ರಿಯಲ್ ಎಸ್ಟೇಟ್ ಉದ್ಯಮಿ ಹತ್ಯೆ; ಆರೋಪಿ ಎಸ್ಕೇಪ್

ಕೃಷ್ಣ ರೆಡ್ಡಿ ಶುಕ್ರವಾರ ಮಧ್ಯಾಹ್ನ ಯುವಕನೊಬ್ಬನ ಜತೆ ಬಂದು ವಸತಿ ಗೃಹದಲ್ಲಿ ಕೊಠಡಿ ಪಡೆದಿದ್ದರು. ನಂತರ ಕೊಠಡಿಗೆ ಮದ್ಯ ತಂದು ಸೇವಿಸಿದ್ದಾರೆ. ಮರುದಿನ ಕೊಠಡಿಯ ಬಾಗಿಲು ಸ್ವಲ್ಪ ತೆರೆದಿತ್ತು ಹಾಗೂ ಟಿವಿ ಆನ್ ಆಗಿತ್ತು. ಒಳಗಿರುವವರು ಟಿವಿ ನೋಡುತ್ತಿದ್ದಾರೆ ಎಂದು ಭಾವಿಸಿದೆವು ಎಂದು ಲಾಡ್ಜ್ ನ ಹೌಸ್ ಕೀಪಿಂಗ್ ಸಿಬ್ಬಂದಿ ಹೇಳಿಕೆ ನೀಡಿದ್ದಾರೆ.
ಆದರೆ ಸಂಜೆವರೆಗೂ ಟಿವಿ ನಿರಂತರವಾಗಿ ಚಾಲನೆಯಲಿದ್ದುದನ್ನು ಕಂಡು ಸಂಶಯಗೊಂಡ ಸಿಬ್ಬಂದಿ ಕೊಠಡಿ ಪ್ರವೇಶಿಸಿದಾಗ ಕೃಷ್ಣ ರೆಡ್ಡಿಯ ಶವ ಮಂಚದ ಮೇಲಿತ್ತು. ಇವರ ಜತೆ ಬಂದಿದ್ದ ವ್ಯಕ್ತಿ ಪರಾರಿಯಾಗಿದ್ದ ಎಂದು ವಸತಿಗೃಹದ ಮ್ಯಾನೇಜರ್ ಪೊಲೀಸರಿಗೆ ದೂರು ನೀಡಿದ್ದಾರೆ.
ನಿಗೂಢ : ಕೃಷ್ಣ ರೆಡ್ಡಿ ಜತೆ ಬಂದಿದ್ದ ವ್ಯಕ್ತಿ 35 ವರ್ಷದ ಆಸುಪಾಸಿನವನು ಹಾಗೂ ಹಿಂದಿ ಮಾತನಾಡುತ್ತಿದ್ದ ಎನ್ನಲಾಗಿದೆ. ಘಟನೆ ನಂತರ ಕೃಷ್ಣ ರೆಡ್ಡಿಯ ಮೊಬೈಲ್, ಧರಿಸಿದ್ದ ಚಿನ್ನಾಭರಣ ಕಾಣೆಯಾಗಿದೆ. ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದ ಕೃಷ್ಣ ರೆಡ್ಡಿ ಹಣಕಾಸಿನ ವ್ಯವಹಾರ ಸಹ ನಡೆಸುತ್ತಿದ್ದ ಎನ್ನಲಾಗಿದೆ. ಕೃಷ್ಣ ರೆಡ್ಡಿ ಜತೆಗಿದ್ದವನು ಅವರ ಅಪ್ತನಂತೆ ವರ್ತಿಸುತ್ತಿದ್ದ ಹಾಗಾಗಿ ನಮಗೆ ಸಂಶಯ ಬರಲಿಲ್ಲ ಎಂದು ಲಾಡ್ಜ್ ಮ್ಯಾನೇಜರ್ ಹೇಳಿದ್ದಾರೆ. ತನಿಖೆ ಮುಂದುವರೆದಿದೆ.












Click it and Unblock the Notifications