ಟೆಕ್ಕಿ ಗಿರೀಶ್ ಹತ್ಯೆ ಪ್ರಕರಣ: ತೀರ್ಪು ಕಾಯ್ದಿರಿಸಲಾಗಿದೆ

ಈ ನಡುವೆ ಕೊಲೆಗೆ ಸಹಾಯಕನಾಗಿದ್ದ ವೆಂಕಟೇಶ್ ಗೆ ನೀಡಿರುವ ಜೀವಾವಧಿ ಶಿಕ್ಷೆಯನ್ನು ಮರಣದಂಡನೆಯಾಗಿ ಪರಿವರ್ತಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಕೂಡಾ ಪೂರ್ಣಗೊಂಡಿದೆ. ಈ ಹಿಂದೆ ಈ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ನ್ಯಾಯಮೂರ್ತಿಕರಣಂ ಶ್ರೀಧರ್‌ರಾವ್ ವಿರುದ್ಧ ಆರೋಪಗಳು ಕೇಳಿ ಬಂದಿದ್ದವು. ಶ್ರೀಧರ್ ರಾವ್ ಅವರ ವಿರುದ್ಧ ಕರಪತ್ರಗಳನ್ನು ಹಂಚಲಾಗಿತ್ತು. ಜಡ್ಜ್ ಶ್ರೀಧರ್ ಅವರು ಕೇಸ್ ನಿಂದ ಹೊರನಡೆದ ನಂತರ ಮುಖ್ಯ ನ್ಯಾಯಮೂರ್ತಿ ಜೆ.ಎಸ್ ಖೆಹರ್ ಅವರು ನ್ಯಾ.ಎ.ಎಸ್ ಆನಂದ್ ಹಾಗೂ ನ್ಯಾ. ಪಚಾಪುರೆ ಆವರಿದ್ದ ಪೀಠಕ್ಕೆ ವರ್ಗಾಯಿಸಿದ್ದರು.
ಕೇಸ್ ಹಿಸ್ಟರಿ: 2003ರ ನವೆಂಬರ್ 30ರಂದು ಕಾನೂನು ವಿದ್ಯಾರ್ಥಿ ಶುಭಾ ಹಾಗೂ ಇಂಟೆಲ್ ಸಾಫ್ಟ ವೇರ್ ಉದ್ಯೋಗಿ ಗಿರೀಶ್ ಅವರ ನಿಶ್ಚಿತಾರ್ಥ ನಡೆದಿತ್ತು. ಡಿ.3 ರಂದು ತಮ್ಮ ಭಾವಿ ಪತಿ ಗಿರೀಶ್‌ರನ್ನು ಆರೋಪಿ ಶುಭಾ ತನ್ನ ಪ್ರಿಯಕರ ಅರುಣ್ ವರ್ಮಾ ಜೊತೆ ಸೇರಿ ಕೊಲೆ ಮಾಡಿದ್ದಳು. ಆರೋಪಿಗಳ ನಡುವೆ ನಡೆದ ಫೋನ್ ಸಂಭಾಷಣೆ ಹಾಗೂ ಎಸ್ ಎಂಎಸ್ ವಿನಿಮಯಗಳನ್ನು ಆಧಾರವಾಗಿಟ್ಟುಕೊಂಡು, ವಿಚಾರಣೆ ನಡೆಸಿದ ಬೆಂಗಳೂರಿನ ತ್ವರಿತ ನ್ಯಾಯಾಲಯ ಜುಲೈನಲ್ಲಿ ನಾಲ್ವರು ಆರೋಪಿಗಳಿಗೂ ಜೀವಾವಧಿ ಶಿಕ್ಷೆ ಪ್ರಕಟಿಸಿತ್ತು.
ಟ್ವಿಟ್ಟರಲ್ಲಿ ನಮ್ಮನ್ನು ಹಿಂಬಾಲಿಸಿ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7 | ಕನ್ನಡ ಸುದ್ದಿಗಳ SMS











Click it and Unblock the Notifications