ರಾಕ್ಷಸ ರಕ್ಷಕರಿಂದ ಸೋದರಿಯರ ಸಾಮೂಹಿಕ ಅತ್ಯಾಚಾರ

Sisters gangraped, J'khand STF cop among 6 accused
ಭಬೂವ(ಜಾರ್ಖಂಡ್), ಅ.19:ರಕ್ಷಕರೇ ರಾಕ್ಷಸರಾಗಿ ವರ್ತಿಸಿದರೆ ಅಮಾಯಕರ ಗತಿ ಏನು? ಇಬ್ಬರು ಸೋದರಿಯರ ಮೇಲೆ ಸಾಮೂಹಿಕ ಅತ್ಯಾಚಾರ ಎಸೆಗಿದ ಪ್ರಕರಣಕ್ಕೆ ಸಂಬಂಧಿಸಿದ ಆರು ಮಂದಿ ಆರೊಪಿಗಳಲ್ಲಿ ಜಾರ್ಖಂಡ್ ನ ವಿಶೇಷ ತನಿಖಾ ದಳ(STF) ನ ಪೊಲೀಸ್ ಯೊಬ್ಬ ಕೂಡಾ ಎಂಬುದು ನಾಚಿಕೆಗೇಡಿನ ಸಂಗತಿ.

ಬಿಹಾರದ ಕೈಮುರ್ ಜಿಲ್ಲೆಯ ಮೊಹಾನಿಯಾ ಪೊಲೀಸ್ ಠಾಣೆ ವ್ಯಕ್ತಿಯ ವಿಭಾಗೀಯ ಅಭಿವೃದ್ಧಿ ಕಚೇರಿ ಆವರಣದಲ್ಲಿ ಈ ಘಟನೆ ನಡೆದಿದೆ. ಅ.17 ರಂದು ರಾತ್ರಿ ದಸರಾ ಕಾರ್ಯಕ್ರಮ ಮುಗಿಸಿಕೊಂಡು ಮನೆಗೆ ತೆರಳಲು ಮೊಹಾನಿಯಾ ಬಸ್ ನಿಲ್ದಾಣದಲ್ಲಿ ಬಸ್ ಗಾಗಿ ಸೋದರಿಯರು ಕಾದು ನಿಂತಿದ್ದರು. ಆಗ, ಜಾರ್ಖಂಡ್ ನ ಎಸ್ ಟಿಎಫ್ ಪೊಲೀಸ್ ರಂಜೀತ್ ಸಿಂಗ್, ಉಳಿದ ಆರೋಪಿಗಳೊಂದಿಗೆ ಸೋದರಿಯರನ್ನು ಏಕಾಂತ ಸ್ಥಳಕ್ಕೆ ಕರೆದೊಯ್ದು ಅತ್ಯಾಚಾರ ಎಸೆಗಿದ್ದಾನೆ ಎಂದುಡಿಎಸ್ಪಿ ಪಂಕಜ್ ಸಿನ್ಹಾ ತಿಳಿಸಿದ್ದಾರೆ.

ಮೂವರು ಆರೋಪಿಗಳನ್ನು ಧರ್ಮೇಂದ್ರ ರಾಮ್, ರಾಕೇಶ್ ಸಾಹು, ಬರು ಗುಪ್ತಾ ಎಂದು ಗುರುತಿಸಲಾಗಿದೆ. ಇನ್ನಿಬ್ಬರ ಗುರುತು ಇನ್ನೂ ಪತ್ತೆಯಾಗಿಲ್ಲ. ಅತ್ಯಾಚಾರಕ್ಕೊಳಗಾದ ಸೋದರಿಯರು ಪೊಲೀಸರಿಗೆ ದೂರು ನೀಡಿ ಸರಿಯಾದ ನಿರ್ಧಾರವನ್ನು ಕೈಗೊಂಡಿದ್ದಾರೆ. ಅಪರಾಧಿಗಳಿಗೆ ಶಿಕ್ಷೆ ಖಂಡಿತಾ ಎಂದು ಸಿನ್ಹಾ ಹೇಳಿದರು.

ಟ್ವಿಟ್ಟರಲ್ಲಿ ನಮ್ಮನ್ನು ಹಿಂಬಾಲಿಸಿ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7 | ಕನ್ನಡ ಸುದ್ದಿಗಳ SMS

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+