ಅ.9 ಮತ್ತು 10ರಂದು ಮಧುಮೇಹ ಮೇಳ
ಬೆಂಗಳೂರು,
ಸೆ. 30 : ಚೆನ್ನೈ ಮೂಲದ ಎಂ ವಿ ಸೆಂಟರ್ ಫಾರ್ ಡಯಾಬಿಟೀಸ್ ಸಂಸ್ಥೆಯು ಮಧುಮೇಹ ಕಾಯಿಲೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ನಗರದಲ್ಲಿ ಅ.9 ಮತ್ತು 10 ರಂದು ಮಧುಮೇಹ ಮೇಳ ಏರ್ಪಡಿಸಿದೆ. id="toptextpromo">ಹೊಸೂರು
ರಸ್ತೆಯಲ್ಲಿರುವ ಸತ್ಯಸಾಯಿ ಸಂಸ್ಕೃತ ಸದನದಲ್ಲಿ ನಡೆಯುವ ಮೇಳದಲ್ಲಿ ಮಧುಮೇಹ ಕುರಿತು ವಿಚಾರ ಸಂಕಿರಣ, ಪ್ರಾತ್ಯಕ್ಷಿಕೆ, ವಸ್ತು ಪ್ರದರ್ಶನ ನಡೆಯಲಿವೆ. ಒತ್ತಡದ ಜೀವನ ಶೈಲಿ ಮತ್ತು ಆಧುನಿಕ ಆಹಾರ ಪದ್ಧತಿಯಿಂದಾಗಿ ಮಧುಮೇಹಿಗಳ ಸಂಖ್ಯೆ ಹೆಚ್ಚುತ್ತಿದೆ. ಬೆಂಗಳೂರಿನಲ್ಲಿ ಶೇ.13ರಷ್ಟು ಮಂದಿ ಮಧುಮೇಹದಿಂದ ಬಳಲುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲೂ ಮಧುಮೇಹ ಜಾಸ್ತಿಯಾಗುತ್ತಿದೆ. id='are-slot-1' class='oiad oi-axt oiadv'> id='top-searched-articles'>ಈ
ಹಿನ್ನೆಲೆಯಲ್ಲಿ ಮಧುಮೇಹ ಸಾರ್ವಜನಿಕರಲ್ಲಿ ಕಾಯಿಲೆ ಬರದಂತೆ ಮುನ್ನೆಚ್ಚರಿಕೆ ವಹಿಸುವುದು ಹಾಗೂ ರೋಗಿಗಳು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡುವುದು ಈ ಮೇಳದ ಉದ್ದೇಶವಾಗಿದೆ ಎಂದು ಸಂಸ್ಥೆಯ ಕೋರಮಂಗಲ ಶಾಖೆಯ ನಿರ್ದೇಶಕಿ ಡಾ ವಿಷ್ಣುಪ್ರಿಯಾರೆಡ್ಡಿ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದ್ದಾರೆ.











Click it and Unblock the Notifications