ವೈದ್ಯನಿಂದ ಐಸಿಯುನಲ್ಲಿದ್ದ ರೋಗಿ ರೇಪ್

ದಸರಾ ಹಬ್ಬದ ಅಂಗವಾಗಿ ಸಾರ್ವಜನಿಕ ದುರ್ಗಾಪೂಜೆಯಲ್ಲಿ ಆಚರಣೆಯಲ್ಲಿ ತೊಡಗಿದ್ದ 30 ವರ್ಷದ ಮಹಿಳೆ, ದುರ್ಗಾ ಪೂಜೆ ಸಲ್ಲಿಸುವ ಸಮಯದಲ್ಲಿ ಆಯಾಸದಿಂದ ಪ್ರಜ್ಞೆ ತಪ್ಪಿದ್ದಾರೆ. ನಂತರ ಚಿಕಿತ್ಸೆಗಾಗಿ ಆಕೆಯನ್ನು ವಶಿ ಪ್ರದೇಶದ ಲೋಟಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಯ 26 ವರ್ಷದ ಯುವ ವೈದ್ಯ ಆಕೆಯ ಮೇಲೆ ಬಲಾತ್ಕಾರ ಮಾಡಿದ್ದಾನೆ.
ಆರೋಪಿ ವೈದ್ಯ ವಿಶಾಲ್ ವನ್ನೆಯನ್ನು ವಶಿ ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ಸಂದರ್ಭದಲ್ಲಿ ಡಾ. ವಿಶಾಲ್ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಲೋಟಸ್ ಆಸ್ಪತ್ರೆಯಲ್ಲಿ resident medical officer (RMO) ಆಗಿರುವ ವಿಶಾಲ್, ಅಯುರ್ವೇದದಲ್ಲಿ ಪರಿಣತಿ ಹೊಂದಿದ್ದಾನೆ. ಘನ್ಸೊಲಿಯಲ್ಲಿ ವಾಸಿಸುತ್ತಾನೆ.
ರಕ್ತದೊತ್ತಡ ಕಡಿಮೆ(Low BP)ಯಾದ ಕಾರಣ ರೋಗಿಯನ್ನು ತುರ್ತು ನಿಗಾಘಟಕ(ICU) ನಲ್ಲಿರಿಸಲಾಗಿತ್ತು. ಅರೆ ಪ್ರಜ್ಞಾವಸ್ಥೆಯಲ್ಲಿದ್ದ ವಿವಾಹಿತೆ ಮೇಲೆ ವಿಶಾಲ್ ಅತ್ಯಾಚಾರ ಎಸೆಗಿದ್ದಾನೆ. ಈ ಘಟನೆ ಮುಂಜಾನೆ 2 ಗಂಟೆಯಿಂದ 5 ಗಂಟೆಯೊಳಗೆ ನಡೆದಿರುವ ಸಾಧ್ಯತೆಯಿದೆ ಎಂದು ತನಿಖಾಧಿಕಾರಿ ರಾಜ್ ಕುಮಾರ್ ಛಪೆಕರ್ ಹೇಳಿದ್ದಾರೆ.
ಟ್ವಿಟ್ಟರಲ್ಲಿ ನಮ್ಮನ್ನು ಹಿಂಬಾಲಿಸಿ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7 | ಕನ್ನಡ ಸುದ್ದಿಗಳ SMS












Click it and Unblock the Notifications