ಭೀಕರ ರಸ್ತೆ ಅಪಘಾತ : ಬೆಂಗಳೂರಿನ 8 ಮಂದಿ ಸಾವು

ಮಂಜುನಾಥ್(36), ಸುಮಾ(45), ಶಶಿಭೂಷಣ್(74), ಶ್ರೀನಿವಾಸ್(48), ರೋಹಿಣಿ(43), ಶಂಕರ(50) ಮಂಜುಳಾ(46) ಮೃತಪಟ್ಟ ದುರ್ದೈವಿಗಳು. ಪುಣ್ಯಕ್ಷೇತ್ರಗಳ ಪ್ರವಾಸ ಮುಗಿಸಿಕೊಂಡು ಮರಳಿ ಬೆಂಗಳೂರಿಗೆ ಬರುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಮೃತರೆಲ್ಲರೂ ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದಾರೆ.
ಅಪಘಾತದಲ್ಲಿ ಒಂದು ಮಗುವಿಗೆ ಗಾಯವಾಗಿದ್ದರೆ, ಇನ್ನೊಂದು ಮಗು ಪ್ರಾಣಾಪಾಯದಿಂದ ಪಾರಾಗಿದೆ. ಒಬ್ಬರಿಗೆ ಮಾತ್ರ ಕಾಲಿಗೆ ಪೆಟ್ಟು ಬಿದ್ದಿದೆ. ಟೆಂಪೋದಲ್ಲಿ ಒಟ್ಟು 13 ಜನರು ಪ್ರಯಾಣ ಮಾಡುತ್ತಿದ್ದರು. ಬೆಂಗಳೂರಿನ ಚಾಮರಾಜಪೇಟೆ ಮತ್ತು ಕತ್ರಿಗುಪ್ಪೆಯ ನಿವಾಸಿಗಳಾಗಿದ್ದಾರೆ.
ಟೆಂಪೋ ಚಾಲಕ ಕೂಡಾ ಸಾವನ್ನಪ್ಪಿದ್ದು. ಆತನ ಹೆಸರು ತಿಳಿದುಬಂದಿಲ್ಲ. ಗಾಯಗೊಂಡಿರುವ ಮಗುವಿನ ಸ್ಥಿತಿ ಚಿಂತಾಜನಕವಾಗಿದೆ. ಕನ್ಯಾಕುಮಾರಿಯಿಂದ ಬೆಂಗಳೂರಿಗೆ ಬರುತ್ತಿದ್ದರು. ಮದುರೈನಿಂದ ಟೆಂಪೋ ಮೂಲಕ ಪ್ರಯಾಣ ಮಾಡುತ್ತಿದ್ದಾಗ ದುರ್ಘಟನೆ ಸಂಭವಿಸಿದೆ. ಹೆಚ್ಚಿನ ಮಾಹಿತಿಗೆ ನಿರೀಕ್ಷಿಸಲಾಗಿದೆ.












Click it and Unblock the Notifications