ ಟ್ವೀಟ್ ಅನ್ನು ನೋಡಿ ಹಾಲು ಕುಡಿದಷ್ಟು ಸಂತಸಭರಿತರಾದ ಪೆಂಟಗಾನ್ ಅಧಿಕಾರಿಗಳು ಕುಣಿದು ಕುಪ್ಪಳಿಸಿದ್ದಾರೆ. ಇರಾಕ್ ಯುದ್ಧಕ್ಕೆ ಸಂಬಂಧಿಸಿದಂತೆ 4 ಲಕ್ಷ ದಾಖಲೆಗಳನ್ನು ಬಹಿರಂಗಪಡಿಸಲು ವಿಕಿಲೀಕ್ಸ್ ಮುಂದಾಗಿದೆ ಎಂದು ಕಳೆದ ವಾರದಿಂದ ಸುದ್ದಿ ಹಬ್ಬಿತ್ತು. ಅಫ್ಘಾನಿಸ್ತಾನ್ ಸಮರಕ್ಕೆ ಸಂಬಂಧಿಸಿದಂತೆ 77 ಸಾವಿರ ಮಹತ್ವದ ದಾಖಲೆಗಳನ್ನು ವಿಕಿಲೀಕ್ಸ್ ತನ್ನ ಅಂತರ್ಜಾಲ ತಾಣದಲ್ಲಿ ಈ ಮೊದಲು ಬಿಡುಗಡೆಗೊಳಿಸಿತ್ತು.

ಈ ರಹಸ್ಯ ದಾಖಲೆಗಳು ಬಹಿರಂಗಗೊಳ್ಳುವ ನಿರೀಕ್ಷೆ ಹೊಂದಿದ್ದ ಪೆಂಟಗಾನ್, ಈ ಸಂಬಂಧ ಪರಿಶೀಲನೆ ನಡೆಸಲು 120 ಸದಸ್ಯರ ಕಾರ್ಯಪಡೆಯೊಂದನ್ನು ರಚಿಸಿದೆ ಎಂದು ಪೆಂಟಗಾನ್‌ನ ವಕ್ತಾರ ಕರ್ನಲ್ ಲಾಪನ್ ಹೇಳಿದ್ದರು. ವಿಕಿಲೀಕ್ಸ್ ಒಂದು ಬೇಜವಾಬ್ದಾರಿಯುತ ಸಂಸ್ಥೆಯಾಗಿದೆ. ಈ ಮಹತ್ವದ ರಹಸ್ಯ ದಾಖಲೆಗಳು ರಕ್ಷಣಾ ಇಲಾಖೆಯ ಸೊತ್ತು ಹಾಗೂ ಇವನ್ನು ವಿಕಿಲೀಕ್ಸ್ ಪ್ರಕಟಿಸಕೂಡದು ಎಂದು ಇನ್ನೊಬ್ಬ ವಕ್ತಾರ ಕರ್ನಲ್ ಡೇವಿಡ್ ಲಾಪನ್ ಹೇಳಿದ್ದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X