ಗಾಂಧಿ ತತ್ವಗಳಿಂದ ಪ್ರೇರೆಪಿತರಾದ ಒಬಾಮಾ

ಅಮೆರಿಕದ ಅಧ್ಯಕ್ಷ ಒಬಾಮಾ ಅವರು ಗಾಂಧೀಜಿಯ ಅಹಿಂಸಾ ತತ್ವಗಳಿಗೆ ನಿಷ್ಠರಾಗಿದ್ದಾರೆ. ಗಾಂಧೀಜಿ ಅವರ ಆತ್ಮಚರಿತ್ರೆ ಹಾಗೂ ಟೇಲರ್ ಬ್ರಾಂಚ್ ವಿರಚಿತ ಮಾರ್ಟಿನ್ ಲೂಥರ್ ಕಿಂಗ್ ಜೀವನ ಚರಿತ್ರೆಯ ಮೂರು ಸಂಪುಟಗಳು ಒಬಾಮಾ ಅವರ ಜೀವನದ ಮೇಲೆ ಪ್ರಭಾವ ಬೀರಿವೆ ಎಂದು ದಕ್ಷಿಣ ಮತ್ತು ಮಧ್ಯ ಏಷ್ಯಾಗಳ ವಿದೇಶ ಖಾತೆಯ ಸಹಾಯಕ ಸಚಿವ ರಾಬರ್ಟ್ ಬ್ಲೇಕ್ ತಿಳಿಸಿದ್ದಾರೆ.
ಗಾಂಧೀಜಿ ಮತ್ತು ಕಿಂಗ್ ಇಬ್ಬರು ತಮ್ಮ ಜೀವನದ ಹೀರೊಗಳು ಎಂದು ಒಬಾಮಾ ಪದೇಪದೆ ಹೇಳಿರುವುದಾಗಿ ಬ್ಲೇಕ್, ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯೊಗೊದಲ್ಲಿ ಮಹಾತ್ಮ ಗಾಂಧಿ ಸ್ಮಾರಕ ಉಪನ್ಯಾಸ ನೀಡುವಾಗ ಹೇಳಿದರು. ಮುಂಚೂಣಿಯಲ್ಲಿ ಭಾರತ, ಚೀನಾ ಸೌರ, ಪವನ ಹಾಗೂ ಜಲ ವಿದ್ಯುತ್ ಕ್ಷೇತ್ರಗಳು ಭವಿಷ್ಯದಲ್ಲಿ ದೇಶದ ಆರ್ಥಿಕತೆಗೆ ಪೂರಕವಾಗುವ ಹಾಗೂ ಉದ್ಯೋಗ ಅವಕಾಶಗಳನ್ನು ಸೃಷ್ಟಿಸುವ ಕ್ಷೇತ್ರಗಳಾಗಿದ್ದು, ಇದರಲ್ಲಿ ಭಾರತ, ಚೀನಾ, ಜರ್ಮನಿ ಮುಂಚೂಣಿಯಲ್ಲಿವೆ ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅಭಿಪ್ರಾಯಪಟ್ಟಿದ್ದಾರೆ.
ಅಮೆರಿಕದಲ್ಲಿ ಮರು ಬಳಕೆ ಇಂಧನ ಯೋಜನೆ ಅನುಷ್ಠಾನಕ್ಕೆ ಒಬಾಮಾ ಮುಂದಾಗಿದ್ದು, ಸೌರ ವಿದ್ಯುತ್ ಕ್ಷೇತ್ರದಲ್ಲಿ ಪರಿಣಾಮಕಾರಿ ತಂತ್ರ ಹುಡುಕುವಲ್ಲಿ ಬ್ರೈಟ್ ಸೋರ್ಸ್ ಎಂಬ ಕಂಪನಿ ಮುಂದೆ ಬಂದಿದೆ ಎಂದಿದ್ದಾರೆ. ಸುಮಾರು 1 ಸಾವಿರಕ್ಕೂ ಹೆಚ್ಚು ಮಂದಿ ಈ ಘಟಕದೊಂದಿಗೆ ಕೈ ಜೋಡಿಸಿ 1.40 ಲಕ್ಷ ಮನೆಗಳಿಗೆ ವಿದ್ಯುತ್ ಪೂರೈಸುವ ಮಹತ್ವಾಕಾಂಕ್ಷಿ ಯೋಜನೆ ಕೈಗೆತ್ತಿಕೊಂಡಿದೆ. ಇದು ವಿಶ್ವದಲ್ಲೇ ಅತ್ಯಂತ ಬೃಹತ್ ಯೋಜನೆ ಎಂದು ಒಬಾಮಾ ಬಣ್ಣಿಸಿದ್ದಾರೆ.












Click it and Unblock the Notifications