ರಾಜೀನಾಮೆ ನೀಡಲ್ಲ : ಕಟ್ಟಾ ಸುಬ್ರಮಣ್ಯ ನಾಯ್ಡು
ಬೆಂಗಳೂರು,
ಅ. 1 : ಇದು ನನ್ನ ಏಳಿಗೆ ಸಹಿಸದವರು ನಡೆಸಿದ ಷಡ್ಯಂತ್ರ. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ.ಹೋರಾಟದ ಹಿನ್ನೆಲೆಯಿಂದ ಬಂದವನು. ಇದರ ವಿರುದ್ಧ ಗೆಲ್ಲುವ ವಿಶ್ವಾಸ ನನ್ನಲ್ಲಿದೆ. ತಮ್ಮ ಪುತ್ರ ಕಟ್ಟಾ ಜಗದೀಶ್ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದ ಆರೋಪದ ಮೇಲೆ ಬಂಧನಕ್ಕೊಳಗಾದ ಹಿನ್ನೆಲೆಯಲ್ಲಿ ವಸತಿ, ಐಟಿ-ಬಿಟಿ ಸಚಿವ ಕಟ್ಟಾ ಸುಬ್ರಹ್ಮಣ್ಯನಾಯ್ಡು ನೀಡಿದ ಪ್ರತಿಕ್ರಿಯೆಯಿದು. id="toptextpromo">ಇದು
ಪೂರ್ವನಿಯೋಜಿತ ಸಂಚು. ರಾಜಕೀಯವಾಗಿ ನನ್ನನ್ನು ಮುಗಿಸಲು ಕೆಲವರು ಹವಣಿಸಿದ್ದಾರೆ. ಇದರ ಹಿಂದೆ ಯಾರಿದ್ದಾರೆ ಎಂಬುದು ಗೊತ್ತು. ಸದ್ಯದಲ್ಲೇ ಅವರ ಹೆಸರು ಬಹಿರಂಗಪಡಿಸುತ್ತೇನೆ. ಲೋಕಾಯುಕ್ತರು ತನಿಖೆ ನಡೆಸುತ್ತಿದ್ದಾರೆ. ಸತ್ಯಾಂಶ ಏನೆಂಬುದು ತನಿಖೆ ಬಳಿಕವೇ ಹೊರಬೀಳಲಿದೆ ಎಂದು ಹೇಳಿದರು. id='are-slot-1' class='oiad oi-axt oiadv'> id='top-searched-articles'>ರಾಜೀನಾಮೆ
ನೀಡುವಂತೆ ಮುಖ್ಯಮಂತ್ರಿಯೂ ಕೇಳಿಲ್ಲ. ಅವರೊಂದಿಗೆ ಈ ವಿಚಾರದಲ್ಲಿ ಮಾತುಕತೆಯನ್ನೂ ನಡೆಸಿಲ್ಲ. ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆ ಅವರ ಮೇಲೆ ನಂಬಿಕೆ ಇದ್ದು, ಅವರಿಂದ ನ್ಯಾಯ ಸಿಗುತ್ತದೆ ಎಂದು ನಂಬಿದ್ದೇನೆ ಎಂದು ತಿಳಿಸಿದರು. ಇದಕ್ಕೂ ಮುನ್ನ ತಮ್ಮ ಪುತ್ರ ಕಟ್ಟಾ ಜಗದೀಶ್ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ ಎಂಬ ವಿಷಯ ತಿಳಿಯುತ್ತಲೇ ಮುಖ್ಯಮಂತ್ರಿ ಯಡಿಯೂರಪ್ಪ ನಿವಾಸಕ್ಕೆ ದೌಡಾಯಿಸಿದ ಕಟ್ಟಾ ಸುಬ್ರಹ್ಮಣ್ಯನಾಯ್ಡು, ಮುಖ್ಯಮಂತ್ರಿ ಜತೆ ಕೆಲ ಹೊತ್ತು ಸಮಾಲೋಚಿಸಿದರು.











Click it and Unblock the Notifications