ರೇಣುಕಾಚಾರ್ಯ ಸೇರಿ ಅತೃಪ್ತರಿಗೆ ನೋಟಿಸ್

Assembly Secretary issues notice to Renukacharya
ಬೆಂಗಳೂರು, ಅ.8: ಬಿಜೆಪಿ ಸರ್ಕಾರ ಹಾಗೂ ಸಿಎಂ ಯಡಿಯೂರಪ್ಪ ವಿರುದ್ಧ ಬಂಡಾಯ ಹೂಡಿರುವ ಅಬಕಾರಿ ಸಚಿವ ರೇಣುಕಾಚಾರ್ಯ ಸೇರಿದಂತೆ ಅತೃಪ್ತ 11ಜನ ಬಿಜೆಪಿ ಶಾಸಕರಿಗೆ ಅಕ್ಟೋಬರ್ 10ರೊಳಗೆ ಉತ್ತರ ನೀಡುವಂತೆ ಕೇಳಿ ವಿಧಾನಸಭಾ ಸಚಿವಾಲಯದ ಕಾರ್ಯದರ್ಶಿ ಎಸ್.ಬಿ.ಪಾಟೀಲ್ ಇಂದು ನೋಟಿಸ್ ಜಾರಿ ಮಾಡಿದ್ದಾರೆ.

ಶಾಸಕರ ಭವನದಲ್ಲಿರುವ ಬಂಡಾಯ ಶಾಸಕರ ಕೋಣೆ ಮತ್ತು ಅತೃಪ್ತ ಶಾಸಕರ ಮನೆ ಬಾಗಿಲಿಗೆ ಈ ನೋಟಿಸ್ ಅಂಟಿಸಲಾಗಿದೆ. 'ನೀವು ಬಿಜೆಪಿ ಪಕ್ಷದ ಚಿಹ್ನೆಯಡಿ ಆಯ್ಕೆಯಾದವರು. ಹಾಗಾಗಿ ನಿಮ್ಮ ಮೇಲೆ ಪಕ್ಷಾಂತರ ನಿಷೇಧ ಕಾಯ್ದೆಯ ಕ್ರಮ ಯಾಕೆ ಕೈಗೊಳ್ಳಬಾರದು' ಎಂದು ನೋಟಿಸ್‌ನಲ್ಲಿ ಪ್ರಶ್ನಿಸಲಾಗಿದೆ.

ನೋಟಿಸ್ ಗೆ ಅ.10ರ ರಾತ್ರಿಯೊಳಗೆ ಸ್ಪಷ್ಟ ಉತ್ತರ ನೀಡುವಂತೆ ಸೂಚಿಸಿ ನೋಟಿಸ್ ನೀಡಲಾಗಿದೆ. ಆದರೆ, ಅ.11ರ ವಿಶ್ವಾಸ ಮತ ಯಾಚನೆ ಸಂದರ್ಭದಲ್ಲಿ ಹಾಜರಿರುವಂತೆ ಸ್ಪೀಕರ್ ಹೊರತುಪಡಿಸಿ ಬಿಜೆಪಿಯ ಎಲ್ಲಾ ಶಾಸಕರಿಗೆ ವಿಪ್ ಜಾರಿ ಮಾಡಿರುವುದರಿಂದ ನೋಟಿಸ್ ನೀಡುವ ಪ್ರಮೇಯ ಏಕೆ ಎಂದು ಕೆಲವರ ಪ್ರಶ್ನೆ.

ಒಟ್ಟಿನಲ್ಲಿ ಗೋವಾ ರೆಸಾರ್ಟ್ ನಿಂದ ರೇಣುಕಾಚಾರ್ಯ ಬೆಂಗಳೂರಿಗೆ ಬಂದ ನಂತರ ನೋಟಿಸ್ ಗೆ ಉತ್ತರ ನೀಡುವುದ ಜೊತೆಗೆ ಹರಿಹರ ಶಾಸಕ ಹರೀಶ್ ನೀಡಿರುವ ಕಿಡ್ನಾಪ್ ಕೇಸ್ ಗೂ ಉತ್ತರಿಸಬೇಕಿದೆ.

ಈ ನಡುವೆ ನೆನ್ನೆ ರಾತ್ರಿ ಖಾಸಗಿ ಟಿವಿ ಮಾಧ್ಯಮಗಳ ಅಚಾತುರ್ಯದಿಂದ ಶಾಸಕರ ಚುನಾವಣೆ ಸಂದರ್ಭದಲ್ಲಿ ದಾಂಧಲೆ ನಡೆಸಿದ್ದ ವಿಪಕ್ಷದ ನಾಲ್ಕು ಶಾಸಕರನ್ನು ಅಮಾನತು ಮಾಡಲಾಗಿದೆ ಎಂಬ ಸುದ್ದಿಯನ್ನು ಸ್ಪೀಕರ್ ಕೆಜಿ ಬೋಪಯ್ಯ ಅಲ್ಲಗೆಳೆದಿದ್ದಾರೆ. ಈ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ ಹಾಗೂ ಯಾರನ್ನು ಅಮಾನತು ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+