ರಣರಂಗದ ನಡುವೆ ಮಾರ್ಷಲ್ ಗಳಿಗೆ ಏಟು

Vidhanasoudha
ಬೆಂಗಳೂರು, ಅ. 11 : ಮುಖ್ಯಮಂತ್ರಿ ಬಿಎಸ್ ಯಡ್ಯೂರಪ್ಪ ವಿಶ್ವಾಸಮತ ಯಾಚನೆಗೆ ಇದೀಗ ವಿಧಾನಸೌಧ ಪ್ರವೇಶಿಸಿದರು. ಅಗ್ನಿ ಪರೀಕ್ಷೆಗೆ ಸಿದ್ಧವಾಗಿರುವ ಅವರು ಕಾರು ಇಳಿದು ವಿಧಾನಸೌಧ ಮೆಟ್ಟಿಲು ಹತ್ತುವ ಮುನ್ನ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ಅನೇಕ ದೇವಸ್ಥಾನಗಳಿಗೆ ಭೇಟಿಕೊಟ್ಟಿದ್ದೇನೆ. ಭಗವಂತನ ಆಶೀರ್ವಾದ ನನ್ನ ಮೇಲಿದೆ ಎಂದು ಭಾವಿಸುತ್ತಾನೆ. ಈ ನಾಡಿನ ಜನತೆಯ ಹಿತದೃಷ್ಟಿಯಿಂದ ವಿಶ್ವಾತ ಮತ ಪರೀಕ್ಷೆಯಲ್ಲಿ ಗೆದ್ದು ಇನ್ನೂ ಇನ್ನೂ ಮೂರು ವರ್ಷ ಅವಧಿ ಸರಕಾರವನ್ನು ಮುನ್ನಡೆಯುವ ಆತ್ಮ ವಿಶ್ವಾಸವಿದೆ ಎಂದರು.

ಇನ್ನೊಂದೆಡೆ ವಿಧಾನಸೌಧದ ಬಾಗಿಲುಗಳ ಬಳಿ ರಣರಂಗದಂತಹ ಸನ್ನಿವೇಶ ಸೃಷ್ಟಿಯಾಗಿದೆ. ಅನರ್ಹ ಗೊಂಡಿರುವ ಅತೃಪ್ತ ಶಾಸಕರು ಸಭಾಂಗಣ ಪ್ರವೇಶಿಸಲು ಪ್ರಯತ್ನಿಸುತ್ತಿರುವುದರಿಂದ ಉದ್ವಿಗ್ನ ಪರಿಸ್ಥಿತಿ ತಲೆದೋರಿದೆ. ಶಾಸಕರು ಕೈಕೈ ಮಿಲಾಯಿಸುವ ಮತ್ತು ತೋಳೇರಿಸಿ ಹೊಡೆದಾಟಕ್ಕೆ ನಿಲ್ಲುವಂತ ಚಿತ್ರ ಕಂಡುಬರುತ್ತಿದೆ. ಜೆಡಿಎಸ್ ಶಾಸಕರು ಬಾಗಿಲು ಒಡೆದು ಒಳನುಗ್ಗುತ್ತಿದ್ದಾರೆ.

ವಿಧಾನಸೌಧದ ಪಶ್ಚಿಮದ್ವಾರದ ಮೂಲಕ ಪ್ರವೇಶಿಸಿದ ಅತೃಪ್ತರು ಸದನ ಪ್ರವೇಶಕ್ಕೆ ಅಡ್ಡಿಪಡಿಸಿದ ಮಾರ್ಷಲ್ ಗಳಿಗೆ ಚೆನ್ನಾಗಿ ಥಳಿಸಿದ್ದಾರೆ. ಈ ಪೈಕಿ ಒಬ್ಬ ಮಾರ್ಷಲ್ ಅವರು ಅಸ್ವಸ್ಥಗೊಂಡಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ. ಸದನದ ಬಾವಿಗೆ ಇಳಿದಿರುವ ಜೆಡಿಎಸ್ ಕಾಂಗ್ರೆಸ್ ಶಾಸಕರು ಧರಣಿ ನಡೆಸಿದ್ದಾರೆ. ಸ್ಪೀಕರ್ ಪೀಠದ ಮುಂದೆ ನಿಂತು ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಿದ್ದಾರೆ. ಸದನದ ಒಳಗೆ ಪೊಲೀಸರು ಪ್ರವೇಶಿಸಿದ್ದಾರೆ.

ಸದನ ಕಲಾಪದ ಕಚ್ಚಾಟದ ವರದಿಮಾಡದಂತೆ ಮಾಧ್ಯಮಗಳಿಗೆ ನಿರ್ಬಂಧ ಹೇರಲಾಗಿದ್ದು, ಮೊಬೈಲ್ ಫೋನ್ ಕಾರ್ಯನಿರ್ವಹಿಸದಂತೆ ಜಾಮರ್ ಗಳನ್ನು ಅಳವಡಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+