ರಾಜಕೀಯ ನಿವೃತ್ತಿ ಪ್ರಶ್ನೆಯೇ ಇಲ್ಲ: ಶಂಕರಲಿಂಗೇಗೌಡ
ಮೈಸೂರು,
ಅ. 7: ಬಂಡಾಯದ ಪಾಳೆಯದಲ್ಲಿ ಕಾಣಿಸಿಕೊಂಡು ಶಾಸಕರ ಭವನದಲ್ಲಿ ಆತ್ಮಹತ್ಯೆ ಯತ್ನಿಸಿದ್ದ ಮೈಸೂರಿನ ಚಾಮರಾಜ ಕ್ಷೇತ್ರದ ಶಾಸಕ ಶಂಕರ ಲಿಂಗೇಗೌಡರು, ನಾನು ಬಿಜೆಪಿಯ ನಿಷ್ಠಾವಂತ ಸೇವಕ, ಆದರೆ ನೆನ್ನೆ ನಮ್ಮವರೇ ನನಗೆ ಶತ್ರುಗಳಿದ್ದರು ಎಂದು ದ್ವಂದ್ವ ಹೇಳಿಕೆ ನೀಡಿದ್ದಾರೆ. id="toptextpromo">ಗುರುವಾರ
ರಾತ್ರಿ ಶಾಸಕರ ಭವನದಲ್ಲಿ ಶಂಕರಲಿಂಗೇಗೌಡರನ್ನು ಅವರ ಮಗ ನಂದೀಶ್ ಪ್ರೀತಂ ಬಿಜೆಪಿ ಸರಕಾರಕ್ಕೆ ಬೆಂಬಲ ನೀಡುವಂತೆ ಒತ್ತಾಯಿಸಿದ್ದರು. ನಂತರ ಆತ್ಮಹತ್ಯೆ ಪ್ರಸಂಗ ನಡೆದು, ಬಿಜೆಪಿ, ಜೆಡಿಎಸ್ ಪಕ್ಷದ ಘಟಾನುಘಟಿ ನಾಯಕರುಗಳು ಶಾಸಕರ ಭವನಕ್ಕೆ ಆಗಮಿಸಿ ಹೊರ ನಡೆದಿದ್ದು ಆಯಿತು. ಆದರೆ, ಈ ಎಲ್ಲಾ ಗೊಂದಲಕ್ಕೆ ಅಪ್ಪ ಮಗನ ನಡುವೆ ವೈಮನಸ್ಯಕ್ಕೆ ನಮ್ಮವರೇ ಕಾರಣ ಎಂದು ಶಂಕರಲಿಂಗೇಗೌಡರು ಇಂದು ತಮ್ಮ ನಿವಾಸದಲ್ಲಿ ಹೇಳಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಚಾಮುಂಡಿ
ದೇವಿಯ ಆಶೀರ್ವಾದ ಪಡೆದ ನಂತರ, ಶಂಕರಲಿಂಗೇಗೌಡರ ಆರೋಗ್ಯ ಸ್ಥಿತಿಯ ಬಗ್ಗೆ ತಿಳಿಯಲು ಅವರ ನಿವಾಸಕ್ಕೆ ಸಿಎಂ ಭೇಟಿ ನೀಡಿದ್ದರು. ಆಗ ಗೌಡರು ಮನೆಯಿಂದ ಮಾಯವಾಗಿದ್ದರು. ಸಿಎಂ ಹೊರನಡೆದ ಐದು ನಿಮಿಷದ ಬಳಿಕ ಪ್ರತ್ಯಕ್ಷವಾಗಿ, ನನ್ನ ಆರೋಗ್ಯ ಸ್ಥಿರವಾಗಿದೆ. ಬಿಜೆಪಿ ಪರ ಜಯ ಘೋಷ ಹಾಕತೊಡಗಿದರು. ಆದರೆ, ಅ.11ರಂದು ಸರ್ಕಾರಕ್ಕೆ ಬೆಂಬಲ ನೀಡುವ ಬಗ್ಗೆ ಸರಿಯಾದ ಪ್ರತಿಕ್ರಿಯೆ ನೀಡದೆ ನುಣುಚಿಕೊಂಡರು.











Click it and Unblock the Notifications