ಆಸೀಸ್ ವಿರುದ್ಧ ಭಾರತಕ್ಕೆ ಐತಿಹಾಸಿಕ ಸರಣಿ ವಿಜಯ

ಆರಂಭಿಕ ಆಟಗಾರ ವಿರೇಂದರ್ ಸೆಹ್ವಾಗ್ ಹಾಗೂ ಎಂ ವಿಜಯ್(37) ಅವರನ್ನು ಕಳೆದುಕೊಂಡ ನಂತರ ಚೊಚ್ಚಲ ಪಂದ್ಯವನ್ನಾಡುತ್ತಿರುವ ಚೇತೇಶ್ವರ್ ಪೂಜಾರಾ(72) ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ಭಾರತದ ಬ್ಯಾಟಿಂಗ್ ಬೆನ್ನೆಲುಬುಗಳಾದ ಸಚಿನ್ ತೆಂಡೂಲ್ಕರ್(53) ಹಾಗೂ ರಾಹುಲ್ ದ್ರಾವಿಡ್(21)ಸಮಯೋಚಿತ ಆಟ ಪ್ರದರ್ಶಿಸಿ, ಭಾರತಕ್ಕೆ ಐತಿಹಾಸಿಕ ಜಯ ತಂದು ಕೊಟ್ಟಿದ್ದಾರೆ.
ನಾಲ್ಕನೇ ದಿನದ ಅಂತ್ಯಕ್ಕೆ 202 ರನ್ ಗೆ 7 ವಿಕೆಟ್ ಕಳೆದುಕೊಂಡು ದುಃಸ್ಥಿತಿಯಲ್ಲಿದ್ದ ಆಸ್ಟ್ರೇಲಿಯಾ, ಇಂದು ಬಹು ಬೇಗ(ಸುಮಾರು ಒಂದು ಗಂಟೆ ಅವಧಿಯಲ್ಲೇ) ಮೂರುವಿಕೆಟ್ ಗಳನ್ನು ಕಳೆದುಕೊಂಡು 233 ರನ್ ಗಳಿಗೆ ಆಲೌಟ್ ಆಯಿತು. ಈ ಮೂಲಕ ಭಾರತಕ್ಕೆ 207 ರನ್ ಗಳ ಗೆಲುವಿನ ಗುರಿಯನ್ನು ನೀಡಿತು. ಭಾರತದ ಪರ ಜಹೀರ್, ಹರ್ಭಜನ್ ತಲಾ 3 ವಿಕೆಟ್ ಹಾಗೂ ಶ್ರೀಶಾಂತ್, ಓಝಾ ತಲಾ 2 ವಿಕೆಟ್ ಗಳಿಸಿ ಭಾರತದ ಜಯಕ್ಕೆ ತಮ್ಮ ಕೊಡುಗೆ ನೀಡಿದರು.
2 ನೇ ಟೆಸ್ಟ್ ಸಂಪೂರ್ಣ ಸ್ಕೋರ್ ವಿವರಕ್ಕಾಗಿ ಕ್ಲಿಕ್ ಮಾಡಿ
ಟ್ವಿಟ್ಟರಲ್ಲಿ ನಮ್ಮನ್ನು ಹಿಂಬಾಲಿಸಿ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7 | ಕನ್ನಡ ಸುದ್ದಿಗಳ SMS












Click it and Unblock the Notifications