ದೇವೇಗೌಡರನ್ನು ನಂಬಬೇಡಿ: ದಿಲ್ಲಿ ಕಾಂಗ್ರೆಸ್
ಬೆಂಗಳೂರು,
ಅ. 19 : ರಾಜ್ಯದಲ್ಲಿ ಯಡಿಯೂರಪ್ಪ ಸರಕಾರವನ್ನು ಉರುಳಿಸಿ ಕಾಂಗ್ರೆಸ್ ಬೆಂಬಲದೊಂದಿಗೆ ಪುನಃ ಸರಕಾರ ರಚಿಸುವ ದೇವೇಗೌಡ ಕುಟುಂಬ ನಡೆಸುತ್ತಿರುವ ತೀವ್ರ ಪ್ರಯತ್ನಕ್ಕೆ ಕಾಂಗ್ರೆಸ್ ಹೈಕಮಾಂಡ್ ವಿರೋಧ ವ್ಯಕ್ತ ಪಡಿಸಿದೆ. ಮಾಜಿ ಪ್ರಧಾನಿ ದೇವೇಗೌಡ ಅವರನ್ನು ನಂಬಬೇಡಿ ಯಾವುದೇ ಕಾರಣಕ್ಕೂ ಜೆಡಿಎಸ್ ಜೊತೆ ಕೈ ಜೋಡಿಸದಂತೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಹೈಕಮಾಂಡ್ ತಾಕೀತು ಮಾಡಿದೆ. id="toptextpromo">ಯಡಿಯೂರಪ್ಪ
ಸರಕಾರವನ್ನು ಉರುಳಿಸಿದರೆ ಬಹು ಸಂಖ್ಯಾತ ಲಿಂಗಾಯತರು ಮತ್ತು ಮಧ್ಯಮವರ್ಗದ ಸಮುದಾಯದ ಅಸಮಾಧಾನವನ್ನು ಕಾಂಗ್ರೆಸ್ ಪಕ್ಷ ಎದುರಿಸಬೇಕಾಗಿ ಬರಬಹುದು. ಅದು ಮುಂಬರುವ ಜಿಲ್ಲಾ ಮತ್ತು ತಾಲೂಕು ಪಂಚಾಯತಿ ಚುನಾವಣಾ ಮೇಲೆ ಪರಿಣಾಮ ಬೀರಬಹುದು ಅನ್ನುವುದು ಪಕ್ಷದ ಇನ್ನೊಂದು ಚಿಂತನೆ. ರಾಜ್ಯ ಬಿಜೆಪಿ ಸರಕಾರವನ್ನು ಉರುಳಿಸುವ ಯಾವುದೇ ಕೆಲಸಕ್ಕೆ ಕೈ ಹಾಕಬಾರದೆಂದು ಹೈಕಮಾಂಡ್ ಕಟ್ಟಪ್ಪಣೆ ನೀಡಿದೆ ಎನ್ನಲಾಗಿದೆ. id='are-slot-1' class='oiad oi-axt oiadv'> id='top-searched-articles'>ಇದರಿಂದ
ಒಂದು ವೇಳೆ ಬಿಜೆಪಿ ಸರಕಾರ ಉರುಳಿದರೆ ಅದರ ಲಾಭ ಬಿಜೆಪಿ ಮತ್ತು ಜೆಡಿಎಸ್ ಪಕ್ಷಕ್ಕೆ. ಹಾಗೆಯೇ ಪಕ್ಷ ಬಹಳ ನಷ್ಟ ಅನುಭವಿಸ ಬೇಕಾಗಿ ಬರುತ್ತದೆ. ಪಕ್ಷದ ಉನ್ನತ ಮೂಲದ ಪ್ರಕಾರ ಒಂದು ಸಾರಿ ದೇವೇಗೌಡರ ಜೊತೆ ಹೊಂದಾಣಿಕೆ ಮಾಡಿ ಸಾಕಾಗಿದೆ. ಮತ್ತೆ ಅವರ ಜೊತೆ ಮೈತ್ರಿ ಮಾಡಿಕೊಂಡರೆ ಅದರ ನೇರ ಲಾಭ ಜೆಡಿಎಸ್ ಪಡೆಯುತ್ತದೆ ಎನ್ನುವುದು ಕಾಂಗ್ರೆಸ್ ಹೈಕಮಾಂಡ್ ಲೆಕ್ಕಾಚಾರ.











Click it and Unblock the Notifications