ಭಿನ್ನಮತ ಬೆಳೆಯುವುದಕ್ಕೆ ಹವಾಲಾ ಹಣ : ರವಿ

CT Ravi
ಬೆಂಗಳೂರು, ಅ.10: ಸರ್ಕಾರದ ಭದ್ರತೆಗಾಗಿ ಮತ್ತು ಜನತೆಯ ಒಳಿತಿಗಾಗಿ ಅಂದು ಬಿಜೆಪಿ ನಡೆಸಿದ 'ಅಪರೇಷನ್ ಕಮಲ' ಕ್ಕೆ ಭಾರಿ ಟೀಕೆ ಟಿಪ್ಪಣಿ ಮಾಡಿದ ವಿಪಕ್ಷಗಳು ಇಂದು ಮಾಡುತ್ತಿರುವುದಾದರೂ ಏನು? ನಮ್ಮದು ಅಪರೇಷನ್ ಕಮಲವಾದರೆ ಇವರದು ರಾಜಕೀಯ ಹಾದರ ಎಂದು ಸಿಟಿ ರವಿ ಗುಡುಗಿದ್ದಾರೆ.

'ನಮಗೂ ರಾಜಕೀಯ ತಂತ್ರಗಾರಿಕೆ ಗೊತ್ತು. ಇವರು ನಡೆಸಿರುವುದು ಕುದುರೆ ವ್ಯಾಪಾರವಲ್ಲ. ಕತ್ತೆ ವ್ಯಾಪಾರ. ವಿಪಕ್ಷಗಳು ಭಾರಿ ಬೆಲೆ ನೀಡಿ ಕತ್ತೆಗಳನ್ನು ಖರೀದಿಸಿದ್ದಾರೆ. ಪ್ರತಿಪಕ್ಷಗಳಿಗೆ ಎಲ್ಲಿಂದ ಹಣ ಒದಗಿಬಂದಿದೆ ಎಂಬುದು ಜನತೆಗೆ ಸದ್ಯದಲ್ಲೇ ಗೊತ್ತಾಗಲಿದೆ. ಗಂಟು ಹೋಯ್ತು, ನಂಟು ಹೋಯ್ತು ಎಂಬ ಸ್ಥಿತಿ ಜೆಡಿಎಸ್ ಗೆ ಒದಗಿಬರಲಿದೆ ಎಂದು ರವಿ ತಿಳಿಸಿದರು.

ಉದ್ಯಮಿಗಳ ವಿರುದ್ಧ ಹೋರಾಟ ನಡೆಸಿದ್ದ ಜೆಡಿಎಸ್ ಇಂದು ಹಣ ಹಾಗೂ ಗೂಂಡಾಗಳ ನೆರವಿನಿಂದ ಬಿಜೆಪಿ ಸರ್ಕಾರ ಉರುಳಿಸಲು ಹೊರಟಿದೆ. ಜೆಡಿಎಸ್ ಹಾಗೂ ಕಾಂಗ್ರೆಸ್ ತಂತ್ರ ವಿಫಲವಾಗಲಿದೆ ಎಂದು ಹೇಳಿದ ರವಿ, ಭೂಗತ ಜಗತ್ತಿನೊಂದಿಗೆ ಜೆಡಿಎಸ್ ಗೆ ನಂಟಿದೆ ಎಂದು ಗಂಭೀರ ಆರೋಪ ಹೊರಿಸಿದರು.

ಬಿಜೆಪಿ ಸರ್ಕಾರ ಉರುಳಿಸಲು ಜೆಡಿಎಸ್‌ಗೆ ಭಾರೀ ಪ್ರಮಾಣದ ಹವಾಲಾ ಹಣ ಪೂರೈಕೆಯಾಗುತ್ತಿರುವುದು ಈಗ ಬೆಳಕಿಗೆ ಬಂದಿದೆ. ಇತ್ತೀಚೆಗೆ ಅಕ್ರಮ ಅದಿರು ರಫ್ತು ನಿಷೇಧ ಕ್ರಮಕೈಗೊಂಡ ಹಿನ್ನೆಲೆಯಲ್ಲಿ ಅಕ್ರಮ ಅದಿರು ರಫ್ತುದಾರರ ಗುಂಪೊಂದರ ನೆರವನ್ನೂ ಪಡೆದಿರುವ ಜೆಡಿಎಸ್ ಸರಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದೆ ಎಂದು ಬಿಜೆಪಿ ಮೂಲಗಳು ಆರೋಪಿಸುತ್ತಿವೆ.

ಕ್ವಟ್ರೋಚಿ ಜತೆ ಲಿಂಕ್ : ಕಳೆದ ರಾತ್ರಿ ದೇವೇಗೌಡರೊಡನೆ ಕ್ವಟ್ರೋಚಿ ಪುತ್ರ ಮಾತುಕತೆ ನಡೆಸಿದ ಮಾಹಿತಿ ಸಿಕ್ಕಿದೆ. ಕ್ವಟ್ರೋಚಿ ಪುತ್ರ ಬೆಂಗಳೂರಿನಲ್ಲಿ ಮೊಕ್ಕಾಂ ಮಾಡಿದ್ದು ಭಾರತೀಯ ಜನತಾ ಪಕ್ಷದ ಸರಕಾರ ಉರುಳಿಸಲು ಗೌಡರೊಂದಿಗೆ ಸಂಚು ಹೂಡಿದ್ದಾರೆಂದು ಬಿಜೆಪಿ ಮಾಜಿ ಅಧ್ಯಕ್ಷ ಸದಾನಂದ ಗೌಡ ಅವರು ಆಪರೋಪಿಸಿದರು. ಸರ್ಕಾರ ಪತನಕ್ಕೆ ಎಲ್ಲರೀತಿಯ ವಾಮಮಾರ್ಗವನ್ನು ಜೆಡಿಎಸ್ ಅನುಸರಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಇದೇ ವೇಳೆ, ವಿಜಯನಗರ ಕ್ಷೇತ್ರದ ಬಿಜೆಪಿ ಶಾಸಕ ಆನಂದ್ ಸಿಂಗ್ ಮೂರು ದಿನಗಳಿಂದ ಸಂಪರ್ಕದಲ್ಲಿಲ್ಲ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಅವರ ಮೊಬೈಲ್ ಫೋನ್ ಸ್ವಿ ಚ್ ಆಫ್ ಆಗಿದೆ. ಚೆನ್ನೈನಲ್ಲಿ ಇರುವ ಅತೃಪ್ತ ಶಾಸಕರು ಸರಕಾರ ಬೀಳಿಸಲು ಪಣ ತೊಟ್ಟಿದ್ದಾರೆ. ಈ ಎಲ್ಲ ಶಾಸಕರು ನನ್ನ ಬಳಿ ಇದ್ದಾರೆ, ಅವರ ನಿರ್ಧಾರ ಅಚಲ ಎಂದು ಕುಮಾರ ಸ್ವಾಮಿ ಚೆನ್ನೈನಲ್ಲಿ ಹೇಳಿದರು. ಇನ್ನೂ ಕೆಲವು ಬಿಜೆಪಿ ಶಾಸಕರು ಭಿನ್ನರ ಗುಂಪು ಸೇರುವ ಸಾಧ್ಯತೆಗಳು ದಟ್ಚವಾಗಿವೆ ಎಂದೂ ಹೇಳಲಾಗುತ್ತಿದೆ.

ಟ್ವಿಟ್ಟರಲ್ಲಿ ನಮ್ಮನ್ನು ಹಿಂಬಾಲಿಸಿ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7 | ಕನ್ನಡ ಸುದ್ದಿಗಳ SMS

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+