ದ್ವೇಷದ ಜ್ವಾಲೆಗೆ ಬಳ್ಳಾರಿ ಯುವಕ ಗೋಪಾಲ್ ಬಲಿ

ಗೋಪಾಲ್ ಮೇಲೆ ರಮೇಶ್ ನೇತೃತ್ವದ ತಂಡ ಹಲ್ಲೆ ನಡೆಸಿರಬೇಕು ಎಂದು ಪೊಲೀಸರು ಶಂಕಿಸಿದ್ದಾರೆ. ಮಂಗಳವಾರ ಬೆಳಿಗ್ಗೆ ಗೋಪಾಲ್ ಮೇಲೆ ಓಪಿಡಿ ಸಮೀಪದ ಮದರ್ ಚರ್ಚ್ ಸಮೀಪ ಎಲೆಕ್ಟ್ರಿಕಲ್ ಅಂಗಡಿಯ ಮುಂಭಾಗದಲ್ಲಿ ಮಾಕಣಾಂತಿತ ಹಲ್ಲೆ ಮಾಡಲಾಗಿತ್ತು. ತೀವ್ರವಾಗಿ ಗಾಯಗೊಂಡಿದ್ದ ಗೋಪಾಲ್ ಬುಧವಾರ ನಸುಕಿನಲ್ಲಿ ವಿಮ್ಸ್ ಆಸ್ಪತ್ರೆಯಲ್ಲಿ ಮೃತನಾಗಿದ್ದಾನೆ.
2008ರ ಶಿವರಾತ್ರಿ ಅಮವಾಸ್ಯೆಯ ದಿನ ಕರಿಮಾರಮ್ಮನಗುಡಿ ಪ್ರದೇಶದಲ್ಲಿ ನಡೆದಿದ್ದ ಜೋಡಿ ಕೊಲೆಯ ಪ್ರಮುಖ ಆರೋಪಿ ಗೋಪಾಲ್, ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀಯ ಕೈದಿಯಾಗಿರುವ ಉರುಕುಂದಪ್ಪನ ಸಹೋದರ. ವಿದ್ಯುತ್ ತಂತಿ ಖರೀದಿಗಾಗಿ ಚರ್ಚ್ ಬಳಿಗೆ ಬಂದಾಗ ಹಲ್ಲೆ ಮಾಡಲಾಗಿದೆ. ಈ ಹತ್ಯೆಯಿಂದಾಗಿ ಕರಿಮಾರಮ್ಮನಗುಡಿ ಮತ್ತು ಇಂದಿರಾನಗರ ಪ್ರದೇಶಗಳಲ್ಲಿ ಪ್ರಕ್ಷುಬ್ಧ ವಾತಾವರಣ ಸೃಷ್ಟಿಯಾಗಿದೆ.
ಇದೇ ಪ್ರದೇಶದಲ್ಲಿ, ಇದೇ ಗುಂಪಿನ ಓಬಳೇಶ್ ಎನ್ನುವಾತನ ಮೇಲೆ ಕೆಲ ದಿನಗಳ ಹಿಂದೆ ಮಾರಣಾಂತಿಕ ಹಲ್ಲೆ ನಡೆದಿತ್ತು. ಈ ಪ್ರಕರಣದ ಪ್ರಮುಖ ಆರೋಪಿ ಜಗ್ಗು ಅಲಿಯಾಸ್ ಜಗದೀಶ್ ಪರಾರಿ ಆಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕೌಲ್‌ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಎಸ್ಎಮ್ಎಸ್ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7












Click it and Unblock the Notifications