20 ಶಾಸಕರ ಬೆಂಬಲ ವಾಪಸ್, ಕುಮಾರಸ್ವಾಮಿ ಸಿಎಂ?

ಭಿನ್ನಮತದ ಸಂಪೂರ್ಣ ಲಾಭ ಪಡೆದುಕೊಂಡಿರುವ ಜೆಡಿಎಸ್ ಈಗಾಗಲೇ ರಾಜಭವನ ಪ್ರವೇಶಿಸಿ ರಾಜ್ಯಪಾಲರೊಂದಿಗೆ ಮಾತುಕತೆ ನಡೆಸಿದೆ. ಅಲ್ಲದೇ, ಕಾಂಗ್ರೆಸ್ ಕೂಡಾ ಜೆಡಿಎಸ್ ಜೊತೆಗೆ ಕೈಜೋಡಿಸುವ ಎಲ್ಲ ಸಾಧ್ಯತೆಯೂ ನಿಚ್ಚಳವಾಗಿ ಕಾಣುತ್ತಿವೆ.
ಬಿಜೆಪಿ ಭಿನ್ನಮತಕ್ಕೆ ಜೆಡಿಎಸ್ ನೀಡಿರುವ ಬೆಂಬಲ ಕಾರಣ ಎನ್ನುವುದು ಗೊತ್ತಿರುವ ಸಂಗತಿ. ಬಿಜೆಪಿ ಶಾಸಕರಿಗೆ ತಲಾ 20 ಕೋಟಿ ರುಪಾಯಿ ಲಂಚ ನೀಡಲಾಗಿದೆ ಎಂದು ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಹೇಳಿದ್ದಾರೆ. ವರ್ತೂರು ಪ್ರಕಾಶ್ ಕೂಡ ಮಂಗಳವಾರ ಸಂಜೆಯೇ ಸರಕಾರ ಪತನಗೊಳ್ಳುತ್ತದೆ ಎಂದು ಹೇಳಿದ್ದರು.
ಸೆಲ್ ಫೋನಿನಲ್ಲಿ ಕನ್ನಡ ಓದುವ ಸಂಭ್ರಮ | ದಟ್ಸ್ ಕನ್ನಡ ಹೂವಿನಂಗಡಿ 24/7 | ಕನ್ನಡ ಸಿನಿಮಾ SMS | ಕನ್ನಡ ಸುದ್ದಿಗಳ SMS












Click it and Unblock the Notifications